Download Our App

Follow us

Home » ಸಿನಿಮಾ » ಆರ್ಮುಗ ರವಿಶಂಕರ್ ಪುತ್ರನ ಚೊಚ್ಚಲ ಸಿನಿಮಾ – ‘ಸುಬ್ರಮಣ್ಯ’ ಚಿತ್ರದ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರವಿಶಂಕರ್‌..!

ಆರ್ಮುಗ ರವಿಶಂಕರ್ ಪುತ್ರನ ಚೊಚ್ಚಲ ಸಿನಿಮಾ – ‘ಸುಬ್ರಮಣ್ಯ’ ಚಿತ್ರದ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರವಿಶಂಕರ್‌..!

ಬಹುಭಾಷಾ ನಟ ರವಿಶಂಕರ್‌ ಮಗನಿಗಾಗಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಆರ್ಮುಗ ರವಿಶಂಕರ್ ಮತ್ತೆ ನಿರ್ದೇಶನಕ್ಕೆ ಮರಳಿರುವುದು ಗೊತ್ತೇ ಇದೆ. ಡೈರೆಕ್ಟರ್ ಕ್ಯಾಪ್ ತೊಟ್ಟು ಮಗ ಅದ್ವೆಯನ್ನು ಸುಬ್ರಹ್ಮಣ್ಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಕಳೆದ ಆಯುಧ ಪೂಜೆಗೆ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿವರೆಗೂ ಸುಬ್ರಹ್ಮಣ್ಯ ಸಿನಿಮಾದ ಬಗ್ಗೆ ಸಣ್ಣ ಅಪ್ ಡೇಟ್ ಕೂಡ ಸಿಕ್ಕಿರಲಿಲ್ಲ. ಈಗ ಚಿತ್ರತಂಡದ ಹೊಸ ಸಮಾಚಾರ ರಿವೀಲ್ ಮಾಡಿದೆ.

ಸುಬ್ರಹ್ಮಣ್ಯ ಸಿನಿಮಾದ 60% ಭಾಗದ ಶೂಟಿಂಗ್ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್-ಪ್ರೊಡಕ್ಷನ್ ಕೆಲಸ ಮುಂಬೈನ ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಸ್ಟುಡಿಯೋದಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ಹಲವಾರು ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ VFX ಮತ್ತು CGI ಕೆಲಸಗಳು ನಡೆಯುತ್ತಿವೆ. ಪ್ರೀಮಿಯಂ ಲಾರ್ಜ್ ಫಾರ್ಮ್ಯಾಟ್ ಮತ್ತು ಐಮ್ಯಾಕ್ಸ್ ಥಿಯೇಟರ್‌ಗಳಲ್ಲಿ ಅದ್ಭುತ ಫೀಲ್ ಕೊಡುವ ರೀತಿಯಲ್ಲಿ ಸುಬ್ರಹ್ಮಣ್ಯ ಸಿನಿಮಾವನ್ನು ಕಟ್ಟಿಕೊಡಲಾಗುತ್ತಿದೆ.

ಸುಬ್ರಹ್ಮಣ್ಯ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಚಿತ್ರತಂಡ ಶೀಘ್ರದಲ್ಲೇ ಅನಾವರಣಗೊಳಿಸಲು ಮುಂದಾಗಿದೆ. ಈ ಪೋಸ್ಟರ್ ಮೂಲಕ ಸುಬ್ರಹ್ಮಣ್ಯ ಪ್ರಪಂಚವನ್ನು ಚಿತ್ರತಂಡ ಪರಿಚಯಸಲು ಹೊರಟಿದೆ. ಸೋಷಿಯೋ ಫ್ಯಾಂಟಸಿ ಅಡ್ವೆಂಚರ್ಸ್ ಸಿನಿಮಾವನ್ನು ಎಸ್ ಜಿ ಮೂವೀ ಮೇಕರ್ಸ್ ಬ್ಯಾನರ್ ನಡಿ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ಬಂಡವಾಳ ಹಾಕಿದ್ದು, ಪ್ರವೀಣಾ ಕಡಿಯಾಲ ಹಾಗೂ ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ಸಲಾರ್ ಮತ್ತು ಕೆಜಿಎಫ್ ಸರಣಿ ಸಿನಿಮಾಗಳ ಸಂಗೀತ ನೀಡಿರುವ ರವಿ ಬಸ್ರೂರ್ ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಫಸ್ಟ್ ಲುಕ್ ಗೂ‌‌‌ ಮೊದ್ಲೇ ಪ್ರೀ-ಲುಕ್ ರಿಲೀಸ್

ಸುಬ್ರಹ್ಮಣ್ಯ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೂ ಮುನ್ನ ಚಿತ್ರತಂಡ ಪ್ರೀ ಲುಕ್ ಅನಾವರಣ ಮಾಡಲಾಗಿದೆ. ಪಾಳು ಬಿದ್ದಿರುವ ದೇಗುಲದ ಮುಂದೆ ನಾಯಕ ಅದ್ವೆ ಕೈಯಲ್ಲಿ ಪಂಜು ಹಿಡಿದು ಬ್ಯಾಕ್ ಪೋಸ್ ಕೊಟ್ಟಿರುವ ಪ್ರೀ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಬಹಳ ಕುತೂಹಲ ಹೆಚ್ಚಿಸುವ ಪ್ರೀ ಲುಕ್ ಫಸ್ಟ್ ಲುಕ್ ಮೇಲೆ ನಿರೀಕ್ಷೆ ಹೆಚ್ಚಿಸಿದೆ.

ವಿಘ್ನೇಶ್ ರಾಜ್ ಕ್ಯಾಮೆರಾ ಹಿಡಿದಿದ್ದು, ವಿಜಯ್ ಎಂ ಕುಮಾರ್ ಸಂಕಲನ ಸುಬ್ರಹ್ಮಣ್ಯ ಸಿನಿಮಾಕ್ಕಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸುಬ್ರಹ್ಮಣ್ಯ ಸಿನಿಮಾ ತಯಾರಾಗುತ್ತಿದೆ. ಕಳೆದ 20 ವರ್ಷಗಳ ಹಿಂದೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀಗೆ ಮೊದಲ ಬಾರಿಗೆ ಪಿ.ರವಿಶಂಕರ್ ಆ್ಯಕ್ಷನ್ ಕಟ್ ಹೇಳಿದ್ದರು. ದುರ್ಗಿ ಸಿನಿಮಾ ಡೈರೆಕ್ಷನ್ ಮಾಡುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಅವತ್ತಿಗೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ತೆಲುಗಿಗೆ ರಿಮೇಕ್ ಕೂಡ ಆಗಿತ್ತು. ಈಗ 20 ವರ್ಷದ ಬಳಿಕ ಮಗ ಅದ್ವೆಗಾಗಿ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

ಇದನ್ನೂ ಓದಿ : ದರ್ಶನ್​ ಆಂಡ್ ಡಿ ಫ್ಯಾನ್ಸ್​​ಗೆ ಗುಮ್ಮಿದ ಕಿಚ್ಚ ಸುದೀಪ್..!

Leave a Comment

DG Ad

RELATED LATEST NEWS

Top Headlines

ಶಾಲಾ ಮಕ್ಕಳ ಕ್ಷೀರ ಭಾಗ್ಯಕ್ಕೆ ಕನ್ನ ಹಾಕಿದ ಹೆಡ್​​ ಮಾಸ್ಟರ್ – ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು..!

ಗುಲ್ಬರ್ಗ : ಅಕ್ಷರ ದಾಸೋಹ ಯೋಜನೆಯ ಕ್ಷೀರ ಭಾಗ್ಯಕ್ಕೆ ಹೆಡ್​​ ಮಾಸ್ಟರರೇ ಕನ್ನ ಹಾಕಿರುವ ಘಟನೆಯೊಂದು ನಡೆದಿದೆ. ಗುಲ್ಬರ್ಗದ ಅಫಜಲಪುರ ತಾಲ್ಲೂಕಿನ ಸ್ಟೇಷನ್ ಗಾಣಗಾಪುರ ಗ್ರಾಮದ ಸರ್ಕಾರಿ

Live Cricket

Add Your Heading Text Here