ಕನ್ನಡ ಚಿತ್ರರಂಗದಲ್ಲಿಯೂ ಕಾಸ್ಟಿಂಗ್ ಕೌಚ್, ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಈ ನಿಟ್ಟಿನಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಆದ ಜಸ್ಟಿಸ್ ಹೇಮಾ ಸಮಿತಿ ಮಾದರಿಯಲ್ಲಿ ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚಿಸುವಂತೆ ಒತ್ತಾಯ ಕೇಳಿ ಬಂದಿತ್ತು. ಈ ವಿಚಾರದ ಕುರಿತು ಫಿಲ್ಮ ಚೆೇಂಬರ್ನಲ್ಲಿ ನಡೆಸಲಾಗಿದ್ದ ಸಭೆಯಲ್ಲಿ ಪರ- ವಿರೋಧದ ಜಟಾಪಟಿ ಜೋರಾಗಿಯೇ ನಡೆದಿತ್ತು.
ಸಭೆಯ ನಿರ್ಧಾರದ ಬಗ್ಗೆ ಕವಿತಾ ಲಂಕೇಶ ಅವರು ನಮಗೆ ಮಾತನಾಡೋಕೆ ಅವಕಾಶವೇ ಕೊಟ್ಟಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ. ಮಹಿಳೆಯರಿಗೆ ಯಾವುದೇ ಸಮಸ್ಯೆಯಾಗಿಲ್ಲ ಅಂತ ಹೇಳಿದ್ರು. ಆವಾಗ ನಟಿಯರನ್ನು ಮಾತನಾಡೋಕೆ ಬಿಡ್ತಿರಲಿಲ್ಲ. ಈಗ ಮಹಿಳೆಯೇ ಮಂದೆ ಬರ್ತಿದ್ದಾರೆ ಎಂದು ನಾಗಲಕ್ಷ್ಮೀ ಹೇಳಿದ್ರು. ಕಾನ್ಫಿಡೆನ್ಷಿಯಲ್ ಸರ್ವೇ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದು ಒಳ್ಳೆಯದೇ. ಆದ್ರೆ ಇಲ್ಲಿ ಪುರುಷರು ಯಾವುದೇ ರೀತಿಯ ಶೋಷಣೆ ಆಗ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಕವಿತಾ ಲಂಕೇಶ್ ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನು ಕಮಿಟಿ ರಚನೆ ಆಗಬೇಕು ಎಂದು ಹೇಳಿರುವ ಕವಿತಾ ಲಂಕೇಶ್, ನಾವು ನಿವೃತ್ ಜಡ್ಜ್ ನೇಮಕ ಮಾಡಿ ಕಮಿಟಿ ರಚನೆ ಮಾಡಿ ಅಂತ ತಿಳಿಸಿದ್ವಿ. ಜಡ್ಜ್ ಪುರುಷರು ಇರಲಿ ಎಂದು ಕೂಡ ತಿಳಿಸಿದ್ವಿ .ಇದಕ್ಕೆ ವಿರೋಧ ಬಂತು. ಸಮಿತಿ ಬೇಡ ಅಂತನೂ ಕೆಲವರು ಹೇಳಿದ್ರು. ಮಹಿಳೆಯರು ಇಲ್ಲದೇ ಸಿನಿಮಾ ಮಾಡಬೇಕು, ವ್ಯಾಪಾರ ನಿಂತು ಹೋಗುತ್ತೆ ಅಂತಲೂ ಹೇಳಿದ್ರು ಎಂದಿದ್ದಾರೆ.
ಮಹಿಳೆಯರು ಇಲ್ಲದೇನೇ ಸಿನಿಮಾ ಮಾಡ್ತೀವಿ ಅಂತಿದ್ದಾರೆ. ಇಲ್ಲೂ ಕೂಡ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ನಮ್ಮ ಬಳಿ ದೂರು ನೀಡಲು ಒಂದು ಹೆಲ್ಪ್ಲೈನ್ ಮಾಡಬೇಕು. ಅದಕ್ಕೆ ಕಮಿಟಿ ಬೇಕೆ ಬೇಕು ಅಂತ ನಿರ್ಮಾಪಕಿ ಕವಿತಾ ಲಂಕೇಶ್ ತಿಳಿಸಿದ್ದಾರೆ.
ಇದನ್ನೂ ಓದಿ : ತೊಡೆ ಮೇಲೆ ಪ್ರೇಯಸಿಯನ್ನು ಕೂರಿಸಿಕೊಂಡು ಜಾಲಿ ರೈಡ್ – ವಿಡಿಯೋ ವೈರಲ್..!