ಬೆಂಗಳೂರು : ದುಡಿದು ತಿನ್ನೋರ ಮೇಲೆ ಪೊಲೀಸಪ್ಪ ದರ್ಪ ತೋರಿದ್ದಾರೆ. ತರಕಾರಿ ಮಾರೋ ವೇಳೆ ಪೊಲೀಸ್ ಅಂಗಡಿ ಎತ್ತಿಸಲು ಬಂದು ವ್ಯಾಪಾರಸ್ಥರ ತಕ್ಕಡಿ ಎಸೆದು ದರ್ಪ ತೋರಿದ್ದಾರೆ.
ನೆಲಕ್ಕೆ ಎಸೆದ ಪರಿಣಾಮ ತಕ್ಕಡಿ ಒಡೆದು ಹೋಗಿರುವ ಘಟನೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆದಿದೆ. ಪೊಲೀಸ್ ಕಾನ್ಸ್‌ಟೇಬಲ್ ನಾಗರಾಜ್ ವರ್ತನೆಗೆ ಸ್ಥಳೀಯ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಿಸಬೇಕೆಂದು ಹೈಕೋರ್ಟ್ ಸೂಚನೆ ನೀಡಿತ್ತು. ಕೋರ್ಟ್ ನಿಯಮ ಪಾಲಿಸಬೇಕಾಗಿರುವುದು ಎಲ್ಲರ ಕರ್ತವ್ಯ. ಹೀಗಾಗಿ ನಾಗರಾಜ್ ಕೂಡ ಬಂದು ವ್ಯಾಪಾರಿಗಳ ಬಳಿ ಬಂದು ಅಂಗಡಿ ಎತ್ತುವಂತೆ ಕೇಳಿದ್ದರು. ಉಪ್ಪಾರಪೇಟೆ ಸಂಚಾರಿ ಠಾಣೆಯ ಕಾನ್ಸ್‌ಟೇಬಲ್ ನಾಗರಾಜ್ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತಿಸೋದು ಎಷ್ಟು ಸರಿ ಅಂತ ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಎಸ್ ಎಸ್ ಎಲ್ ಸಿ ಪ್ರಿಪರೇಟರಿ ಟೈಮ್ ಟೇಬಲ್ ನಲ್ಲಿ ಮುಸ್ಲಿಂ ಓಲೈಕೆ : ಬಿಜೆಪಿ ಆಕ್ರೋಶ..
Post Views: 369