ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಕೈಗಾರಿಕಾ ಡೀಸೆಲ್ ಬೆಲೆಯನ್ನು ಲೀಟರ್ಗೆ 28.22 ರೂ. ಹೆಚ್ಚಿಸಿದೆ. ಶೇ. 25 ಕ್ಕಿಂತ ಹೆಚ್ಚು ಹೆಚ್ಚಳವಾಗಿದ್ದು, ಹೊಸ ದರವನ್ನು ಲೀಟರ್ಗೆ 137.81 ರೂ. ಗೆ ನಿಗದಿಪಡಿಸಲಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಭಾರತ್ ಪೆಟ್ರೋಲಿಯಂ ಕಂಪನಿಗಳು ಬುಧವಾರದಿಂದಲೇ ಈ ಹೊಸ ಬೆಲೆಯನ್ನು ಜಾರಿಗೆ ತಂದಿವೆ.
ವಾಣಿಜ್ಯ ಮತ್ತು ಕೈಗಾರಿಕಾ ಕಂಪನಿಗಳಿಗೆ ನೇರವಾಗಿ ಬೃಹತ್ ಪ್ರಮಾಣದಲ್ಲಿ ಅಂದರೆ ಬಲ್ಕ್ ಆಗಿ ಡೀಸೆಲ್ ಮಾರಾಟ ಮಾಡಿದಾಗ ಮಾತ್ರ ಈ ಹೈ-ಸ್ಪೀಡ್ ಡೀಸೆಲ್ ದರ ಅನ್ವಯವಾಗುತ್ತದೆ. ಆದರೆ, ಸಾಮಾನ್ಯ ವಾಹನ ಚಾಲಕರು ಹಾಗೂ ಡೀಸೆಲ್ ಕಾರು ಮಾಲೀಕರಿಗೆ ಯಾವುದೇ ತೊಂದರೆಯಿಲ್ಲ. ಬಂಕ್ಗಳಲ್ಲಿ ಸಿಗುವ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಕೇವಲ ಡೀಸೆಲ್ ಮಾತ್ರವಲ್ಲದೆ, ಕೈಗಾರಿಕೆಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ಫರ್ನೇಸ್ ಆಯಿಲ್ ಬೆಲೆಯನ್ನು ಕೂಡ ಲೀಟರ್ಗೆ 23.77 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದಲ್ಲದೆ, ಪ್ರೀಮಿಯಂ 95-ಆಕ್ಟೇನ್ ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 2 ರೂ.ಗಳಷ್ಟು ಏರಿಕೆ ಮಾಡಲಾಗಿದೆ.
ಇದನ್ನೂ ಓದಿ : ಡಾಲಿ ಧನಂಜಯ್ ಅಭಿನಯದ ಹೊಸ ಸಿನಿಮಾ ‘ಮದರ್ ಪ್ರಾಮಿಸ್’!








