ಡಾಬಾ ಬಂತು ನೋಡು ಊಟ ಮಾಡ್ತೀಯಾ ಎಂದಾಕ್ಷಣ ಎದ್ದು ಕುಳಿತ ಮೃತವ್ಯಕ್ತಿ!

ಹಾವೇರಿ : ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆಂದು ದೇಹವನ್ನು ಊರಿಗೆ ಕರೆತರುವಾಗ ಆತ ಬದುಕಿರುವ ಘಟನೆ ಹಾವೇರಿ ಜಿಲ್ಲೆ ಬಂಕಾಪುರದಲ್ಲಿ ನಡೆದಿದೆ.

ಮೂರು ನಾಲ್ಕು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಿಷ್ಣಪ್ಪ ಎಂಬಾತನನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೈದ್ಯರು ಆತ ಮೃತಪಟ್ಟಿರೋದಾಗಿ ತಿಳಿಸಿದ್ದರು. ಹಾಗಾಗಿ ಪತ್ನಿ ಶೀಲಾ, ಸಂಬಂಧಿಕರ ಜೊತೆಗೆ ಆಂಬ್ಯುಲೆನ್ಸ್‌ನಲ್ಲಿ ಬಂಕಾಪುರಕ್ಕೆ ಕರೆದುಕೊಂಡು ಬರುತ್ತಿದ್ದರು. ಬಂಕಾಪುರ ಹತ್ತಿರ ಬರುತ್ತಿದ್ದಂತೆ “ಡಾಬಾ ಬಂತು ನೋಡು ಊಟ ಮಾಡುತ್ತೀಯಾ?” ಎಂದು ಹೆಂಡತಿ ಗೋಳಾಡಿ ಕಣ್ಣೀರಿಟ್ಟಾಗ ಮೃತವ್ಯಕ್ತಿ ಉಸಿರಾಡಲು ಶುರು ಮಾಡಿದ್ದಾನೆ.

ಈ ವೇಳೆ ಗಾಬರಿಗೊಂಡ ಸಂಬಂಧಿಕರು ಶಿಗ್ಗಾವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ತಪಾಸಣೆ ಮಾಡಿದಾಗ ವ್ಯಕ್ತಿ ಬದುಕಿರೋದು ದೃಢವಾಗಿದ್ದು, ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯ ಕಿಮ್ಸ್​​ನ ತುರ್ತು ಚಿಕಿತ್ಸಾ ಘಟಕದಲ್ಲಿ ಬಿಷ್ಣಪ್ಪಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತ ಕುಟುಂಬಸ್ಥರು ಬಿಷ್ಣಪ್ಪ ಮೃತಪಟ್ಟಿದ್ದಾನೆಂದು ಬಂಕಾಪುರದಲ್ಲಿ ಬ್ಯಾನರ್​​ಗಳನ್ನು ಹಾಕಿ, ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿಯೂ ಸತ್ತ ಸುದ್ದಿಯನ್ನು ಪ್ರಚಾರ ಮಾಡಿದ್ದರು.

ಇದನ್ನೂ ಓದಿ : http://ಮುಡಾ ಪ್ರಕರಣ – ಸಿಎಂ ಪತ್ನಿ, ಸಚಿವ ಭೈರತಿ ಸುರೇಶ್​ಗೆ ತಾತ್ಕಾಲಿಕ ರಿಲೀಫ್!

Btv Kannada
Author: Btv Kannada

Leave a Comment

Read More

Read More