Download Our App

Follow us

Home » ಅಪರಾಧ » ಯುಗಾದಿ ಹಬ್ಬದ ಮಾಂಸಕ್ಕಾಗಿ ಚೀಟಿ ಹಾಕಿದವರಿಗೆ ಟೋಪಿ : ಕೋಟಿ ಕೋಟಿ ನುಂಗಿದ ಅಸಾಮಿ ಎಸ್ಕೇಪ್..!

ಯುಗಾದಿ ಹಬ್ಬದ ಮಾಂಸಕ್ಕಾಗಿ ಚೀಟಿ ಹಾಕಿದವರಿಗೆ ಟೋಪಿ : ಕೋಟಿ ಕೋಟಿ ನುಂಗಿದ ಅಸಾಮಿ ಎಸ್ಕೇಪ್..!

ಬೆಂಗಳೂರು : ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಸಾಮಗ್ರಿ, ಮಾಂಸಕ್ಕಾಗಿ ಚೀಟಿ ಹಾಕಿದ್ದ ಸಾವಿರಾರು ಜನರಿಗೆ ವ್ಯಕ್ತಿಯೋರ್ವ ಉಂಡೆನಾಮ ಹಾಕಿ ರಾತ್ರೋರಾತ್ರಿ ಮನೆ ಖಾಲಿ ಮಾಡಿದ ಘಟನೆ ಗಿರಿನಗರದಲ್ಲಿ ನಡೆದಿದೆ. ಪುಟ್ಟಸ್ವಾಮಿ ಎಂಬಾತ ಜನರಿಗೆ ಮೋಸ ಮಾಡಿದ ವ್ಯಕಿಯಾಗಿದ್ದಾನೆ.

ಹಬ್ಬಕ್ಕೆ ಒಂದೇ ಸರಿ ದುಡ್ಡು ಹೊಂದಿಸೋಕೆ ಆಗಲ್ಲ ಅಂತ ಜನರು ಕಳೆದ ಎರಡು ವರ್ಷಗಳಿಂದ ಯುಗಾದಿ ಚೀಟಿ ನಡೆಸುತ್ತಿದ್ದ ಪುಟ್ಟಸ್ವಾಮಿ ಎಂಬಾತನ ಬಳಿ ಯುಗಾದಿ ಹಬ್ಬದ ಸಾಮಗ್ರಿ, ಮಾಂಸಕ್ಕಾಗಿ ಚೀಟಿ ಹಾಕಿದ್ದಾರೆ. ಆದರೆ ಈತ ಈ ಬಾರಿ ಚೀಟಿ ಸಂಖ್ಯೆನ್ನೂ ಹೆಚ್ಚಿಸಿಕೊಂಡು ಒಬ್ಬೊಬ್ಬರ ಬಳಿ 4 ರಿಂದ 5 ಸಾವಿರ ಹಣ ಪಡೆದು ಕೊಂಡಿದ್ದಾನೆ.

ಇನ್ನು ಜನರಿಂದ ಕೋಟ್ಯಾಂತರ ರೂಪಾಯಿಗಳಿಸಿದ ಪುಟ್ಟಸ್ವಾಮಿ ಯುಗಾದಿ ಹಬ್ಬ ಹತ್ತಿರ ಬರುತ್ತಿದ್ದಂತೆ ರಾತ್ರೋ ರಾತ್ರಿ ಮನೆ ಖಾಲಿ ಮಾಡಿದ್ದಾನೆ.  ಪುಟ್ಟಸ್ವಾಮಿ ಓಡಿ ಹೋಗಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಮೋಸ ಹೋದವರೆಲ್ಲ ಆತನ ಮನೆ ಮುಂದೆ ಜಮಾಯಿಸಿದ್ದಾರೆ. ಯುಗಾದಿ ಹತ್ತಿರ ಬಂದಿದ್ದೆ ಪುಟ್ಟಸ್ವಾಮಿ ಎಸ್ಕೇಪ್ ಆಗಿದ್ದು, ಹಬ್ಬಕ್ಕೆ ದುಡ್ಡು ಒಂದೇ ಬಾರಿಗೆ ಹೊಂದಿಸೋಕೆ ಆಗಲ್ಲ ಅಂತ ಚೀಟಿ ಹಾಕಿದ್ದ ಜನರಿಗೆ ಈಗ ದಿಕ್ಕೇ ತೋಚದಂತೆ ಆಗಿದೆ. ಈ ಬಗ್ಗೆ ಬ್ಯಾಟರರಾಯನಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : ಕಾಂಗ್ರೆಸ್ 20 ಕ್ಷೇತ್ರ ಗೆದ್ದೇ ಗೆಲ್ಲುತ್ತದೆ : ಸಿಎಂ ವಿಶ್ವಾಸ..!

Leave a Comment

RELATED LATEST NEWS

Top Headlines

ರೇಣುಕಾಸ್ವಾಮಿ ಕೇಸ್​ನಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹ..!

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಜಯೇಂದ್ರ

Live Cricket

Add Your Heading Text Here