ಮಡಿಕೇರಿ : ಕೊಡಗಿನಲ್ಲಿ ಕೊನೆಗೂ SSLC ವಿದ್ಯಾರ್ಥಿನಿ ರುಂಡ ಪತ್ತೆಯಾಗಿದೆ. ಆರೋಪಿ ಪ್ರಕಾಶ್ ಮೇ.9ರಂದು SSLC ವಿದ್ಯಾರ್ಥಿನಿ ಕತ್ತು ಕತ್ತರಿಸಿ ಕೊಲೆ ಮಾಡಿದ್ದ. ಎರಡು ದಿನದಿಂದ ಪೊಲೀಸರು ವಿದ್ಯಾರ್ಥಿನಿಯ ರುಂಡಕ್ಕಾಗಿ ಶೋಧ ನಡೆಸುತ್ತಿದ್ದರು. ನಿನ್ನೆ ರಾತ್ರಿ ಹಂತಕ ಸಿಕ್ಕರೂ ರುಂಡ ಮಾತ್ರ ಸಿಕ್ಕಿರಲಿಲ್ಲ.
ವಿದ್ಯಾರ್ಥಿನಿ ಮೀನಾ ರುಂಡಕ್ಕೆ 40 ಪೊಲೀಸರು ಹುಡುಕಾಡಿದ್ದರು. ಇದೀಗ ಕೊಲೆ ನಡೆದ ಸ್ಥಳದಲ್ಲೇ ಇದ್ದ ಮರದಲ್ಲಿ ರುಂಡ ಪತ್ತೆಯಾಗಿದೆ. ಮೀನಾ ರುಂಡ ಕತ್ತರಿಸಿ ಆರೋಪಿ ಪ್ರಕಾಶ್ ಮರದ ಮೇಲೆ ಇಟ್ಟಿದ್ದ. ಪೊಲೀಸರು ಬಿಸಿ ಮುಟ್ಟಿಸಿದ ಮೇಲೆ ಪ್ರಕಾಶ್ ರುಂಡ ಎಲ್ಲಿದೆ ಎಂಬುದನ್ನು ತೋರಿಸಿದ್ದಾನೆ.
ನಿಶ್ಚಿತಾರ್ಥ ತಪ್ಪಿ ಹೋಗಿದ್ದಕ್ಕೆ ಪ್ರಕಾಶ್ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸೋಮವಾರಪೇಟೆಯ ಸೂರ್ಲಬ್ಬಿಯಲ್ಲಿ ನಡೆದಿತ್ತು. ಹತ್ಯೆ ನಂತ್ರ ಆರೋಪಿ ರುಂಡ ಹಾಗೂ ಕೋವಿ ಸಮೇತ ಪರಾರಿಯಾಗಿದ್ದ.
ಇದನ್ನೂ ಓದಿ : ಮೋದಿಯವರಿಗೆ ಸೋಲಿನ ಸುಳಿವು ಸಿಕ್ಕಿದೆ, ಇದೇ ಕಾರಣಕ್ಕೆ ಭಾವನಾತ್ಮಕವಾದ ಭಾಷಣ ಮಾಡ್ತಿದ್ದಾರೆ : ಸಿಎಂ ಸಿದ್ದರಾಮಯ್ಯ..!