ಹಾಸನ : ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿರುವ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಪ್ರಕರಣದ ತನಿಖೆಗೆ CID ADGP ಬಿ.ಕೆ.ಸಿಂಗ್ ನೇತೃತ್ವದಲ್ಲಿ SIT ರಚನೆ ಮಾಡಲಾಗಿದೆ. ಈ ತಂಡದಲ್ಲಿ ಇಬ್ಬರು ಎಸ್ಪಿಗಳು, ಐವರು DySPಗಳು ಸೇರಿ ಇತರೆ ಅಧಿಕಾರಿಗಳನ್ನು ತಂಡದಲ್ಲಿ ರಚನೆ ಮಾಡಲಾಗಿದೆ. ಇದರ ಬೆನ್ನಲ್ಲೇ ಪೆನ್ಡ್ರೈವ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಅಂತ ಹೇಳಲಾದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ವಿಡಿಯೋಗಳು ಜಸ್ಟ್ ಸ್ಯಾಂಪಲ್ ಅಷ್ಟೇ. ಕಂಪ್ಲೀಟ್ ಪಿಕ್ಚರ್ ಪ್ರಜ್ವಲ್ ಪೆನ್ಡ್ರೈವ್ನಲ್ಲಿದೆ. ಆ ಪೆನ್ಡ್ರೈವ್ನಲ್ಲಿ ಕನ್ನಡದ ಪ್ರಖ್ಯಾತ ಆ್ಯಂಕರ್ಗಳು ಇದ್ದಾರೆ ಎಂದು ಹೇಳಲಾಗುತ್ತಿದೆ. ಅದು ಕೂಡ ಒಬ್ಬರಲ್ಲ, ಇಬ್ಬರಲ್ಲ ಆರು ಜನ ಆ್ಯಂಕರ್ಗಳು ಆ ಪೆನ್ಡ್ರೈವ್ನಲ್ಲಿ ಇರೋ ಮಾಹಿತಿ ಲಭ್ಯವಾಗಿದೆ. ಇನ್ನೊಂದು ಶಾಕಿಂಗ್ ವಿಚಾರ ಏನಂದ್ರೆ ಕರ್ನಾಟಕದಲ್ಲಿ ಮನೆ ಮಾತಾಗಿರುವ ನಾಲ್ವರು ಹೀರೋಯಿನ್ಗಳು ಇದ್ದಾರೆ.
ಅಷ್ಟೇ ಅಲ್ಲ ಫೇಮಸ್ ಆಗಿರುವ ಐದು ಮಂದಿ ಮಾಡೆಲ್ಗಳು ಕೂಡ ಇದ್ದು, ಇದರ ಜೊತೆಗೆ ಸೆಲೆಬ್ರಿಟಿಗಳ ಮತ್ತು ಹಲವಾರು ಫೇಮಸ್ ಮಹಿಳೆಯರು ಕೂಡ ಪೆನ್ಡ್ರೈವ್ನಲ್ಲಿದ್ದಾರೆ. ಒಂದು ವೇಳೆ ಆ ಪೆನ್ಡ್ರೈವ್ನಲ್ಲಿರೋ ದೃಶ್ಯಗಳು ಹೊರಬಿದ್ದರೆ ರಾಜ್ಯದಲ್ಲಿ ಕರ್ಮಕಾಂಡದ ಬಿರುಗಾಳಿ ಎದ್ದೇಳೂದಂತೂ ಗ್ಯಾರಂಟಿ. ಪ್ರಜ್ವಲ್ ರೇವಣ್ಣ ಕೊರಳಿಗೆ ಉರುಳಾಗೋದು ಕೂಡ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ- ಕಾಂಗ್ರೆಸ್ ಕಾರ್ಯಕರ್ತ ನವೀನ್ಗೌಡ ವಿರುದ್ಧ FIR ದಾಖಲು..!