Download Our App

Follow us

Home » ಸಿನಿಮಾ » ಸಿಂಗಲ್ ಸ್ಕ್ರೀನ್​​ಗೆ ಪ್ರೇಕ್ಷಕರ ಬರ : ಇದೇ ಶುಕ್ರವಾರದಿಂದ 400ಕ್ಕೂ ಹೆಚ್ಚು ಥಿಯೇಟರ್​ ತಾತ್ಕಾಲಿಕ ಸ್ಥಗಿತ..!

ಸಿಂಗಲ್ ಸ್ಕ್ರೀನ್​​ಗೆ ಪ್ರೇಕ್ಷಕರ ಬರ : ಇದೇ ಶುಕ್ರವಾರದಿಂದ 400ಕ್ಕೂ ಹೆಚ್ಚು ಥಿಯೇಟರ್​ ತಾತ್ಕಾಲಿಕ ಸ್ಥಗಿತ..!

ತೆಲಂಗಾಣದಲ್ಲಿ ಸಿನಿಮಾಗಳು, ಚಿತ್ರಮಂದಿರಗಳು ಅನಿರೀಕ್ಷಿತ ಅಡೆತಡೆಗಳನ್ನು ಎದುರಿಸುತ್ತಿವೆ. ಇದು ​​ಥಿಯೇಟರ್​ಗಳನ್ನು ​ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತಹ ಕ್ರಮ ಕೈಗೊಳ್ಳಲು ಕಾರಣವಾಗಿದೆ. ಹಣಕಾಸಿನ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ, ತೆಲಂಗಾಣದಾದ್ಯಂತ 400ಕ್ಕೂ ಹೆಚ್ಚು ಸಿಂಗಲ್​ ಸ್ಕ್ರೀನ್​​​ ಸಿನಿಮಾ ಹಾಲ್‌ಗಳನ್ನು 10 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ತೆಲಂಗಾಣ ರಾಜ್ಯ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರ ಸಂಘ ಈ ನಿರ್ಧಾರ ತೆಗೆದುಕೊಂಡಿದ್ದು, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಆಗುತ್ತಿರುವ ನಷ್ಟದ ಕಾರಣದಿಂದಾಗಿ ಈ ನಿರ್ಧಾರವನ್ನು ಸಂಘವು ತೆಗೆದುಕೊಂಡಿದೆ. ಐಪಿಎಲ್, ಲೋಕಸಭೆ ಚುನಾವಣೆ ಹಾಗೂ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗಳು ಇದ್ದ ಕಾರಣ ತೆಲುಗು ಚಿತ್ರರಂಗದಿಂದ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗಿಲ್ಲ. ಹಾಗಾಗಿ ಚಿತ್ರಮಂದಿರಗಳನ್ನು ನಡೆಸುವುದು ಕಷ್ಟವಾಗಿದ್ದು, ಹತ್ತು ದಿನಗಳ ಕಾಲ ಚಿತ್ರಮಂದಿರ ಮುಚ್ಚಿ ದಿನವಹಿ ಖರ್ಚನ್ನಾದರೂ ಉಳಿಸುವ ಲೆಕ್ಕಾಚಾರವನ್ನು ಮಾಲೀಕರು ಹಾಕಿದ್ದಾರೆ.

ಮೇ 17ರಿಂದ ತೆಲಂಗಾಣದಾದ್ಯಂತ ಎಲ್ಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಂದ್ ಆಗಿರಲಿವೆ. ಮೇ 25ಕ್ಕೆ ಮತ್ತೆ ಎಲ್ಲ ಚಿತ್ರಮಂದಿರಗಳು ಕಾರ್ಯಾರಂಭ ಮಾಡಲಿವೆ. ಆ ವೇಳೆಗಾಗಲೆ ಹೊಸ ಸಿನಿಮಾಗಳ ರಿಲೀಸ್ ಶುರುವಾಗಿರುತ್ತದೆ. ಮೂರನೇ ಹಂತದ ನಾಯಕರ ಕೆಲವು ಸಿನಿಮಾಗಳು ಆ ವೇಳೆಗೆ ಬಿಡುಗಡೆ ಆಗಲಿವೆ. ‘ಗ್ಯಾಂಗ್ಸ್ ಆಫ್ ಗೋಧಾವರಿ’, ‘ಹರೋಂ ಹರ’, ‘ಲವ್ ಮೀ’, ‘ಸತ್ಯಭಾಮ’ ಸಿನಿಮಾಗಳು ಆ ವೇಳೆಗೆ ಬಿಡುಗಡೆ ಆಗಲಿರುವ ಕಾರಣ ಮೇ 25ಕ್ಕೆ ಚಿತ್ರಮಂದಿರಗಳು ಮತ್ತೆ ಕಾರ್ಯಾರಂಭ ಮಾಡಲಿವೆ.

ಇದನ್ನೂ ಓದಿ : ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸ್ಕೆಚ್ – ಶಂಕಿತ ಉಗ್ರ NIA ಬಲೆಗೆ..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here