Download Our App

Follow us

Home » ಜಿಲ್ಲೆ » ಚಾಮರಾಜನಗರದಲ್ಲಿ EVM ಮಷಿನ್ ಒಡೆದು ಹಾಕಿದ ಗ್ರಾಮಸ್ಥರು..!

ಚಾಮರಾಜನಗರದಲ್ಲಿ EVM ಮಷಿನ್ ಒಡೆದು ಹಾಕಿದ ಗ್ರಾಮಸ್ಥರು..!

ಚಾಮರಾಜನಗರ : ಗ್ರಾಮಸ್ಥರು EVM ಮಷಿನ್​ ಒಡೆದು ಹಾಕಿದ ಘಟನೆ ಚಾಮರಾಜನಗರ ಜಿಲ್ಲೆಯ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ. ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಎಂದು‌ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಿಸಿದ್ದಾರೆ.

ಮತಗಟ್ಟೆಗಳ ಮೇಲೆ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಈ ಘಟನೆಯಲ್ಲಿ ಚುನಾವಣಾ ಅಧಿಕಾರಿಗಳಿಗೆ ಗಾಯಗಳಾಗಿದೆ. ಗ್ರಾಮಕ್ಕೆ ಹೆಚ್ಚುವರಿ ಪೊಲೀಸ್​ ಅಧಿಕಾರಿಗಳು ದೌಡಾಯಿಸಿದ್ದಾರೆ.

ಗ್ರಾಮದಲ್ಲಿ ಮೂಲ ಸೌಕರ್ಯ ಇಲ್ಲದಿರುವ ಹಿನ್ನಲೆಯಲ್ಲಿ ಮತ ಬಹಿಷ್ಕಾರಕ್ಕೆ ಇಲ್ಲಿಯ ಜನತೆ ಮುಂದಾಗಿದ್ದರು. ಹಾಗಾಗಿ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ಅವರು ಮತದಾರರನ್ನು ಮನವೊಲಿಸಲು ಮುಂದಾದರು. ಈ ವೇಳೆ ಅಧಿಕಾರಿಗಳ ಒತ್ತಾಯ ಮೇರೆಗೆ ಮತದಾನ ಮಾಡಲು ಕೆಲವು ಮತದಾರರು ಮುಂದೆ ಬಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮಾತಿನ‌ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಗ್ರಾಮಸ್ಥರು ಮತಗಟ್ಟೆಗೆ ನುಗ್ಗಿ ಪೀಠೋಪಕರಣ ಹಾಗೂ EVM ಮಷಿನ್​​ನ್ನು ಧ್ವಂಸಗೊಳಿಸಿದ್ದಾರೆ.

ಇದನ್ನೂ ಓದಿ : ನೆಲಮಂಗಲದಲ್ಲಿ ಮತ ಚಲಾಯಿಸಿದ 100 ವರ್ಷ ದಾಟಿದ ಅಜ್ಜಿಯರು..!

Leave a Comment

RELATED LATEST NEWS

Top Headlines

Live Cricket

Add Your Heading Text Here