Download Our App

Follow us

Home » ಸಿನಿಮಾ » ಕ್ರೈಸ್ತ ಸಂಪ್ರದಾಯದ ಮದುವೆಗೂ ಮುನ್ನ ರೋಸ್​ ಶಾಸ್ತ್ರ ಆಚರಿಸಿಕೊಂಡ ಸೋನಾಲ್​​ – ಫೋಟೋಸ್ ಇಲ್ಲಿವೆ ನೋಡಿ..!

ಕ್ರೈಸ್ತ ಸಂಪ್ರದಾಯದ ಮದುವೆಗೂ ಮುನ್ನ ರೋಸ್​ ಶಾಸ್ತ್ರ ಆಚರಿಸಿಕೊಂಡ ಸೋನಾಲ್​​ – ಫೋಟೋಸ್ ಇಲ್ಲಿವೆ ನೋಡಿ..!

ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ತರುಣ್​​ ಸುಧೀರ್​​ ಮತ್ತು ನಟಿ ಸೋನಲ್​​ ಮೊಂಥೆರೋ ಇತ್ತೀಚೆಗೆ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್​ನಲ್ಲಿ ಅದ್ದೂರಿಯಾಗಿ ನಡೆದ ಮದುವೆಗೆ ಬಂಧು ಮಿತ್ರರು, ಚಿತ್ರರಂಗದ ಅನೇಕ ನಟ- ನಟಿ, ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದರು.

ಮೊನ್ನೆಯಷ್ಟೇ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ ಈ ಜೋಡಿ ಇದೀಗ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ಮಂಗಳೂರಿನ ಚರ್ಚ್​ ಒಂದರಲ್ಲಿ ಸೋನಲ್ ಮತ್ತು ತರುಣ್ ಕ್ರಿಶ್ಚಿಯನ್​​ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ.

ಅದಕ್ಕೂ ಒಂದು ದಿನ ಮೊದಲು ಮಂಗಳೂರಿನ ಸೋನಲ್‌ ಮನೆಯಲ್ಲಿ ರೋಸ್‌ ಶಾಸ್ತ್ರ ಮಾಡಲಾಗಿದೆ. ರೋಸ್‌ ಶಾಸ್ತ್ರದಲ್ಲಿ ಭಾಗಿಯಾದ ಸೋನಲ್​​ ಮೊಂಥೆರೋ ಅವರು, ಕುಟುಂಬಸ್ಥರು, ಸ್ನೇಹಿತರ ಜೊತೆಗೆ ರೋಸ್‌ ಸೆಲೆಬ್ರೇಷನ್‌ ಮಾಡಿಕೊಂಡಿದ್ದಾರೆ.

ರೋಸ್‌ ಶಾಸ್ತ್ರದಲ್ಲಿ ಸೋನಲ್ ಅವರು, ಬಂಗಾರ ವರ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಇನ್ನು ಸೆ. 1ರ ಕ್ರಿಶ್ಚಿಯನ್‌ ಸಂಪ್ರದಾಯದ ಮದುವೆ ಬಳಿಕ ಅದ್ಧೂರಿ ರೆಸೆಪ್ಷನ್‌ ಸಹ ಏರ್ಪಡಿಸಲಾಗಿದೆ.

 

ಇದನ್ನು ಓದಿ : ಆರ್ಮುಗ ರವಿಶಂಕರ್ ಪುತ್ರನ ಚೊಚ್ಚಲ ಸಿನಿಮಾ – ‘ಸುಬ್ರಮಣ್ಯ’ ಚಿತ್ರದ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರವಿಶಂಕರ್‌..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here