Download Our App

Follow us

Home » ರಾಜಕೀಯ » ಕಾಂಗ್ರೆಸ್​ MLC ಅಭ್ಯರ್ಥಿ ರಾಮೋಜಿಗೌಡಗೆ ಸಂಕಷ್ಟ- ಮತದಾರರಿಗೆ ಕೊಡಲು ತಂದಿದ್ದ ಗಿಫ್ಟ್​ ಬಾಕ್ಸ್​ಗಳು ಪತ್ತೆ..!

ಕಾಂಗ್ರೆಸ್​ MLC ಅಭ್ಯರ್ಥಿ ರಾಮೋಜಿಗೌಡಗೆ ಸಂಕಷ್ಟ- ಮತದಾರರಿಗೆ ಕೊಡಲು ತಂದಿದ್ದ ಗಿಫ್ಟ್​ ಬಾಕ್ಸ್​ಗಳು ಪತ್ತೆ..!

ಆನೇಕಲ್ : ಬೆಂಗಳೂರು ಪದವೀಧರ ಕ್ಷೇತ್ರದ ಮತದಾರರಿಗೆ ಹಂಚಲು ತಂದಿದ್ದ ಗಿಫ್ಟ್ ಬಾಕ್ಸ್​​ಗಳು ಪತ್ತೆ ಆಗಿವೆ. ಆನೇಕಲ್ ತಾಲ್ಲೂಕಿನ ತಿಮ್ಮಗೊಂಡನಹಳ್ಳಿ ಡಿಟಿಡಿಸಿ ಗೋದಾಮಿನಲ್ಲಿ ಸಾವಿರಾರು ಗಿಫ್ಟ್ ಬಾಕ್ಸ್​​ಗಳು ಶೇಖರಿಸಿಡಲಾಗಿತ್ತು. ಗೋದಾಮಿನ ಮೇಲೆ ದಾಳಿ ನಡೆಸಿ ಬಿಜೆಪಿ ಕಾರ್ಯಕರ್ತರು ಇದನ್ನು ಪತ್ತೆ ಹಚ್ಚಿದ್ದಾರೆ. ಗಿಫ್ಟ್ ಬಾಕ್ಸ್​​ಗಳ ಮೇಲೆ RG ಸ್ಟಿಕರ್​ ಪತ್ತೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡರವರಿಗೆ ಸೇರಿದ ಗಿಫ್ಟ್ ಬಾಕ್ಸ್​ಗಳು ಅನ್ನೊ ಆರೋಪ ಕೇಳಿಬಂದಿದೆ.

ವಿಧಾನ ಪರಿಷತ್‌ ಚುನಾವಣೆಯ ಬೆಂಗಳೂರು ಪದವೀಧರ ಕ್ಷೇತ್ರದ ಮತದಾರರಿಗೆ ವಿತರಿಸಲು ಇವುಗಳನ್ನು ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮತದಾರರಿಗೆ ಹಂಚಲು ಪ್ಯಾಕ್ ಮಾಡಿ ಇಟ್ಟಿದ್ದ ಗಿಫ್ಟ್ ಐಟಂಗಳು ಎರಡು ಕಡೆ ಪತ್ತೆಯಾಗಿದ್ದು, ಜಯನಗರದಲ್ಲಿ ಹಾಗೂ ಆನೆಕಲ್‌ನಲ್ಲಿ ಇವುಗಳನ್ನು ಶೇಖರಿಸಿಡಲಾಗಿತ್ತು. ಸುಳಿವಿನ ಮೇರೆಗೆ ಬಿಜೆಪಿ ಕಾರ್ಯಕರ್ತರು ಗೋದಾಮಿನ ಮೇಲೆ ದಾಳಿ ನಡೆಸಿ ಇದನ್ನು ಪತ್ತೆ ಹಚ್ಚಿದ್ದಾರೆ. ದಾಳಿ ವೇಳೆ ಸಾವಿರಾರು ಗಿಫ್ಟ್ ಬಾಕ್ಸ್‌ಗಳು ಕಂಡುಬಂದಿವೆ.

ಜಯನಗರದಯೂ ರಾತ್ರಿ ಪತ್ತೆಯಾಗಿರುವ ಗಿಫ್ಟ್ ಸೆಟ್‌ಗಳ ಜೊತೆಗೆ ಇದು ಸಾಮ್ಯತೆ ಹೊಂದಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ ಮುಂದೂಡಲು ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ದಾಳಿ ನಡೆಸಿರುವ ಬಿಜೆಪಿ ಕಾರ್ಯಕರ್ತರು ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ಹಾಗೂ ದೂರು ನೀಡಿದ್ದು, ಸ್ಥಳಕ್ಕೆ ಅತ್ತಿಬೆಲೆ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. 

Leave a Comment

RELATED LATEST NEWS

Top Headlines

ಪಠಾಣ್​ ಸಿನಿಮಾಗೆ ಸೆಡ್ಡು ಹೊಡೆದ ಕೆಡಿ : ದುಬಾರಿ ಮೊತ್ತಕ್ಕೆ ಚಿತ್ರದ ಆಡಿಯೋ ರೈಟ್ಸ್ ಸೇಲ್..!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ರಿಲೀಸ್ ಡೇಟ್​​ನ್ನು ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಅದರ ಬೆನ್ನಲೇ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಬಿಡುಗಡೆ ಬಗ್ಗೆ

Live Cricket

Add Your Heading Text Here