ಕಲಬುರಗಿ : ಪಿ.ಎಸ್.ಐ ಹಗರಣದ ಕಿಂಗ್ಪಿನ್ ಆರ್.ಡಿ ಪಾಟೀಲ್ ನಿವಾಸಕ್ಕೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಭೇಟಿ ನೀಡಿ ಊಟೋಪಚಾರ ಮಾಡಿದ್ದಾರೆ. ಇದೀಗ ಈ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಉಮೇಶ್ ಜಾಧವ್ ಅವರ ಕಾಲೆಳೆದಿದ್ದಾರೆ.
ಉಮೇಶ್ ಜಾಧವ್ ವಿರುದ್ಧ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. R.D.ಪಾಟೀಲ್ ಮನೆಗೆ ಉಮೇಶ್ ಜಾಧವ್ ಹೋಗಿರೋದು ನನಗೇನೂ ಶಾಕ್ ಅಲ್ಲ. ಅಮಾಯಕ ವಿದ್ಯಾರ್ಥಿಗಳ ಬಾಳಲ್ಲಿ ಆರ್.ಡಿ ಪಾಟೀಲ್ ಆಟ ಆಡಿದ್ದಾನೆ. ಇಂಥವರ ಮನೆಗೆ ಹೋಗಿ ಊಟ ಮಾಡಿ ಮತಯಾಚಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
PSI ನೇಮಕಾತಿಯಲ್ಲಿ ಹಗರಣ ನಡೆಸಿ, ಪರೀಕ್ಷೆಯಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸಿ 58,000ಕ್ಕೂ ಹೆಚ್ಚು ಯುವಕರ ಭವಿಷ್ಯದ ಪಾಲಿಗೆ ಶಾಪವಾಗಿ ಪರಿಣಮಿಸಿ RD ಪಾಟೀಲ್ ಸದ್ಯ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಪಿಎಎಸ್ ಪರೀಕ್ಷೆ ಮಾತ್ರವಲ್ಲ ವಿವಿಧ ಬೋರ್ಡ್ ಪರೀಕ್ಷೆಗಳಲ್ಲೂ ಈ ಆರ್ಡಿ ಪಾಟೀಲ್ ಕಿಂಗ್ ಪಿನ್ ಆಗಿದ್ದಾನೆ. ಆದ್ರೆ, ಇದೀಗ RD ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ತೆರಳಿ ಮತಯಾಚಿಸಿ, ಬೆಂಬಲ ಕೇಳಿರುವುದು ಅವರಿಗೆ ತಿರುಗುಬಾಣವಾಗಿದೆ.
ಇದನ್ನೂ ಓದಿ : ಮದುವೆಗೆ ಹೊರಟಿದ್ದ ಕ್ರೂಷರ್ ವಾಹನ ಖಾಸಗಿ ಬಸ್ಗೆ ಡಿಕ್ಕಿ : ನಾಲ್ವರ ದುರ್ಮ*ರಣ..!