ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಇತ್ತೀಚೆಗೆ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್ನಲ್ಲಿ ಅದ್ದೂರಿಯಾಗಿ ನಡೆದ ಮದುವೆಗೆ ಬಂಧು ಮಿತ್ರರು, ಚಿತ್ರರಂಗದ ಅನೇಕ ನಟ- ನಟಿ, ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದರು.
ಮೊನ್ನೆಯಷ್ಟೇ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ ಈ ಜೋಡಿ ಇದೀಗ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ಮಂಗಳೂರಿನ ಚರ್ಚ್ ಒಂದರಲ್ಲಿ ಸೋನಲ್ ಮತ್ತು ತರುಣ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ.
ಅದಕ್ಕೂ ಒಂದು ದಿನ ಮೊದಲು ಮಂಗಳೂರಿನ ಸೋನಲ್ ಮನೆಯಲ್ಲಿ ರೋಸ್ ಶಾಸ್ತ್ರ ಮಾಡಲಾಗಿದೆ. ರೋಸ್ ಶಾಸ್ತ್ರದಲ್ಲಿ ಭಾಗಿಯಾದ ಸೋನಲ್ ಮೊಂಥೆರೋ ಅವರು, ಕುಟುಂಬಸ್ಥರು, ಸ್ನೇಹಿತರ ಜೊತೆಗೆ ರೋಸ್ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ.
ರೋಸ್ ಶಾಸ್ತ್ರದಲ್ಲಿ ಸೋನಲ್ ಅವರು, ಬಂಗಾರ ವರ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಇನ್ನು ಸೆ. 1ರ ಕ್ರಿಶ್ಚಿಯನ್ ಸಂಪ್ರದಾಯದ ಮದುವೆ ಬಳಿಕ ಅದ್ಧೂರಿ ರೆಸೆಪ್ಷನ್ ಸಹ ಏರ್ಪಡಿಸಲಾಗಿದೆ.
ಇದನ್ನು ಓದಿ : ಆರ್ಮುಗ ರವಿಶಂಕರ್ ಪುತ್ರನ ಚೊಚ್ಚಲ ಸಿನಿಮಾ – ‘ಸುಬ್ರಮಣ್ಯ’ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ರವಿಶಂಕರ್..!