ಡಿ. ಸುಧಾಕರ್ ಆರೋಗ್ಯದ ಬಗ್ಗೆ HDK ಹೇಳಿಕೆ – ಸಚಿವರ ಪುತ್ರ ತೀವ್ರ ಅಸಾಮಾಧಾನ!

ಬೆಂಗಳೂರು : ಸಚಿವ ಡಿ. ಸುಧಾಕರ್ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿ. ಸುಧಾಕರ್ ಅವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ನಾನಾ ರೀತಿಯ ವದಂತಿಗಳು ಹರಿದಾಡುತ್ತಿತ್ತು. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. 

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಯನ್ನು ಸಚಿವ ಡಿ. ಸುಧಾಕರ್ ಅವರ ಕುಟುಂಬದವರು ಖಂಡಿಸಿದ್ದಾರೆ. ಇದೀಗ ಡಿ. ಸುಧಾಕರ್ ಅವರ ಪುತ್ರ ಸುಹಾಸ್ ಸುಧಾಕರ್ ಪ್ರತಿಕ್ರಿಯಿಸಿ, ಮೊನ್ನೆ ಚಿತ್ರದುರ್ಗದಲ್ಲಿ ಕೇಂದ್ರ ಸಚಿವರು ನಮ್ಮ ತಂದೆಯ ಅನಾರೋಗ್ಯವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ. ತಂದೆಯ ಅನಾರೋಗ್ಯದ ಮಧ್ಯೆ ರಾಜಕೀಯಕ್ಕಾಗಿ ಹೆಬ್ಬೆಟ್ಟು ವಿಚಾರವನ್ನು ಬಳಸಿಕೊಂಡಿರೋದು ನಮ್ಮ ಕುಟುಂಬಕ್ಕೆ ನೋವಾಗಿದೆ ಎಂದಿದ್ದಾರೆ.

ಮಾರ್ಚ್​ 26 ರಂದು ಅನಾರೋಗ್ಯದಿಂದ ಬಳಲುತ್ತಿದ್ದ ನಮ್ಮ ತಂದೆಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡ್ತೇವೆ. ಈಗ ನಮ್ಮ ತಂದೆ ಚಿಕಿತ್ಸೆಗೆ ಸ್ಪಂದಿಸ್ತಿದ್ದಾರೆ ಎಂದು ಸುಹಾಸ್ ಸುಧಾಕರ್ ಹೇಳಿದ್ದಾರೆ.

ಈಗಾಗಲೇ ತಂದೆಯ ಆರೋಗ್ಯ ವಿಚಾರಿಸೋದಕ್ಕಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಅನೇಕ ಶಾಸಕರು, ಸಚಿವರು ಬಂದಿದ್ದರು. ತಂದೆಯವರು ಆದಷ್ಟು ಬೇಗ ಗುಣಮುಖರಾಗಿ ಬರ್ತಾರೆ ಅನ್ನೋ ನಂಬಿಕೆ ನಮಗಿದೆ ಎಂದಿದ್ದಾರೆ.

ಇದನ್ನೂ ಓದಿ : ”ಕೊರಗ್ಲಾ ತನಿಯಾ” ಮತ್ತು “ಕನ” ಚಿತ್ರಕ್ಕೆ ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಚಾಲನೆ!

Btv Kannada
Author: Btv Kannada

Leave a Comment

Read More