ಮಂತ್ರಾಲಯದ ಬಳಿ ಭೀಕರ ಅಪಘಾತ – 8 ಮಂದಿ ದುರ್ಮರಣ!

ರಾಯಚೂರು : ಬುಲೆರೋ ವಾಹನಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಸಮೀಪದ ಚಿಲಕನಡೋಣದಲ್ಲಿ ನಡೆದಿದೆ. ಚಿಕ್ಕಮಗಳೂರಿನಿಂದ ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಬರುತ್ತಿದ್ದ ಬುಲೆರೋ ವಾಹನಕ್ಕೆ ಎದುರಿನಿಂದ ಬಂದ ಫ್ಲೈಯಾಶ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ.

ಈ ಘಟನೆ ಬೆಳಗಿನ ಜಾವ ಸುಮಾರು 4 ಗಂಟೆಗೆ ನಡೆದಿದೆ. ಅಮೃತ, ತೇಜಶ್ವಿನಿ, ಧನ್ಯ, ದೀಪಿಕ, ದಿಕ್ಷಿತ, ಪ್ರತಾಪ್, ಕುಮಾರ್, ಯಶೋದಮ್ಮ ಮೃತ ದುರ್ದೈವಿಗಳು. ಬುಲೆರೋ ವಾಹನದಲ್ಲಿ ಹಾಸನ ಮತ್ತು ಚಿಕ್ಕಮಗಳೂರು ಮೂಲದ ಒಟ್ಟು 18 ಜನರು ಪ್ರಯಾಣಿಸುತ್ತಿದ್ದರು.

ಭೀಕರ ಅಪಘಾತದಲ್ಲಿ 9 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಕರ್ನೂಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂತ್ರಾಲಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ವಚನಾನಂದ ಸ್ವಾಮೀಜಿ ಮಠವನ್ನು ಬಿಟ್ಟು ಹೋದ್ರೆ ಒಳ್ಳೇದು – ಪಿ.ಡಿ. ಶಿರೂರು!

Btv Kannada
Author: Btv Kannada

Leave a Comment

Read More

Read More