ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಕ್ರಿಕೇಟರ್ ಶ್ರೇಯಾಂಕ ಪಾಟೀಲ್ನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ವೈರಲ್ ಸುದ್ದಿಗೆ ನಟ ನಿರಂಜನ್ ಟಾಂಗ್ ಕೊಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ನಟ ನಿರ್ದೇಶಕ ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಹಿರಿಯ ಪುತ್ರ ಹಾಗೂ ನಟನಾಗಿರುವ ನಿರಂಜನ್ ಜೊತೆ, ಕ್ರಿಕೇಟರ್, RCB ಗರ್ಲ್ ನಮ್ಮ ಕನ್ನಡತಿ ಶ್ರೇಯಾಂಕ ಪಾಟೀಲ್ ವಿವಾಹ ನಡೆಯಲಿದೆ. ಶೀಘ್ರದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಸೋಶಿಯಲ್ ಮೀಡಿಯಾದಲ್ಲಿ ಉಪೇಂದ್ರ ಅವರ ಕುಟುಂಬದ ಸೊಸೆಯಾಗಲಿದ್ದಾರೆ ಶ್ರೇಯಾಂಕ ಪಾಟೀಲ್, IPL ನಲ್ಲಿ ಮಿಂಚಿದ ಕರ್ನಾಟಕದ ಪುಟ್ಟಿ ಇದೀಗ ಉಪ್ಪಿ ಅಣ್ಣನ ಮಗ ನಿರಂಜನ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದಾರೆ. ಖುದ್ದು ಉಪೇಂದ್ರ ಅವರ ಮೂಲಕ ನಿರಂಜನ್ ಹಾಗೂ ಶ್ರೇಯಾಂಕ ಪಾಟೀಲ್ ಲವ್ ಸ್ಟೋರಿ ರಿವೀಲ್ ಆಗಿದ್ದು, ಇದೀಗ ಈ ಜೋಡಿ ಇದೇ ವರ್ಷ ಸಿಹಿಸುದ್ದಿ ಕೊಡುವ ಸಾಧ್ಯತೆ ಇದೆ ಎಂದು ಪೋಸ್ಟ್ ಮಾಡಲಾಗಿತ್ತು.

ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನಟ ನಿರಂಜನ್ ಸುಧೀಂದ್ರ ಇದಕ್ಕೆ ಪ್ರತಿಕ್ರಿಯಿಸಿ ತಿರುಗೇಟು ಕೊಟ್ಟಿದ್ದಾರೆ. ‘ಅಡ್ಮಿನ್ ಇನ್ವಿಟೇಶನ್ ಬಂದ್ರೆ ನಮಗೂ ಕಳುಹಿಸಿ ಕೊಡು ಗುರು. ಮೊದಲಿಗೆ ಫಾಕ್ಟ್ ಚೆಕ್ ಮಾಡಿ, ನಂತರ ಪೋಸ್ಟ್ ಮಾಡಿ. ಈ ರೀತಿಯಾಗಿ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ. Thank you for your attention to this matter! ಎಂದು ನಿರಂಜನ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ನಾಳೆ RCB-CSK ಪಂದ್ಯ – ಫ್ಯಾನ್ಸ್ಗೆ ಪೊಲೀಸ್ ಆಯುಕ್ತರಿಂದ ಮಹತ್ವದ ಸೂಚನೆ!









