Download Our App

Follow us

Home » ಸಿನಿಮಾ » ‘ಡಬಲ್ ಇಸ್ಮಾರ್ಟ್’ ಚಿತ್ರದ ಟೀಸರ್ ರಿಲೀಸ್ – ಭರ್ಜರಿ ಆಕ್ಷನ್ ಮೂಲಕ ಎಂಟ್ರಿ ಕೊಟ್ಟ ರಾಮ್ ಪೋತಿನೇನಿ..!

‘ಡಬಲ್ ಇಸ್ಮಾರ್ಟ್’ ಚಿತ್ರದ ಟೀಸರ್ ರಿಲೀಸ್ – ಭರ್ಜರಿ ಆಕ್ಷನ್ ಮೂಲಕ ಎಂಟ್ರಿ ಕೊಟ್ಟ ರಾಮ್ ಪೋತಿನೇನಿ..!

ಡ್ಯಾಷಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ಹಾಗೂ ಉಸ್ತಾದ್ ರಾಮ್ ಪೋತಿನೇನಿ ಕಾಂಬಿನೇಷನ್​​ನ ಬಹುನಿರೀಕ್ಷಿತ ಸಿನಿಮಾ ‘ಡಬಲ್ ಇಸ್ಮಾರ್ಟ್’. ಇಸ್ಮಾರ್ಟ್ ಶಂಕರ್ ಚಿತ್ರದ ಸೀಕ್ವೆಲ್ ಆಗಿರುವ ‘ಡಬಲ್ ಇಸ್ಮಾರ್ಟ್’ ಸಿನಿಮಾದ ಟೀಸರ್ ಇಂದು ಡೈನಾಮಿಕ್ ಸ್ಟಾರ್ ರಾಮ್ ಜನ್ಮದಿನಕ್ಕೆ ಬಿಡುಗಡೆ ಮಾಡಲಾಗಿದೆ. ಭರ್ಜರಿ ಆಕ್ಷನ್ ಮೂಲಕ ರಾಮ್ ಅಬ್ಬರಿಸಿದ್ದಾರೆ.

ಮಾಸ್ ಮತ್ತು ಆಕ್ಷನ್-ಪ್ಯಾಕ್ಡ್ ಟೀಸರ್​​​ನಲ್ಲಿ ರಾಮ್ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾವ್ಯಾ ಥಾಪರ್ ನಾಯಕಿಯಾಗಿ ನಟಿಸಿದ್ದು, ಸಂಜಯ್ ದತ್ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. 1.26 ಸೆಕೆಂಡ್ ಇರುವ ಟೀಸರ್​​​ನಲ್ಲಿ ರಾಮ್ ಪೋತಿನೇನಿ ಹಾಗೂ ಸಂಜು ಬಾಬು ಜುಗಲ್ಬಂದಿ ನೋಡುಗರಿಗೆ ಕಿಕ್ ಕೊಡ್ತಿದೆ.

ಡಬಲ್ ಆಕ್ಷನ್, ಡಬಲ್ ಎನರ್ಜಿ ಮತ್ತು ಡಬಲ್ ಫನ್‌ ಕೊಡುವ ‘ಡಬಲ್ ಇಸ್ಮಾರ್ಟ್’ ಟೀಸರ್ ಕ್ಲೈಮ್ಯಾಕ್ಸ್ ಸೀನ್ಸ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದೆ.

ಮಣಿ ಶರ್ಮಾ ಸಂಗೀತ ಚಿತ್ರಕ್ಕಿದೆ. ಕ್ರೇಜಿ ಪ್ಯಾನ್ ಇಂಡಿಯನ್ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ ಬ್ಯಾನರ್ ನಡಿ ಪೂರಿ ಜಗನ್ನಾಥ್, ಚಾರ್ಮಿ ಕೌರ್ ನಿರ್ಮಾಣದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿಬರುತ್ತಿದೆ.

ಇದನ್ನೂ ಓದಿ : ಎಸ್-ವ್ಯಾಸ ವಿಶ್ವವಿದ್ಯಾನಿಲಯದಿಂದ ಆಗಸ್ಟ್​​ನಲ್ಲಿ ನೂತನ ಕೋರ್ಸ್​ಗಳು ಆರಂಭ..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here