ಬೆಂಗಳೂರು : ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಾಹಿತಿಗಳು, ಚಿಂತಕರು, ಹೋರಾಟಗಾರರು ಸೇರಿ 116 ಪ್ರಜ್ಞಾವಂತ ನಾಗರಿಕರು ಪತ್ರ ಬರೆದಿದ್ದಾರೆ.
ಸಿಎಂಗೆ ಬರೆದ ಪತ್ರದಲ್ಲಿ, ಪ್ರಜ್ವಲ್ ರೇವಣ್ಣ ಎಲ್ಲೇ ಇದ್ದರೂ ಅರೆಸ್ಟ್ ಮಾಡ್ಬೇಕು. ಕಾರ್ತಿಕ್ನನ್ನೂ ಅರೆಸ್ಟ್ ಮಾಡಿ ಸೂಕ್ತ ಕ್ರಮ ಜರುಗಿಸಬೇಕು. ಇಂಥಾ ದೌರ್ಜನ್ಯ ನಡೆಸುತ್ತಿರುವ ಕುಟುಂಬಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಸಾಹಿತಿ, ಹೋರಾಟಗಾರರಾದ ಬಿ.ಟಿ.ಲಲಿತಾನಾಯಕ್, ಲೀಲಾ ಸಂಪಿಗೆ, ಕೆ.ಎಸ್.ವಿಮಲ, ದು.ಸರಸ್ವತಿ, ಮಾವಳ್ಳಿ ಶಂಕರ್, ಕೆ.ಷರೀಫ, ಕುಂ.ವೀರಭದ್ರಪ್ಪ, ವರಲಕ್ಷ್ಮಿ ಸೇರಿದಂತೆ 116 ಮಂದಿ ಆಗ್ರಹ ಮಾಡಿದ್ದಾರೆ. ಇದರೊಂದಿಗೆ 16 ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
16 ಪ್ರಮುಖ ಬೇಡಿಕೆಗಳು :
- ಪ್ರಜ್ವಲ್ ರೇವಣ್ಣ ಎಲ್ಲಿದ್ರೂ ಪತ್ತೆಮಾಡಿ ಬಂಧಿಸಿ,
- ಸಂತ್ರಸ್ತೆಯರು ಧೈರ್ಯವಾಗಿ ದೂರು ನೀಡುವ ಸ್ಥಿತಿ ನಿರ್ಮಿಸಿ
- ಹಗರಣ ಕುರಿತು ರಾಜಕೀಯ ಹೇಳಿಕೆಗಳನ್ನು ನಿರ್ಬಂಧಿಸಿ
- ಕಾಲಮಿತಿಯೊಳಗೆ SIT ತನಿಖೆ ಮಾಡಿಸಿ, ಬೇಲ್ಗೆ ಅವಕಾಶ ಬೇಡ
- ಲೈಂಗಿಕ ಕೃತ್ಯಗಳ ಚಿತ್ರೀಕರಣಕ್ಕೆ ಸಹಕರಿಸಿದವರ ಅರೆಸ್ಟ್ ಮಾಡಿ
- ಪ್ರಜ್ವಲ್ ಕಾರು ಚಾಲಕ ಕಾರ್ತಿಕ್‌ನನ್ನು ಕೂಡಲೇ ಬಂಧಿಸಿ
- ಈ ವಿಡಿಯೋ ತಮ್ಮ ಬಳಿ ಇವೆ ಎಂದವರ ಮೇಲೂ ಕ್ರಮ ಆಗಲಿ
- ವಿಡಿಯೋ ಹಂಚಿದವರ ವಿರುದ್ಧ ಸಂಚಿನ ಅಪರಾಧದಡಿ ಕೇಸ್ ಹಾಕಿ
- ಗೊತ್ತಿದ್ದೂ ಸುಮ್ಮನಿದ್ದ ಬಿಜೆಪಿ ನಾಯಕರನ್ನೂ ತನಿಖೆ ವ್ಯಾಪ್ತಿಗೆ ಸೇರಿಸಿ
- ಪ್ರಜ್ವಲ್ ತಂದೆ,ತಾಯಿ ಸೇರಿ ಕುಟುಂಬದವರ ಮೇಲೂ ಕ್ರಮ ಆಗಬೇಕು
- ವಿಫಲತೆ ತೋರಿದ ಗೃಹ ಇಲಾಖೆ, ಇಂಟಲಿಜೆನ್ಸ್ ಅಧಿಕಾರಿಗಳ ಮೇಲೆ ಕ್ರಮ ಆಗಲಿ
- ಜನರ ಮಾಹಿತಿ ಹಕ್ಕನ್ನು ಕಸಿದುಕೊಂಡ ಪ್ರಜ್ವಲ್ ಮೇಲೆ ಕ್ರಮ ಆಗ್ಬೇಕು
- ರೇವಣ್ಣ ಫ್ಯಾಮಿಲಿ ಶಿಫಾರಸಿನ ಮೇಲೆ ಹಾಸನದಲ್ಲಿರುವ ಅಧಿಕಾರಿಗಳ ಬದಲಿಸಿ
- ತನಿಖೆ ಮುಗಿಯುವವರೆಗೆ ರೇವಣ್ಣ ಶಾಸಕ ಸ್ಥಾನ ಸಸ್ಪೆಂಡ್ ಮಾಡಿ
- ರೇವಣ್ಣ ಫ್ಯಾಮಿಲಿಗೆ ನೀಡಿರುವ ಸರ್ಕಾರಿ ಸೌಲಭ್ಯ ವಾಪಸ್ ಪಡೆಯಿರಿ
- ಹೆಚ್ಡಿಡಿ, ಹೆಚ್ಡಿಕೆ, ಪ್ರಜ್ವಲ್ ತಂದಿರುವ ಇಂಜೆಕ್ಷನ್ ಆರ್ಡರ್ ರದ್ದು ಮಾಡಿಸಿ
ಇದನ್ನೂ ಓದಿ :‘ಡಬಲ್ ಇಸ್ಮಾರ್ಟ್’ ಚಿತ್ರದ ಟೀಸರ್ ರಿಲೀಸ್ – ಭರ್ಜರಿ ಆಕ್ಷನ್ ಮೂಲಕ ಎಂಟ್ರಿ ಕೊಟ್ಟ ರಾಮ್ ಪೋತಿನೇನಿ..!
Post Views: 236