Download Our App

Follow us

Home » ಸಿನಿಮಾ » ಸ್ಟಾರ್ ಸುವರ್ಣದಲ್ಲಿ ಬರ್ತಿದೆ ಬ್ರ್ಯಾಂಡ್ ನ್ಯೂ ಸೆಲೆಬ್ರಿಟಿ ಗೇಮ್ ಶೋ ‘Huu ಅಂತೀಯಾ…Uhuu ಅಂತೀಯಾ’..!

ಸ್ಟಾರ್ ಸುವರ್ಣದಲ್ಲಿ ಬರ್ತಿದೆ ಬ್ರ್ಯಾಂಡ್ ನ್ಯೂ ಸೆಲೆಬ್ರಿಟಿ ಗೇಮ್ ಶೋ ‘Huu ಅಂತೀಯಾ…Uhuu ಅಂತೀಯಾ’..!

ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋ ಗಳ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ‘Huu ಅಂತೀಯಾ…Uhuu ಅಂತೀಯಾ’ ಎಂಬ ಹೊಸ ಬಗೆಯ ವಿನೂತನ ಗೇಮ್ ಶೋ ಅನ್ನು ಪ್ರಸಾರ ಮಾಡಲಿದೆ.

ಇಬ್ಬರು ಜನಪ್ರಿಯ ಆ್ಯಂಕರ್‌ಗಳನ್ನು ಹೊಂದಿರುವ ಈ ಶೋ ಒಟ್ಟು ಮೂರು ಸುತ್ತುಗಳನ್ನು ಹೊಂದಿರುತ್ತದೆ. ಸೆಲೆಬ್ರಿಟಿ ಸ್ಪರ್ಧಿಗಳಿಗೆ 6 ಲಕ್ಷ ರೂಪಾಯಿಗಳನ್ನು ಗೆಲ್ಲುವ ಅವಕಾಶವಿರುತ್ತದೆ.
ಮೊದಲ ಸುತ್ತಿನಲ್ಲಿ ಸ್ಪರ್ಧಿಗಳು ಒಬ್ಬರ ನಂತರ ಒಬ್ಬರು ಆಡುತ್ತಾರೆ. ನಿರೂಪಕರು ನೀಡಿದ ಸತ್ಯ ಮತ್ತು ಸುಳ್ಳು ಸಂಗತಿಗಳನ್ನು ಸ್ಪರ್ಧಿಗಳು ಸರಿಯಾಗಿ ಆರಿಸಿದರೆ 1 ಲಕ್ಷ ರೂಪಾಯಿ ಗೆಲ್ಲುವ ಅವಕಾಶವಿದೆ.

ಇನ್ನು ಎರಡನೇ ಸುತ್ತಿನಲ್ಲಿ ಸ್ಪರ್ಧಿಗಳಿಗೆ ಆಹಾರವನ್ನು ಸೇವಿಸುವ ಸವಾಲಿರುತ್ತದೆ, ಮಜಾ ತುಂಬಿರುವ ಟ್ವಿಸ್ಟ್ ಗಳೊಂದಿಗೆ ಒಟ್ಟು 60 ಸೆಕೆಂಡ್‌ಗಳ ಸಮಯವನ್ನು ನೀಡಲಾಗುತ್ತದೆ. ಇದರಲ್ಲಿ ಗೆದ್ದ ವಿಜೇತರು 2 ಲಕ್ಷ ರೂಪಾಯಿಗಳನ್ನು ಗೆಲ್ಲಬಹುದು.

ಮೂರನೇ ಹಾಗೂ ಕೊನೆಯ ಸುತ್ತಿನಲ್ಲಿ ಕೇವಲ ಇಬ್ಬರು ಸ್ಪರ್ಧಿಗಳು ತಮ್ಮ ಅದೃಷ್ಟದ ಆಧಾರದ ಮೇಲೆ ಆಡುತ್ತಾರೆ, ಗೆದ್ದ ಸ್ಪರ್ಧಿಗೆ 3 ಲಕ್ಷಗಳನ್ನು ಗೆಲ್ಲುವ ಅವಕಾಶವಿದೆ. ಇದು ಈ ಗೇಮ್ ಶೋ ನ ನಿಯಮಾವಳಿಗಳು.

ಇನ್ನು ‘Huu ಅಂತೀಯಾ…Uhuu ಅಂತೀಯಾ’ ಶೋ ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿರೋದು ತುಳುನಾಡಿನ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಮತ್ತು ನಟನೆ ಹಾಗೂ ತನ್ನ ಹಾಸ್ಯಗಾರಿಕೆಯ ಮೂಲಕ ನೋಡುಗರ ಮನಗೆದ್ದಿರುವ ಅರುಣ್ ಹರಿಹರನ್ ಈ ಶೋ ನ ರೂವಾರಿಗಳಾಗಿದ್ದಾರೆ. ಮೊದಲ ಗ್ರ್ಯಾಂಡ್ ಓಪನಿಂಗ್ ಸಂಚಿಕೆಯಲ್ಲಿ ಸೆಲೆಬ್ರಿಟಿ ಸ್ಫರ್ಧಿಗಳಾಗಿ ನಟ ಡಾರ್ಲಿಂಗ್ ಕೃಷ್ಣ, ನಟಿಯರಾದ ಮಿಲನ ನಾಗರಾಜ್ ಹಾಗು ಅಮೃತಾ ಅಯ್ಯಂಗಾರ್ ಭಾಗವಹಿಸಲಿದ್ದಾರೆ.

ಈ ರಿಯಾಲಿಟಿ ಶೋ ನ ಟೈಟಲ್ ಟ್ರ್ಯಾಕ್ ಗೆ ನೋಡುಗರು ಫಿಧಾ ಆಗಿದ್ದು, ಮಸ್ತ್ ಮನರಂಜನೆಗೆ ಕಾತುರತೆಯಿಂದ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೆ ಮನೆಯಲ್ಲಿ ಕುಳಿತು ವೀಕ್ಷಿಸುವ ವೀಕ್ಷಕರಿಗೂ “ಐ ಫೋನ್” ಗೆಲ್ಲುವ ಅವಕಾಶವನ್ನು ಸ್ಟಾರ್ ಸುವರ್ಣ ವಾಹಿನಿಯು ನೀಡುತ್ತಿದೆ. ಮೊದಲ ಹಾಗು ಎರಡನೇ ಸಂಚಿಕೆಯ ಕೊನೆಯಲ್ಲಿ ಕೇಳುವ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಿದರೆ ‘I Phone’ ಗೆಲ್ಲುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಬಹುದು.

ಇದನ್ನೂ ಓದಿ : ಕಾಂಗ್ರೆಸ್​ MLC ಅಭ್ಯರ್ಥಿ ರಾಮೋಜಿಗೌಡಗೆ ಸಂಕಷ್ಟ- ಮತದಾರರಿಗೆ ಕೊಡಲು ತಂದಿದ್ದ ಗಿಫ್ಟ್​ ಬಾಕ್ಸ್​ಗಳು ಪತ್ತೆ..!

Leave a Comment

RELATED LATEST NEWS

Top Headlines

Live Cricket

Add Your Heading Text Here