ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನದ ಸುದ್ದಿ ಚಂದನವನದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ಈ ಸುದ್ದಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ವಿಚ್ಛೇದನದ ಹಿಂದೆ ಖ್ಯಾತ ನಟಿ ಸಪ್ತಮಿ ಗೌಡ ಕೈವಾಡ ಇದೆ ಎಂಬುದು ಬಹಿರಂಗವಾಗಿದೆ.
ಸಪ್ತಮಿ ಗೌಡ ಯುವ ರಾಜ್ಕುಮಾರ್ ಆಪ್ತತೆ ಹೆಚ್ಚಿಸಿಕೊಂಡಿದ್ದೇ ಈ ವಿಚ್ಛೇದನಕ್ಕೆ ಕಾರಣ. ಇದೀಗ ಶ್ರೀದೇವಿ ಕಳುಹಿಸಿರುವ ಲೀಗಲ್ ನೋಟಿಸ್’ನ ಪ್ರತಿಕ್ರಿಯೆ ಪ್ರತಿಯಲ್ಲಿ ಸಪ್ತಮಿ ಗೌಡ ಹೆಸರನ್ನು ಉಲ್ಲೇಖಿಸಿದ್ದು, ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ನೋಟಿಸ್’ನಲ್ಲಿ ಉಲ್ಲೇಖಿಸಿರುವಂತೆ, “2023ರ ಡಿಸೆಂಬರ್ನಲ್ಲಿ ಇಬ್ಬರಿಗೂ ಸಂಬಂಧ ಇದೆ ಅಂತಾ ಗೊತ್ತಾಯ್ತು. 1 ವರ್ಷದಿಂದ ಸಪ್ತಮಿ, ಯುವರಾಜ್ ನಡುವೆ ಸಂಬಂಧ ಇರೋದು ತಿಳೀತು. ಸ್ನೇಹಿತರು ಹಾಗೂ ಸಂಬಂಧಿಕರಿಂದ ಅವರಿಬ್ಬರ ಸಂಬಂಧ ಗೊತ್ತಾಗಿತ್ತು. ಶ್ರೀದೇವಿ ಇದ್ದಾಗಲೇ ಸಪ್ತಮಿ ಗೌಡರನ್ನು ಯುವ ಮನೆಗೆ ಕರೆತಂದಿದ್ದರು. ಗರ್ಲ್ಫ್ರೆಂಡ್ ಸಪ್ತಮಿಗೌಡಗಾಗಿ ಏನ್ ಬೇಕಾದ್ರೂ ಮಾಡೋಕೆ ಯುವ ರೆಡಿ ಕೂಡ ಇದ್ದರು.
ಶ್ರೀದೇವಿ ಮನೆಯಲ್ಲಿ ಆಕೆ ಮುಂದೆ ಕ್ರೂರವಾಗಿ ಯುವ ನಡೆದುಕೊಂಡಿದ್ದರು. ಈ ವಿಷ್ಯ ತಿಳಿದು ಶ್ರೀದೇವಿ ದೊಡ್ಡ ಆಘಾತಕ್ಕೊಳಗಾಗಿದ್ದರು. ಮನೆಯಿಂದ ಶ್ರೀದೇವಿಯನ್ನ ಓಡಿಸೋಕೆ ಯುವ ಟ್ರೈ ಕೂಡ ಮಾಡಿದ್ದರು ಎನ್ನಲಾಗಿದೆ. ಹೈಯರ್ ಸ್ಟಡೀಸ್ನಲ್ಲಿದ್ದಾಗ ಮಾನಸಿಕ, ದೈಹಿಕ, ಆರ್ಥಿಕವಾಗಿ ಶ್ರೀದೇವಿ ಕುಗ್ಗಿದ್ದರು. ಯುವ ಮಾಡಿರೋ ಆರೋಪಕ್ಕಿಂತ ರಿಯಾಲಿಟಿನೇ ಬೇರೆ ಇದೆ ಎಂದು ನೋಟಿಸ್ಗೆ ಕೊಟ್ಟಿರೋ ರಿಪ್ಲೈನಲ್ಲಿ ಶ್ರೀದೇವಿ ಗಂಭೀರ ಆರೋಪ ಮಾಡಿದ್ದಾರೆ” ವಕೀಲರ ಮೂಲಕ ಈ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
ಇನ್ನು ಯುವ ಮತ್ತು ಶ್ರೀದೇವಿ ಡಿವೋರ್ಸ್ ಪಡೆಯುತ್ತಿರುವುದು ದೊಡ್ಮೆನಯಲ್ಲಿ ಯಾರಿಗೂ ಇಷ್ಟವಿಲ್ಲ ಎಂದು ಹೇಳಲಾಗುತ್ತಿದೆ. ರಾಜ್ ಕುಟುಂಬದಲ್ಲಿ ವಿಚ್ಛೇದನವೆಂಬ ಬಿರುಗಾಳಿ ಎದ್ದಿದ್ದು ಇದೇ ಮೊದಲ ಬಾರಿ. ಈ ನೋಟಿಸ್’ಗೆ ಯುವ ಆಗಲಿ, ದೊಡ್ಮನೆ ಕುಟುಂಬದವರಾಗಲಿ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ : ಬೆಂಗಳೂರು : ಆತ್ಮಹ*ತ್ಯೆ ಮಾಡಿಕೊಳ್ಳಲು ಮೆಟ್ರೋ ಟ್ರ್ಯಾಕ್ಗೆ ಹಾರಿದ ಯುವಕ..!