ನಾನು ಯುದ್ಧಕ್ಕೆ ನಿಂತ್ರೆ ಆಗೋದೇ ಬೇರೆ – ಕಾಂಟ್ರವರ್ಸಿ ಮಾಡೋರ ವಿರುದ್ಧ ಸಪ್ತಮಿ ಗೌಡ ಕಿಡಿ!

ನಟಿ ಸಪ್ತಮಿ ಗೌಡ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿಯರ ವಿರುದ್ಧ ನಡೆಯುತ್ತಿರುವ ಅಸಭ್ಯ ವರ್ತನೆ ಹಾಗೂ ವಿವಾದಾತ್ಮಕ ಪೋಸ್ಟ್‌ಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕಾಂಟ್ರವರ್ಸಿ ಮಾಡುವವರ ವಿರುದ್ಧ ಯುದ್ಧಕ್ಕೆ ನಿಂತರೆ ಅವರಿಗೆ ನರಕ ತೋರಿಸುವುದಾಗಿ ಸಪ್ತಮಿ ಗೌಡ ಸಂದರ್ಶನವೊಂದರಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಲೈಕ್ಸ್​, ವ್ಯೂವ್ಸ್​ಗಾಗಿ ಒಂದಷ್ಟು ಮಂದಿ ನಡೆದುಕೊಳ್ಳುತ್ತಿರುವುದು ಸೆಲೆಬ್ರಿಟಿಗಳಿಗೆ ಭಾರಿ ಮುಜುಗರ ತರುತ್ತಿದೆ. ಅದರ ವಿರುದ್ಧ ದನಿ ಎತ್ತಿದವರು ಕಡಿಮೆಯೇ. ಇದೀಗ ಈ ಬಗ್ಗೆ ನಟಿ ಸಪ್ತಮಿ ಗರಂ ಆಗಿದ್ದಾರೆ.

ನಾನು ನನ್ನ ಯುದ್ಧವನ್ನು ಆಯ್ಕೆ ಮಾಡುವಾಗ ತುಂಬಾ ಕೇರ್​ಫುಲ್​ ಆಗಿ ಇರುತ್ತೇನೆ. ಒಂದು ವೇಳೆ ನೀವು ಅದೇ ಯುದ್ಧಭೂಮಿಗೆ ನನ್ನನ್ನು ತಳ್ಳಿದರೆ ನರಕ ಅನುಭವಿಸುತ್ತೀರಿ. ನಾನು ಜಯ ಸಾಧಿಸುತ್ತೇನೆ ಎನ್ನುವುದು ನನಗೆ ಗೊತ್ತು ಎನ್ನುವ ಮೂಲಕ ಕಾಂಟ್ರವರ್ಸಿ ಕ್ರಿಯೇಟ್​ ಮಾಡುವವರಿಗೆ ನಟಿ ವಾರ್ನ್​ ಮಾಡಿದ್ದಾರೆ.

ಕಾಂಟ್ರವರ್ಸಿ ಬರ್ತಾನೇ ಇರತ್ತೆ. ಆದರೆ ಸುಮ್​ಸುಮ್​ನೆ ನಾನು ಮಾತನಾಡಲ್ಲ. ಬಂದಿದ್ದೆಲ್ಲವನ್ನೂ ತೆಗೆದುಕೊಳ್​ತಾನೇ ಇರುತ್ತದೆ. ನಾವು ಮಾತನಾಡದೇ ಇದ್ದರೆ, ನಮ್ಮದೇ ತಪ್ಪು ಎಂದುಕೊಂಡರೂ ಪರವಾಗಿಲ್ಲ. ಟೈಂ ಬರುವವರೆಗೆ ವೇಟ್​ ಮಾಡಬೇಕು ಎಂದಿದ್ದಾರೆ.

ನಾನು ಯುದ್ಧಭೂಮಿಯಲ್ಲಿ ಇಳೀತಾ ಇದ್ದೀನಿ ಎಂದರೆ ಮುಗಿಸಿಯೇ ಮುಗಿಸ್ತೇನೆ. ನಾನು ಅದರಲ್ಲಿ ವಿನ್​ ಆಗಿಯೇ ಆಗ್ತೇನೆ. ಆದರೆ ಅದರಿಂದ ನಿಮಗೆ ಆಗೋ ತೊಂದರೆ ಇದ್ಯಲ್ಲಾ, ಅದನ್ನು ನೀವು ಸಹಿಸಿಕೊಳ್ಳಲು ಆಗಲ್ಲ ಎಂದು ನಟಿ ಸಪ್ತಮಿ ಚಾಲೆಂಜ್​ ಹಾಕಿದ್ದಾರೆ.

ಚಿತ್ರರಂಗದಲ್ಲಿ ಮಹಿಳೆಯರಿಗೆ ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೊಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ಅವರ ಕಲೆಗಿಂತಲೂ ಅವರ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪದೇ ಪದೆ ನಡೆಯುತ್ತಿವೆ ಎಂದು ಸಪ್ತಮಿಗೌಡ ಕಿಡಿಕಾರಿದ್ದರು.

ಇದನ್ನೂ ಓದಿ : ಸೋಮಣ್ಣ ಕೆಲಸ ಇಲ್ಲದಿರುವ ಮಂತ್ರಿ, ಆತನಿಗೆ ಫೈಲು ಹೋಗುವುದಿಲ್ಲ – ಸಿಎಂ ಸಿದ್ದರಾಮಯ್ಯ ಲೇವಡಿ!

Btv Kannada
Author: Btv Kannada

Leave a Comment

Read More