ಕನ್ನಡ ಸಿನಿಮಾ ಮೇಲೆ ರಶ್ಮಿಕಾಗೆ ದಿಢೀರ್ ಲವ್! ಪೋಸ್ಟ್​ನಲ್ಲಿ ಏನಿದೆ?

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​ ಸ್ಟಾರ್ ಹೀರೋಯಿನ್. ತಮ್ಮ ಮದುವೆ ಬಳಿಕ ಬ್ರೇಕ್ ಪಡೆಯದೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ದಿಢೀರನೆ ಕನ್ನಡ ಸಿನಿಮಾವೊಂದಕ್ಕೆ ಶುಭ ಕೋರಿ ಪೋಸ್ಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದಲ್ಲಿ ‘ಯಯಾತಿ ಯಯಾತಿ’ ಎಂಬ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ. ಸುನಿ ಟ್ವಿಟ್ಟರ್‌ನಲ್ಲಿ ಸಾಂಗ್ ಲಿಂಕ್ ಶೇರ್ ಮಾಡಿದ್ದಾರೆ. “ಬಗೆದಷ್ಟು ಬಾಂಧವ್ಯ.. ಮೊಗೆದಷ್ಟೂ ರಸಕಾವ್ಯ.. ಸವಿಯೋಣ ಬಾ ಶೃಂಗಾರ.. ಇಟ್ಟಷ್ಟು ಚುಕ್ಕಿಯ” ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ರೀ-ಟ್ವೀಟ್ ಮಾಡಿ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ.

“ಇಡೀ ‘ಮೋಡ ಕವಿದ ವಾತಾವರಣ’ ಚಿತ್ರತಂಡಕ್ಕೆ ಶುಭವಾಗಲಿ.. ಸಿಂಪಲ್ ಸುನಿ ಸರ್ ಆಲ್‌ದಿ ಬೆಸ್ಟ್.. ಬಹಳ ಪ್ರೀತಿಯಿಂದ” ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. “ಏನ್ ಮೇಡಂ ಸಡನ್ ಆಗಿ ಕನ್ನಡ ಸಿನಿಮಾ ಬಗ್ಗೆ ಟ್ವೀಟ್ ಮಾಡಿಬಿಟ್ಟಿದ್ದೀರಾ?” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ‘ಚಮಕ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಒಳ್ಳೆ ಪಾತ್ರ ಸಿಕ್ಕಿತ್ತು. ಸಿನಿಮಾ ಶತದಿನೋತ್ಸವ ಆಚರಿಸಿ ರಶ್ಮಿಕಾಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಅದರ ಬೆನ್ನಲ್ಲೇ ತೆಲುಗು ಸಿನಿಮಾಗಳತ್ತ ಆಕೆ ಮುಖ ಮಾಡಿದ್ದರು.

ಇದನ್ನೂ ಓದಿ : http://ರಾಜ್ಯಕ್ಕೆ ಮತ್ತೆ ವರುಣನ ಎಂಟ್ರಿ – ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ​!

Btv Kannada
Author: Btv Kannada

Leave a Comment

Read More