ದೇವಸ್ಥಾನ, ಬಸ್​ ನಿಲ್ದಾಣ, ಶಾಲೆಗಳ ಬಳಿಯಿರುವ 717 ಮದ್ಯದಂಗಡಿ ಮುಚ್ಚಲು ಸಿಎಂ ವಿಜಯ್​ ಆದೇಶ!

ಚೆನ್ನೈ : ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದಳಪತಿ ವಿಜಯ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಾದ್ಯಂತ ದೇವಸ್ಥಾನಗಳು, ಶಾಲೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ ಒಟ್ಟು 717 ಸರ್ಕಾರಿ ಸ್ವಾಮ್ಯದ ಟಾಸ್ಮಾಕ್ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಅವರು ಆದೇಶಿಸಿದ್ದಾರೆ.

ಸದ್ಯ ರಾಜ್ಯದಲ್ಲಿ 4,765 ಚಿಲ್ಲರೆ ಮದ್ಯದ ಅಂಗಡಿಗಳನ್ನು ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ ನಿರ್ವಹಿಸುತ್ತಿದೆ. ಇವುಗಳಲ್ಲಿ, ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯೊಳಗೆ ಇರುವ ಅಂಗಡಿಗಳನ್ನು ಗುರುತಿಸಲು ನೂತನ ಸಿಎಂ ನಿರ್ದೇಶನ ಮಾಡಿದ್ದರು. ಅದರಂತೆ 717 ಚಿಲ್ಲರೆ ಮದ್ಯದ ಅಂಗಡಿಗಳು ಗುರುತಿಸಲಾಗಿದೆ.

ಗುರುತಿಸಲಾದ 717 ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ, ಪೂಜಾ ಸ್ಥಳಗಳ ಬಳಿ 276 ಅಂಗಡಿಗಳು, ಶಿಕ್ಷಣ ಸಂಸ್ಥೆಗಳ ಬಳಿ 186 ಅಂಗಡಿಗಳು ಮತ್ತು ಬಸ್ ನಿಲ್ದಾಣಗಳ ಬಳಿ 255 ಅಂಗಡಿಗಳನ್ನು ಗುರುತಿಸಲಾಗಿದೆ. ತಮಿಳುನಾಡು ಸರ್ಕಾರಕ್ಕೆ ಟಿಎಎಸ್​ಎಂಎಸಿ ಮದ್ಯದಂಗಡಿಗಳು ಹೆಚ್ಚಿನ ಆದಾಯವನ್ನು ತರುತ್ತಿದ್ದು, ಈ ನಡುವೆ ಈ ಹಲವಾರು ಚಿಲ್ಲರೆ ಅಂಗಡಿಗಳನ್ನು ಮುಚ್ಚುವಂತೆ ಸಿಎಂ ವಿಜಯ್ ಆದೇಶ ನೀಡಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಶೆಡ್​ಗೆ ಬೆಂಕಿ ಬಿದ್ದು 2 ಮಕ್ಕಳು ಸಜೀವ ದಹನ!

Btv Kannada
Author: Btv Kannada

Leave a Comment

Read More