“ನಾದಯೋಗಿ ಡಾ. ರಾಜ್​ಕುಮಾರ್” ಪುಸ್ತಕ ಅನಾವರಣ!

ವರನಟ ಡಾ. ರಾಜ್​ಕುಮಾರ್ ಅವರು ಅದ್ಭುತ ನಟರಷ್ಟೇ ಅಲ್ಲ, ಅದ್ಭುತ ಗಾಯಕರೂ ಕೂಡ‌. ಅವರ ಸುಮಧುರ ಕಂಠಕ್ಕೆ ಮನ ಸೋಲದವರೆ ಇಲ್ಲ. ಅಂತಹ ಅಪ್ರತಿಮ ಕಲಾವಿದ ಡಾ. ರಾಜ್​ಕುಮಾರ್ ಅವರ ಸಂಗೀತ ಜ್ಞಾನವನ್ನು ಪರಿಚಯಿಸುವ “ನಾದಯೋಗಿ ಡಾ. ರಾಜ್​ಕುಮಾರ್” ಎಂಬ ವಿಶೇಷ ಪುಸ್ತಕವನ್ನು ಆರ್ ಮಂಜುನಾಥ್ ಚವಾಣ್ ಹಾಗೂ ಡಾ. ಸೌಮ್ಯ ಮಂಜುನಾಥ್ ಚವಾಣ್ ಬರೆದಿದ್ದಾರೆ.

ಇತ್ತೀಚೆಗೆ ಈ ಪುಸ್ತಕದ ಅನಾವರಣ ಸಮಾರಂಭ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನೆರವೇರಿತು. ಡಾ. ರಾಜ್​ಕುಮಾರ್ ಪುತ್ರಿ ಪೂರ್ಣಿಮಾ ರಾಮ್​ಕುಮಾರ್ ಪುಸ್ತಕವನ್ನು ಅನಾವರಣ ಮಾಡಿದರು. ಡಾ. ರಾಜ್​ಕುಮಾರ್ ಸಹೋದರ ವರದಪ್ಪ ಅವರ ಪುತ್ರಿ ಡಾ. ಲತಾ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಲಹರಿ ಸಂಸ್ಥೆಯ ಮನೋಹರ ನಾಯ್ಡು, ಲಹರಿ ವೇಲು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ‌

ಕಾವೇರಿ ಕನ್ನಡ ಸಂಘ ಧಾರ್ ಎಸ್ ಸಲಾಂ ತಾಂಜಾನಿಯಾ ಪೂರ್ವ ಆಫ್ರಿಕಾ ಪ್ರತಿನಿಧಿ ಗೌಡ ಅವರು ಈ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಣ್ಮಣಿ ಡಾಕ್ಟರ್ ರಾಜ್​ಕುಮಾರ್ ಅವರ ಪುಸ್ತಕ ಪೂರ್ವ ಆಫ್ರಿಕಾಕ್ಕೆ ತಲುಪುತ್ತಿರುವುದು ನಾಡು ನುಡಿಯ ಹೆಮ್ಮೆಯ ಪ್ರತೀಕವಾಗಿದೆ.

ಪುಸ್ತಕ ಅನಾವರಣ ಮಾಡಿ ಮಾತನಾಡಿದ ಡಾ. ರಾಜ್​ಕುಮಾರ್ ಪುತ್ರಿ ಪೂರ್ಣಿಮಾ ರಾಮ್​ಕುಮಾರ್, ನಮ್ಮ ತಂದೆಗೆ ಸಂಗೀತವೆಂದರೆ ಪ್ರಾಣ, ಗಜಲ್ ಬಹಳ ಇಷ್ಟ. ನಮ್ಮ ಮನೆಯಲ್ಲಿ ಎಲ್ಲರೂ ಸಂಗೀತ ಪ್ರೇಮಿಗಳೆ. ನಮ್ಮ ಕುಟುಂಬಕ್ಕೆ ಆತ್ಮೀಯರಾದ ಆರ್. ಮಂಜುನಾಥ್ ಹಾಗೂ ಸೌಮ್ಯ ಮಂಜುನಾಥ್ ಅವರು ಅಪ್ಪಾಜಿ ಅವರಿಗಿದ್ದ ಸಂಗೀತದ ಜ್ಞಾನವನ್ನು ಪರಿಚಯಿಸುವ ಈ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕವನ್ನು ಅನಾವರಣ ಮಾಡಿದ್ದು ಬಹಳ ಖುಷಿಯಾಗಿದೆ ಎಂದರು. ‌‌

1992 ಜೀವನ ಚೈತ್ರ ಚಿತ್ರದ ಸಂದರ್ಭದಲ್ಲಿ ಡಾ. ರಾಜ್​ಕುಮಾರ್ ಹಾಗೂ ಪಾರ್ವತಮ್ಮ ರಾಜ್​ಕುಮಾರ್ ಅವರ ಪರಿಚಯವಾಯಿತು. ಆನಂತರ ಅವರೊಂದಿಗೆ ಹತ್ತಿರದ ಒಡನಾಟವಿತ್ತು. ಡಾ. ರಾಜ್​ಕುಮಾರ್ ಅವರು ಬಹಳ ದೊಡ್ಡ ಸಂಗೀತ ಪ್ರೇಮಿ. ಅವರಿಗೆ ಸಂಗೀತದ ಎಲ್ಲಾ ಪ್ರಕಾರಗಳು ಗೊತ್ತಿತ್ತು. ಅವರ ಸಹೋದರ ವರದಪ್ಪ ಅವರು ಕೂಡ ಸಂಗೀತದ ಬಗ್ಗೆ ಅಪಾರ ಜ್ಞಾನವುಳ್ಳವರಾಗಿದ್ದರು. ಡಾ. ರಾಜ್​ಕುಮಾರ್ ಅವರಿಗೆ ಕರ್ನಾಟಕ ಸಂಗೀತ ಅಷ್ಟೇ ಅಲ್ಲದೆ ಹಿಂದೂಸ್ತಾನಿ ಸಂಗೀತ ಕೂಡ ಪ್ರಿಯ. ಅದರಲ್ಲೂ ಗಜಲ್ ಎಂದರೆ ತುಂಬಾ ಇಷ್ಟ. ಎಪ್ಪತ್ತು ವರ್ಷಗಳಾಗಿದ್ದರೂ ಸಂಗೀತದಲ್ಲಿ ತಮಗೆ ತಿಳಿಯದ ಕೆಲವು ಸಂಗತಿಗಳ ಬಗ್ಗೆ ತಿಳಿದವರಿಂದ ತಿಳಿದುಕೊಳ್ಳುವ ಉತ್ಸಾಹ. ಇದನೆಲ್ಲಾ ಹತ್ತಿರದಿಂದ ಕಂಡಿದ್ದ ನಾನು ಹಾಗೂ ನನ್ನ ಶ್ರೀಮತಿ ಸೌಮ್ಯ, ಡಾ. ರಾಜ್​ಕುಮಾರ್ ಅವರಿಗಿದ್ದ ಸಂಗೀತ ಜ್ಞಾನವನ್ನು ಪುಸ್ತಕ ರೂಪದಲ್ಲಿ ಎಲ್ಲರಿಗೂ ತಿಳಿಸಬೇಕು ಎಂಬ ಉದ್ದೇಶದಿಂದ “ನಾದಯೋಗಿ ಡಾ. ರಾಜ್​ಕುಮಾರ್” ಎಂಬ ಪುಸ್ತಕವನ್ನು ಕನ್ನಡ ಹಾಗೂ ಇಂಗ್ಲೀಷ್​ನಲ್ಲಿ ಬರೆದಿದ್ದೇವೆ ಪುಸ್ತಕ ಲೇಖಕ ಆರ್ ಮಂಜುನಾಥ್ ಚವಾಣ್ ತಿಳಿಸಿದರು.

ರಾಜ್​ಕುಮಾರ್ ಅವರ ಪುತ್ರಿ ಪೂರ್ಣಿಮಾ ರಾಮ್ ಕುಮಾರ್ ಅವರು ಈ ಪುಸ್ತಕ ಅನಾವರಣ ಮಾಡಿಕೊಟ್ಟಿದ್ದು ಬಹಳ ಸಂತೋಷವಾಗಿದೆ. ಅವರಿಗೆ ಹಾಗೂ ಆಗಮಿಸಿರುವ ಗಣ್ಯರಿಗೆ ಧನ್ಯವಾದ. 7.5.1954 ರಾಜ್​ಕುಮಾರ್ ಅಭಿನಯದ ಮೊದಲ ಚಿತ್ರ “ಬೇಡರ ಕಣ್ಣಪ್ಪ” ಬಿಡುಗಡೆಯಾಗಿತ್ತು. ಕಾಕತಾಳೀಯವಾಗಿ ಇಂದು 7.5.2026 ನಮ್ಮ “ನಾದಯೋಗಿ ಡಾ. ರಾಜ್​ಕುಮಾರ್” ಪುಸ್ತಕ ಅನಾವರಣವಾಗಿದೆ ಎಂದು ಪುಸ್ತಕ ಲೇಖಕ ಆರ್ ಮಂಜುನಾಥ್ ಚವಾಣ್ ಹೇಳಿದರು.

ಇದನ್ನೂ ಓದಿ : ಜಿಗಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ – 250 ಕೆಜಿ ಗಾಂಜಾ ವಶಕ್ಕೆ!

Btv Kannada
Author: Btv Kannada

Leave a Comment

Read More