Download Our App

Follow us

Home » ರಾಷ್ಟ್ರೀಯ » ಸಹೃದಯಿ ಉದ್ಯಮಿಯ ಯುಗಾಂತ್ಯ – ಟಾಟಾ ಟ್ರಸ್ಟ್‌ಗೆ ಹೊಸ ಸಾರಥಿಯ ನೇಮಕ.. ಯಾರಿವರು?

ಸಹೃದಯಿ ಉದ್ಯಮಿಯ ಯುಗಾಂತ್ಯ – ಟಾಟಾ ಟ್ರಸ್ಟ್‌ಗೆ ಹೊಸ ಸಾರಥಿಯ ನೇಮಕ.. ಯಾರಿವರು?

ಮುಂಬೈ : ಟಾಟಾ ಗ್ರೂಪ್​ಗೆ ಹೊಸ ಸಾರಥಿಯ ಆಯ್ಕೆಯಾಗಿದೆ. ಟಾಟಾ ಟ್ರಸ್ಟ್​ಗಳ ಮುಖ್ಯಸ್ಥರಾಗಿ ನೋಯೆಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ಇಂದು ಟಾಟಾ ಟ್ರಸ್ಟ್​ಗಳ ಮಂಡಳಿ ಸಭೆ ನಡೆದಿದ್ದು, ಅದರಲ್ಲಿ ಒಮ್ಮತದಿಂದ ನೋಯೆಲ್ ಅವರ ಪರವಾಗಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಟಾಟಾ ಗ್ರೂಪ್​ನ ಮಾಲೀಕ ಸಂಸ್ಥೆಯಾದ ಟಾಟಾ ಸನ್ಸ್​ನಲ್ಲಿ ಟಾಟಾ ಟ್ರಸ್ಟ್​ಗಳು ಬಹುಪಾಲು ಷೇರುದಾರಿಕೆ ಹೊಂದಿವೆ. ಈ ಮೂಲಕ ಟಾಟಾ ಗ್ರೂಪ್​ನ ಒಡೆತನ ನೋಯೆಲ್ ಟಾಟಾಗೆ ಸಿಗಲಿದೆ.

67 ವರ್ಷದ ನೋಯೆಲ್ ಟಾಟಾ ಅವರು ರತನ್ ಟಾಟಾ ತಂದೆಯ ಎರಡನೇ ಪತ್ನಿಯ ಮಗ. ಟಾಟಾ ಕುಟುಂಬಕ್ಕೆ ಸೇರಿದ ಸರ್ ದೊರಾಬ್​ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್​ ಮಂಡಳಿಗಳ ಟ್ರಸ್ಟೀಗಳಲ್ಲಿ ಒಬ್ಬರಾಗಿರುವ ನೋಯೆಲ್ ಟಾಟಾ ಅವರು ಮುಂದಿನ ವಾರಸುದಾರ ಎಂಬುದು ಈ ಮೊದಲೇ ಬಹುತೇಕ ನಿಶ್ಚಿತವಾಗಿತ್ತು.

ರತನ್ ಅವರ ತಂದೆ ನವಲ್ ಟಾಟಾ ಅವರಿಗೆ ಎರಡು ವಿವಾಹವಾಗಿತ್ತು. ಮೊದಲ ಪತ್ನಿಗೆ ವಿಚ್ಛೇದನ ನೀಡಿ ಎರಡನೇ ಮದುವೆಯಾಗಿದ್ದರು. ರತನ್ ಮತ್ತು ಜಿಮ್ಮಿ ಟಾಟಾ ಅವರು ಮೊದಲ ಪತ್ನಿಯ ಮಕ್ಕಳಾಗಿದ್ದಾರೆ. ನೋಯೆಲ್ ಟಾಟಾ ಅವರು ಎರಡನೇ ಪತ್ನಿಯ ಮಗ. ನೋಯೆಲ್ ಅವರಿಗೆ ಒಂದು ಗಂಡು ಮಗು ಸೇರಿ ಮೂವರು ಮಕ್ಕಳಿದ್ದಾರೆ.

ಇದನ್ನೂ ಓದಿ : ಬಾಂಗ್ಲಾದ ಶಕ್ತಿ ಪೀಠದಲ್ಲಿ ಕಳ್ಳತನ.. ಪ್ರಧಾನಿ ಮೋದಿ ಕಾಣಿಕೆ ನೀಡಿದ್ದ ಕಿರೀಟವನ್ನೇ ಹೊತ್ತೊಯ್ದ ಕಳ್ಳ..!

Leave a Comment

DG Ad

RELATED LATEST NEWS

Top Headlines

ಅದ್ದೂರಿಯಾಗಿ ನೆರವೇರಿತು ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ.. ‘ಸಿಂಹಪ್ರಿಯಾ’ ಫ್ಯಾಮಿಲಿಯಲ್ಲಿ ಸಂಭ್ರಮ..!

ಬೆಂಗಳೂರು : ಸ್ಯಾಂಡಲ್​​ವುಡ್​ನ ಸೂಪರ್​ ಹಿಟ್ ಸಿನಿಮಾ ಉಗ್ರಂ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಹರಿಪ್ರಿಯಾಗೆ ಇಂದು ಸೀಮಂತ ಸಂಭ್ರಮ. ನಟ ವಸಿಷ್ಠ ಸಿಂಹ ಅವರನ್ನು

Live Cricket

Add Your Heading Text Here

11:33