ಕಾಲ ಬದಲಾದಂತೆ ಆಟ ಆಡುವ ವೈಖರಿ ಬದಲಾಗುತ್ತಿದೆಯೇ ಹೊರತು ಆಟ ಆಡುವವನ ಮನಸ್ಥಿತಿ ಎಂದಿಗೂ ಬದಲಾಗಿಲ್ಲ ಎಂಬ ಸಂದೇಶವನ್ನಿಟ್ಟುಕೊಂಡೇ ‘ಲೂಪ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಲವ್ ಮತ್ತು ಸಸ್ಪೆನ್ಸ್ ಅಂಶಗಳನ್ನ ಹೊಂದಿರೋ ‘ಲೂಪ್’ ಸಿನಿಮಾ ಒಂದು ಆಟದ ಸುತ್ತ ಸುತ್ತುತ್ತಾ ಕುತೂಹಲಕಾರಿ ಕ್ಲೈಮ್ಯಾಕ್ಸ್ ಹೊಂದಿದೆ.

ಸ್ಟಾಪ್ ಬೆಟ್ಟಿಂಗ್ಸ್, ನೋ ಡ್ರಗ್ಸ್ ಎನ್ನುವ ಸಂದೇಶವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ರೇಣುಕಾಂಬ ಸ್ಟುಡಿಯೋದಲ್ಲಿ ‘ಲೂಪ್’ ಚಿತ್ರದ ಟ್ರೈಲರ್ ಲಾಂಚ್ ನೆರವೇರಿದ್ದು, ಒಳ್ಳೆ ಹುಡುಗ ಪ್ರಥಮ್ ಬಂದು ವಿಶ್ ಮಾಡಿದ್ರು.
ಚಿತ್ರಕ್ಕೆ ಯಶವಂತ ಆಕ್ಷನ್-ಕಟ್ ಹೇಳಿದ್ದು, ಎಸ್.ಕೆ.ಎಲ್ಲಪ್ಪ ಹಾಗೂ ಯುವಿ ಪ್ರಮೋಷನ್ ಉಮೇಶ್ K N ಬಂಡವಾಳ ಹೂಡಿದ್ದಾರೆ. ಶಶಿಕಿರಣ್ಗೆ ಶೋಭಿತ ಜೋಡಿಯಾಗಿದ್ದು ಮಿಮಿಕ್ರಿ ಗೋಪಿ, ಅಪ್ಪುರಾಜ್, ಅಭಿ ಸಾಮ್ರಾಟ್, ಮಂಜುಳಾ ಅರಸ್, ಗಣೇಶ್, ಜೀವನ್ ಗೌಡ ಕೂಡ ನಟಿಸಿದ್ದಾರೆ.

ಜೀವನ್ ಗೌಡ ಸಿನಿಮಾಟೋಗ್ರಾಫಿ, ಸಂತೋಷ್ ಜೋಶ್ವ ಮ್ಯೂಸಿಕ್ ಮತ್ತು ಅನಿಲ್ ಆಚಾರ್ ಸಂಕಲನ ‘ಲೂಪ್’ ಆಟದ ಓಟ ಹೆಚ್ಚಿಸುತ್ತಂತೆ. ಪ್ರಚಾರದ ಕೆಲಸಗಳ ಹೊಣೆಯನ್ನ ಶ್ರೀಧರ್ ವಹಿಸಿಕೊಂಡಿದ್ದು, ಸದ್ಯದಲ್ಲೇ ‘ಲೂಪ್’ ಚಿತ್ರದ ರಿಲೀಸ್ ದಿನಾಂಕ ಘೋಷಣೆಯಾಗುತ್ತೆ.
ಇದನ್ನೂ ಓದಿ : ನಿತೇಶ್ ತಿವಾರಿ ನಿರ್ದೇಶನದ “ರಾಮಾಯಣ” ಫಸ್ಟ್ ಲುಕ್ ರಿಲೀಸ್!









