Download Our App

Follow us

Home » ಮೆಟ್ರೋ » ಬೆಂಗಳೂರು ಹೊರ ವಲಯದಲ್ಲಿ ಭೀಕರ ಅಪಘಾತ – ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು..!

ಬೆಂಗಳೂರು ಹೊರ ವಲಯದಲ್ಲಿ ಭೀಕರ ಅಪಘಾತ – ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು..!

ಬೆಂಗಳೂರು : ಬೆಂಗಳೂರು ಹೊರ ವಲಯ ನೈಸ್​ ರಸ್ತೆಯಲ್ಲಿ ಓಮ್ನಿ ಹಾಗೂ ಬೊಲೆನೊ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಓಮ್ನಿ ನಡು ರಸ್ತೆಯಲ್ಲೇ  ಧಗಧಗನೆ ಹೊತ್ತಿ ಉರಿದಿದೆ. ಓಮ್ನಿಯಲ್ಲಿದ್ದ 14 ವರ್ಷದ ಬಾಲಕಿ ಸಜೀವ ದಹನವಾಗಿದ್ದಾಳೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯವಾಗಿದ್ದು, 20 ವರ್ಷದ ಸುನಿತಾ, 65 ವರ್ಷದ ಮಂಜುಳಾ, 16 ವರ್ಷದ ಮಯಾಂಕ್​ 17 ವರ್ಷದ ನಮನ್​​ ಮಹೇಶ್, ತರುಣ್​ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಟುಂಬ ಅಬ್ಬಿಗೆರೆಯಿಂದ ದಾಸನಪುರಕ್ಕೆ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : ಹೊಸಪೇಟೆ : ರಥದ ಚಕ್ರದಡಿ ಸಿಲುಕಿ ವ್ಯಕ್ತಿ ಸಾ*ವು..!

Leave a Comment

RELATED LATEST NEWS

Top Headlines

ಪಠಾಣ್​ ಸಿನಿಮಾಗೆ ಸೆಡ್ಡು ಹೊಡೆದ ಕೆಡಿ : ದುಬಾರಿ ಮೊತ್ತಕ್ಕೆ ಚಿತ್ರದ ಆಡಿಯೋ ರೈಟ್ಸ್ ಸೇಲ್..!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ರಿಲೀಸ್ ಡೇಟ್​​ನ್ನು ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಅದರ ಬೆನ್ನಲೇ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಬಿಡುಗಡೆ ಬಗ್ಗೆ

Live Cricket

Add Your Heading Text Here