ಬೆಂಗಳೂರು : ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬಂಧನದಲ್ಲಿದ್ದ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮೇ.13ರಂದು ಜಾಮೀನು ಮಂಜೂರು ಮಾಡಿದೆ. ಇದೀಗ ಬೇಲ್ ಮೇಲಿರೋ ರೇವಣ್ಣಗೆ SIT ಶಾಕ್ ನೀಡಿದೆ.
ಜಾಮೀನು ನಂತರವೂ ರೇವಣ್ಣಗೆ ಕಾನೂನು ಕಂಟಕ ತಪ್ಪಿಲ್ಲ. ಕಿಡ್ನಾಪ್ ಕೇಸ್ನಲ್ಲಿ ಮೇಲ್ಮನವಿಗೆ SIT ತಯಾರಿ ನಡೆಸುತ್ತಿದ್ದು, ಜಾಮೀನು ರದ್ದು ಕೋರಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು SIT ಚಿಂತನೆ ನಡೆಸಿದೆ. ತನಿಖಾ ಹಂತದಲ್ಲಿ SIT ಈ ಪ್ರಕರಣ ಸಂಬಂಧ ಸಾಕಷ್ಟು ಎವಿಡೆನ್ಸ್ಗಳನ್ನು ಕಲೆ ಹಾಕಿದೆ. SIT ಎರಡನೇ ಆರೋಪಿ ಸತೀಶ್ ಬಾಬು ಹೇಳಿಕೆ ಪಡೆದಿದ್ದು, ಮಹಿಳೆಯನ್ನು ಕರೆದೊಯ್ದಿರೋದು ಮೇಲ್ನೋಟಕ್ಕೆ ಪತ್ತೆಯಾಗಿದೆ.
ಸತೀಶ್ ಬಾಬು ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು SIT ವಾದ ಮಾಡಲಿದ್ದು, ರೇವಣ್ಣ ವಿರುದ್ಧ ಸಾಕ್ಷಿ ಕಲೆ ಹಾಕಲು ತನಿಖೆ ಚುರುಕುಗೊಂಡಿದೆ. ಸಂತ್ರಸ್ತೆ ವಿಡಿಯೋ ಬಗ್ಗೆಯೂ ಸತ್ಯಾಸತ್ಯತೆ ಪರಿಶೀಲನೆ ನಡೆಸಲಿದ್ದಾರೆ. ಮೇಲ್ಮನವಿ ಅರ್ಜಿ ಹಾಕುವ ಸಂಬಂಧ ಕಾನೂನು ಸಲಹೆ ಪಡೆದಿದ್ದು, ಹೈಕೋರ್ಟ್ ವಕೀಲರ ಜೊತೆ SIT ಚರ್ಚೆ ನಡೆಸಿದೆ. ಎರಡು-ಮೂರು ದಿನಗಳಲ್ಲಿ ಮೇಲ್ಮನವಿ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ : ಸಿಂಗಲ್ ಸ್ಕ್ರೀನ್ಗೆ ಪ್ರೇಕ್ಷಕರ ಬರ : ಇದೇ ಶುಕ್ರವಾರದಿಂದ 400ಕ್ಕೂ ಹೆಚ್ಚು ಥಿಯೇಟರ್ ತಾತ್ಕಾಲಿಕ ಸ್ಥಗಿತ..!