‘ಹೊಂಬಾಳೆ ಫಿಲ್ಮ್ಸ್’ನಿಂದ ಮತ್ತೊಂದು ಸಿನಿಮಾ ಘೋಷಣೆ – ನೂತನ ಚಿತ್ರದ ಶೀರ್ಷಿಕೆ ನಾಳೆ ಅನಾವರಣ!

ರಾಜಕುಮಾರ, ಕೆಜಿಎಫ್, ಕಾಂತಾರ ಹಾಗೂ ಸಲಾರ್ ನಂತಹ ದೃಶ್ಯಕಾವ್ಯಗಳ ಮೂಲಕ ಭಾರತೀಯ ಚಿತ್ರರಂಗದ ಗತಿಯನ್ನೇ ಬದಲಿಸಿ, ಕಥೆ ಮತ್ತು ಮೇಕಿಂಗ್‌ಗೆ ಹೊಸ ವ್ಯಾಖ್ಯಾನ ಬರೆದ ಹೊಂಬಾಳೆ ಫಿಲ್ಮ್ಸ್, ಈಗ ತನ್ನ ಮುಂದಿನ ಬಹುನಿರೀಕ್ಷಿತ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದೆ.

‘ಮಹಾವತಾರ ನರಸಿಂಹ’ ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಅದೇ ಸೃಜನಶೀಲ ತಂಡವು ಈಗ ಮತ್ತೆ ಒಂದಾಗುತ್ತಿದ್ದು, ಮತ್ತೊಂದು ಅದ್ಭುತ ಕಥಾಹಂದರವನ್ನು ತೆರೆಯ ಮೇಲೆ ತರಲು ಸಜ್ಜಾಗಿದೆ. ವಿಶೇಷವೆಂದರೆ, ವಿಭಿನ್ನ ದೃಷ್ಟಿಕೋನ ಹಾಗೂ ಹೊಸತನದ ಕಥೆಯನ್ನು ಒಳಗೊಂಡಿರುವ ಈ ಚಿತ್ರವನ್ನು ಅಶ್ವಿನ್ ಅವರು ನಿರ್ದೇಶಿಸಲಿದ್ದಾರೆ.

ಸಿನಿಮಾ ಪ್ರೇಕ್ಷಕರಲ್ಲಿ ಈಗಾಗಲೇ ಈ ಪ್ರಾಜೆಕ್ಟ್ ಬಗ್ಗೆ ಭಾರೀ ಕುತೂಹಲ ಗರಿಗೆದರಿದ್ದು, ಭಾರತೀಯ ಚಿತ್ರರಂಗದ ಕಣ್ಣುಗಳು ಹೊಂಬಾಳೆ ಫಿಲ್ಮ್ಸ್‌ನ ಈ ನೂತನ ಘೋಷಣೆಯ ಮೇಲಿದೆ. ವಿಭಿನ್ನ ದೃಶ್ಯ ವೈಭವದೊಂದಿಗೆ ಮೂಡಿಬರಲಿರುವ ಈ ಚಿತ್ರದ ಶೀರ್ಷಿಕೆ ನಾಳೆ ಅಧಿಕೃತವಾಗಿ ಪ್ರಕಟವಾಗಲಿದೆ.

ಇದನ್ನೂ ಓದಿ : ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಟೈಟಲ್ ಸಾಂಗ್ ರಿಲೀಸ್ – ಸಿನಿಮಾಗೆ ಸಿಎಂ ಸಿದ್ದರಾಮಯ್ಯ ಸಾಥ್!

Btv Kannada
Author: Btv Kannada

Leave a Comment

Read More

Read More