ತೆಲುಗು ಚಿತ್ರರಂಗ ಭಾರಿ ಬಜೆಟ್, ಅದ್ಧೂರಿ ಮೇಕಿಂಗ್‌ಗೆ ಫೇಮಸ್. ಆದರೆ, ದೊಡ್ಡ ಮಟ್ಟದ ಬಜೆಟ್ ಸಿನಿಮಾಗಳೆಲ್ಲಾ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡುವುದಿಲ್ಲ. ಇದರಿಂದಾಗಿ ನಿರ್ಮಾಪಕರಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತದೆ. ಈ ಸಾಲಿಗೆ ಟಾಲಿವುಡ್‌ನ ಐದು ಸಿನಿಮಾಗಳು ಸೇರಿವೆ.

ಟಾಲಿವುಡ್‌ನಲ್ಲಿ ಥಿಯೇಟ್ರಿಕಲ್ ವ್ಯವಹಾರದಲ್ಲಿ ಅತಿ ಹೆಚ್ಚು ನಷ್ಟ ತಂದ ಸಿನಿಮಾ ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’. ಈ ಚಿತ್ರಕ್ಕೆ ಬರೋಬ್ಬರಿ 125 ಕೋಟಿ ರೂಪಾಯಿ ನಷ್ಟವಾಯ್ತು. ಇದು ದೊಡ್ಡ ಡಿಸಾಸ್ಟರ್ ಎನಿಸಿಕೊಂಡಿತು.

ಟಾಲಿವುಡ್‌ನ ಅತಿದೊಡ್ಡ ಡಿಸಾಸ್ಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ರಾಮ್ ಚರಣ್ ಅವರ ‘ಗೇಮ್ ಚೇಂಜರ್’ ಚಿತ್ರವಿದೆ. ಈ ಸಿನಿಮಾದಿಂದ 120 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ.

ಇನ್ನು ತೆಲುಗಿನಲ್ಲಿ ಭಾರೀ ನಷ್ಟ ತಂದ ಮತ್ತೊಂದು ಸಿನಿಮಾ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’. ಈ ಚಿತ್ರದಿಂದ ವಿತರಕರು ಸುಮಾರು 90 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಹಾಗೆಯೇ ಟಾಲಿವುಡ್‌ನಲ್ಲಿ ಅತಿ ಹೆಚ್ಚು ನಷ್ಟ ಮಾಡಿದ ಚಿತ್ರಗಳ ಪೈಕಿ 4ನೇ ಸ್ಥಾನದಲ್ಲಿ ‘ಆಚಾರ್ಯ’ ಇದೆ. ಚಿರಂಜೀವಿ ಮತ್ತು ರಾಮ್ ಚರಣ್ ಒಟ್ಟಿಗೆ ನಟಿಸಿದ್ದ ಈ ಸಿನಿಮಾದಿಂದ ಸುಮಾರು 90 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.

ಟಾಪ್ 5 ಡಿಸಾಸ್ಟರ್‌ಗಳ ಲಿಸ್ಟ್‌ನಲ್ಲಿರುವ ಮತ್ತೊಂದು ಸಿನಿಮಾ ಪವನ್ ಕಲ್ಯಾಣ್ ಅಭಿನಯದ ‘ಉಸ್ತಾದ್ ಭಗತ್ ಸಿಂಗ್’. ಈ ಚಿತ್ರವು ವಿತರಕರಿಗೆ ಸುಮಾರು 80 ಕೋಟಿ ರೂಪಾಯಿ ನಷ್ಟವನ್ನುಂಟು ಮಾಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : http://RCB vs CSK ಪಂದ್ಯದ ಟಿಕೆಟ್ ಹೆಸರಲ್ಲಿ ವಂಚನೆ – 1.46 ಲಕ್ಷ ಕಳೆದುಕೊಂಡ ಟೆಕ್ಕಿ!









