ಕೊಪ್ಪಳ : ಸರ್ಕಾರಿ ಸಭೆಯಲ್ಲಿ ಸಚಿವ ಶಿವರಾಜ್ ತಂಗಡಗಿ ಪುತ್ರನಿಗೆ ರಾಜಮರ್ಯಾದೆ ನೀಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಡೆದಿದೆ. ವೇದಿಕೆಯಲ್ಲಿ ಸಚಿವರ ಪುತ್ರನಿಗೆ ಚೇರ್ ಹಾಕಿ ಕೂರಿಸಿದ್ದು, ಅಧಿಕಾರಿಗಳಿಗೆ ಕಿಮ್ಮತ್ತಿಲ್ಲ ಬೆಲೆ ಕೊಡಲಿಲ್ಲ.

ಮಂತ್ರಿ ಪುತ್ರನಿಗೆ ರಾಜಮರ್ಯಾದೆ ಕೊಟ್ಟಿದ್ದಾರೆ. ಆದರೆ ಅದೇ ಸಭೆಯಲ್ಲಿ ಭಾಗವಹಿಸಿದ್ದ ತಹಶೀಲ್ದಾರ್ ವಿಶ್ವನಾಥ್ ಮತ್ತು ತಾ.ಪಂ ಇಒ ರಾಜಶೇಖರ್ ಅವರು ಚೇರ್ ಇಲ್ಲದೆ ನಿಂತುಕೊಂಡಿದ್ದರು.

ಒಬ್ಬ ಸಚಿವರ ಪುತ್ರನಿಗೆ ಸಿಕ್ಕ ಗೌರವ, ಅಧಿಕಾರಿಗಳಿಗೆ ಸಿಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಧಿಕಾರಿಗಳು ಸಭೆಯಲ್ಲಿ ನಿಂತುಕೊಂಡೇ ಭಾಗವಹಿಸಿದ ಘಟನೆ ಚರ್ಚೆಗೆ ಗ್ರಾಸವಾಗಿದೆ. ಇದೀಗ ಜಿಲ್ಲಾಡಳಿತದ ಈ ವರ್ತನೆಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಗೋಲ್ಡನ್ ಸ್ಟಾರ್ ಗಣೇಶ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ!
Author: Btv Kannada
Post Views: 212








