ಶ್ರೀದೇವಿ ಸತ್ತ ಜಾಗದಲ್ಲೇ ಆತ್ಮದೊಂದಿಗೆ ಮಾತುಕತೆ – ನಟಿ ಸಾವಿನ ರಹಸ್ಯ ಬಯಲು!

ಭಾರತೀಯ ಚಿತ್ರರಂಗದ ‘ಲೇಡಿ ಸೂಪರ್‌ಸ್ಟಾರ್’ ಶ್ರೀದೇವಿ ಅವರು ನಮ್ಮನ್ನು ಅಗಲಿ ವರ್ಷಗಳೇ ಕಳೆದರೂ, ಅವರ ಸಾವಿನ ಸುತ್ತಲಿನ ನಿಗೂಢತೆ ಮಾತ್ರ ಇಂದಿಗೂ ಹಲವರಲ್ಲಿ ಕುತೂಹಲ ಮೂಡಿಸುತ್ತಲೇ ಇದೆ. ಬಾತ್‌ಟಬ್‌ನಲ್ಲಿ ಬಿದ್ದು ಅವರು ಸಾವನ್ನಪ್ಪಿದ ರೀತಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದೀಗ ಈ ಬಗ್ಗೆ ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್ ಸೌರಭ್ ಪೂನಿಯಾ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.

ಸೌರಭ್ ಪೂನಿಯಾ ಈ ಬಗ್ಗೆ ಮಾತನಾಡಿ, ಆರಂಭದಲ್ಲಿ ನಾನು ತನಿಖೆ ಮಾಡಿದಾಗ ಶ್ರೀದೇವಿ ಆತ್ಮ ಏನೂ ಹೇಳಲಿಲ್ಲ, ಪದೇ ಪದೇ ಕೇಳಿದೆ. ಅದಾದ ಬಳಿಕ ನಾನು ಯಾರು ನಿಮಗೆ ಹೊಡೆದು ಬಾತ್‌ಟಬ್‌ನಲ್ಲಿ ಮುಳುಗಿಸಿದ್ದಾರೆ ಎಂದು ಪ್ರಶ್ನೆ ಕೇಳಿದೆ. ಆಗ ಅವರ ಆತ್ಮ ಬೋನಿ ಕಪೂರ್‌ ಎಂದು ಸ್ಪಷ್ಟವಾಗಿ ಹೇಳಿದೆ. ನಾನು ಇದನ್ನೆಲ್ಲ ಹೇಳಿದರೆ ಯಾರೂ ನಂಬೋದಿಲ್ಲ, ನನ್ನ ಬಳಿ ಆಡಿಯೋ ರೆಕಾರ್ಡ್‌ ಕೂಡ ಇದೆ ಎಂದು ಹೇಳಿದ್ದಾರೆ.

ಶ್ರೀದೇವಿ ಅವರು ಕನ್ನಡದಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ‘ಭಕ್ತ ಕುಂಬಾರ’ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಸುಮಾರು 15 ವರ್ಷಗಳ ಬ್ರೇಕ್‌ ಬಳಿಕ, 2012 ರಲ್ಲಿ ‘ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾ ಮೂಲಕ ಕಾಣಿಸಿಕೊಂಡಿದ್ದರು. ಅವರ ಕೊನೆಯ ಚಿತ್ರ ‘ಮಾಮ್’ (MOM) ಗಾಗಿ ಮರಣೋತ್ತರ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಲಭಿಸಿತು. ಭಾರತ ಸರ್ಕಾರ ಅವರಿಗೆ 2013 ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತು.

ದುಬೈನಲ್ಲಿ ಏನು ನಡೆಯಿತು?

ಶ್ರೀದೇವಿ ಅವರು ಬೋನಿ ಕಪೂರ್ ಸಂಬಂಧಿಕರಾದ ಮೋಹಿತ್ ಮಾರ್ವಾ ಮದುವೆಯಲ್ಲಿ ಭಾಗವಹಿಸಲು ದುಬೈಗೆ ಹೋಗಿದ್ದರು. ಬಾತ್‌ಟಬ್‌ನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾದರು. ದುಬೈ ಪೊಲೀಸರು ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ, ಶ್ರೀದೇವಿ ಅವರು ಬಾತ್‌ಟಬ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಅವರ ದೇಹದಲ್ಲಿ ಮದ್ಯದ ಅಂಶವೂ ಇತ್ತಂತೆ.

ಇದನ್ನೂ ಓದಿ : ಲೆನ್ಸ್‌ಕಾರ್ಟ್ ವಿವಾದ – ಭಾರಿ ಆಕ್ರೋಶದ ಬೆನ್ನಲ್ಲೇ ಕ್ಷಮೆಯಾಚನೆ.. ಸಿಬ್ಬಂದಿ ಮಾಂಗಲ್ಯ ಧರಿಸಲು ಸಮ್ಮತಿ!

Btv Kannada
Author: Btv Kannada

Leave a Comment

Read More

Read More