ಬೆಂಗಳೂರು : ಲೋಕಸಭಾ ಚುನಾವಣೆ ಕರ್ನಾಟಕದ ಮೊದಲ ಹಂತದ 14 ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಶೇ.69.23 ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 2019ಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ.
ಇನ್ನು, ರಾಜ್ಯದಲ್ಲಿ ಅತೀ ಹೆಚ್ಚು ಮತ ಚಲಾವಣೆಯಾದ ಕ್ಷೇತ್ರ ಎಂದರೆ ಅದು ಮಂಡ್ಯ. ಸಕ್ಕರೆ ನಾಡಿನಲ್ಲಿ ಶೇಕಡ 81.48ರಷ್ಟು ಮತದಾನವಾಗಿದೆ. ಇನ್ನು, ಅತೀ ಕಡಿಮೆ ಮತ ಚಲಾವಣೆಯಾದ ಕ್ಷೇತ್ರವೆಂದರೆ ಅದು ಬೆಂಗಳೂರು ಸೆಂಟ್ರಲ್. ಶೇಡಕ 52.81ರಷ್ಟು ಮತದಾನವಾಗಿದೆ.
ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?
ಉಡುಪಿ ಚಿಕ್ಕಮಗಳೂರು – ಶೇ. 76.06
ಹಾಸನ – ಶೇ. 77.51
ದಕ್ಷಿಣ ಕನ್ನಡ – ಶೇ. 77.43
ಚಿತ್ರದುರ್ಗ – ಶೇ. 73.11
ತುಮಕೂರು – ಶೇ. 77.70
ಮಂಡ್ಯ – ಶೇ. 81.48
ಮೈಸೂರು – ಶೇ. 70.45
ಚಾಮರಾಜನಗರ – ಶೇ. 76.59
ಬೆಂಗಳೂರು ಗ್ರಾಮಾಂತರ – ಶೇ. 67.29
ಬೆಂಗಳೂರು ಉತ್ತರ – ಶೇ. 54.42
ಬೆಂಗಳೂರು ಸೆಂಟ್ರಲ್ – ಶೇ. 52.81
ಬೆಂಗಳೂರು ದಕ್ಷಿಣ – ಶೇ. 53.15
ಚಿಕ್ಕಬಳ್ಳಾಪುರ – ಶೇ. 76.82
ಕೋಲಾರ – ಶೇ. 78.07
ಇನ್ನು ಒಟ್ಟಾರೆಯಾಗಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ. 69.23 ರಷ್ಟು ಮತದಾನ ನಡೆದಿದೆ.
ಇದನ್ನೂ ಓದಿ : ಚಾಮರಾಜನಗರದಲ್ಲಿ EVM ಮಷಿನ್ ಒಡೆದು ಹಾಕಿದ ಗ್ರಾಮಸ್ಥರು..!