ಬೆಂಗಳೂರು : ನಮ್ಮ ಮೆಟ್ರೋ ರೈಲು ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಗರದ ನಮ್ಮ ಮೆಟ್ರೋ ನೇರಳೆ ಮಾರ್ಗದ ಹೊಸಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಿನ್ನೆ ರಾತ್ರಿ 8.56ರ ಸುಮಾರಿಗೆ ನಡೆದಿದೆ. ಮೆಟ್ರೋ ಹಳಿಗೆ ಹಾರಿದ್ದ ಯುವಕನನ್ನು ಸದ್ಯ ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯವಕನನ್ನು ಬಸವೇಶ್ವರ ನಗರದ ನಿವಾಸಿ ಎಂ ಸಾಗರ್ ಎಂದು ಗುರುತಿಸಲಾಗಿದೆ. ಸಾಗರ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಹಳಿಗೆ ಹಾರಿದ ವೇಳೆ ಮೆಟ್ರೋ ಸಿಬ್ಬಂದಿ ಕೂಡಲೇ ಪವರ್ ಆಫ್ ಮಾಡಿದ್ದಾರೆ. ಮೆಟ್ರೋ ಚಾಲಕ ಫಟ್ ಅಂತ ಮೆಟ್ರೋ ಟ್ರೈನ್ ಸ್ಟಾಪ್ ಮಾಡಿದ್ದರಿಂದ ಸಂಭವಿಸಬಹುದಾದ ದೊಡ್ಡ ಆಪತ್ತು ತಪ್ಪಿದೆ. ಅದೃಷ್ಟವಶಾತ್ ಯುವಕನ ಮೇಲೆ ಟ್ರೈನ್ ಹರಿದು ಬಂದಿಲ್ಲ. ಆದ್ರೆ ಯುವಕನ ತಲೆಗೆ ಗಂಭೀರ ಗಾಯಗಳಾಗಿದೆ.
ಈ ಘಟನೆಯಿಂದಾಗಿ ಕೆಲ ಕಾಲ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಳಿಕ ಕೆಲ ಕಾಲ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಮೆಟ್ರೋ ನಿಲ್ದಾಣದಲ್ಲಿ ಜನ ಸಾಗರ ಸೇರಿತ್ತು. ಅರ್ಧ ಘಂಟೆಯ ನಂತರ ಎಂದಿನಂತೆ ಮೆಟ್ರೋ ಸಂಚಾರ ಆರಂಭವಾಗಿದೆ.
ಇದನ್ನೂ ಓದಿ : “ಸಿಗ್ನಲ್ ಮ್ಯಾನ್ 1971” ಸಿನಿಮಾ ಆಗಸ್ಟ್ನಲ್ಲಿ ತೆರೆಗೆ..!