Download Our App

Follow us

Home » ರಾಜಕೀಯ » ಕಾಂಗ್ರೆಸ್​​ನ ಎರಡನೇ ಪಟ್ಟಿ ರಿಲೀಸ್ – ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟ..!

ಕಾಂಗ್ರೆಸ್​​ನ ಎರಡನೇ ಪಟ್ಟಿ ರಿಲೀಸ್ – ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟ..!

ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್​ ಕರ್ನಾಟಕ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ ಒಟ್ಟು 17 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್​​ ಘೋಷಿಸಿದೆ. ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸಲಿರುವ ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ 17 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಸಚಿವರ ಮಕ್ಕಳಿಗೆ ಮಣೆಹಾಕಲಾಗಿದೆ. ಕಾಂಗ್ರೆಸ್ 10 ಹೊಸ ಮುಖಗಳಿಗೆ ಮಣೆ ಹಾಕಿದ್ದು, ಈ ಪೈಕಿ ಪ್ರಭಾವಿ ಸಚಿವರ ಮಕ್ಕಳಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್​ ನೀಡಿದೆ. ಈ ಮೂಲಕ ಎಲೆಕ್ಷನ್​​​ ಗೆಲ್ಲಲು ಭರ್ಜರಿ ರಣತಂತ್ರ ರೂಪಿಸಿದೆ.

ಕರ್ನಾಟಕದ 17 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಹೀಗಿದೆ.

 • ಬಾಗಲಕೋಟೆ ಲೋಕಸಭಾ ಕ್ಷೇತ್ರ-ಸಂಯುಕ್ತಾ ಪಾಟೀಲ್‌
 • ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ-ಸೌಮ್ಯಾರೆಡ್ಡಿ
 • ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ-ಎಂ.ವಿ.ರಾಜೀವ್ ಗೌಡ
 • ಮೈಸೂರು ಲೋಕಸಭಾ ಕ್ಷೇತ್ರ-ಎಂ.ಲಕ್ಷ್ಮಣ್‌
 • ಚಿತ್ರದುರ್ಗ ಲೋಕಸಭಾ ಕ್ಷೇತ್ರ-ಬಿ.ಎನ್.ಚಂದ್ರಪ್ಪ
 • ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ-ಪದ್ಮರಾಜ್‌
 • ಉಡುಪಿ, ಚಿಕ್ಕಮಗಳೂರು ಕ್ಷೇತ್ರ-ಜಯಪ್ರಕಾಶ್ ಹೆಗ್ಡೆ
 • ಕಲಬುರಗಿ ಲೋಕಸಭಾ ಕ್ಷೇತ್ರ-ರಾಧಾಕೃಷ್ಣ ದೊಡ್ಡಮನಿ
 • ದಾವಣಗೆರೆ ಲೋಕಸಭಾ ಕ್ಷೇತ್ರ-ಪ್ರಭಾ ಮಲ್ಲಿಕಾರ್ಜುನ
 • ಬೆಂಗಳೂರು ಸೆಂಟ್ರಲ್‌ ಕ್ಷೇತ್ರ-ಮನ್ಸೂರ್ ಅಲಿಖಾನ್‌
 • ಉತ್ತರ ಕನ್ನಡ ಕ್ಷೇತ್ರ-ಡಾ.ಅಂಜಲಿ ನಿಂಬಾಳ್ಕರ್‌
 • ಧಾರವಾಡ ಲೋಕಸಭಾ ಕ್ಷೇತ್ರ-ವಿನೋದ್ ಅಸೋಟಿ
 • ಕೊಪ್ಪಳ ಲೋಕಸಭಾ ಕ್ಷೇತ್ರ-ರಾಜಶೇಖರ್ ಹಿಟ್ನಾಳ್‌
 • ಬೀದರ್ ಲೋಕಸಭಾ ಕ್ಷೇತ್ರ-ಸಾಗರ್ ಖಂಡ್ರೆ
 • ರಾಯಚೂರು ಲೋಕಸಭಾ ಕ್ಷೇತ್ರ-ಕುಮಾರ್‌ ಜಿ ನಾಯಕ್‌
 • ಬೆಳಗಾವಿ ಲೋಕಸಭಾ ಕ್ಷೇತ್ರ-ಮೃಣಾಲ್ ಹೆಬ್ಬಾಳ್ಕರ್‌
 • ಚಿಕ್ಕೋಡಿ ಲೋಕಸಭಾ ಕ್ಷೇತ್ರ-ಪ್ರಿಯಾಂಕಾ ಜಾರಕಿಹೊಳಿ

ಲಿಸ್ಟ್​ ಅನೌನ್ಸ್​ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಎಲೆಕ್ಷನ್ ಗೆಲ್ಲಲು​ ರಣತಂತ್ರ ಶುರು​ ಮಾಡಿದ್ದು, ನಾಳೆಯೇ ಸಿಎಂ-ಡಿಸಿಎಂ ನೇತೃತ್ವದಲ್ಲಿ ಮೆಗಾ ಮೀಟಿಂಗ್​​​ ನಡೆಯಲಿದೆ. ನಾಳೆ ಸಂಜೆ 4 ಗಂಟೆಗೆ ಮೊದಲ ಹಂತದ ಎಲ್ಲಾ ಕ್ಷೇತ್ರಗಳ ಲೀಡರ್ಸ್ ಜೊತೆ​ ಮೀಟಿಂಗ್​​ ಇರಲಿದೆ. ಎಲ್ಲಾ ಶಾಸಕರು, ಸೋತ ಅಭ್ಯರ್ಥಿಗಳು, ಜಿಲ್ಲಾ ಮಂತ್ರಿಗಳ ಜೊತೆ ಸಿದ್ದು, ಡಿಕೆಶಿ ಸಭೆ ಮಾಡಿ ಚರ್ಚಿಸಲಿದ್ದಾರೆ.

ಎಐಸಿಸಿ ಕಾರ್ಯದರ್ಶಿಗಳು ಇಂದು ಮಧ್ಯಾಹ್ನ ರಾಜ್ಯಕ್ಕೆ ಬರ್ತಿದ್ದು, ಚುನಾವಣಾ ತಂತ್ರಗಾರಿಕೆ ಬಗ್ಗೆ ಚರ್ಚಿಸಲು ಎಲ್ಲಾ ನಾಯಕರು ಸಿದ್ದರಾಗಿದ್ದಾರೆ. ನಾಳೆಯಿಂದ ರಾಜ್ಯದಲ್ಲಿ ಕಾಂಗ್ರೆಸ್​ನ ಗೆಲುವಿನ ತಂತ್ರಗಾರಿಕೆ ಸ್ಟಾರ್ಟ್ ಆಗಲಿದ್ದು,​ ಬಾಕಿ ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿ ಫೈನಲ್​​ ಬಗ್ಗೆ ಇಂದು ಮೀಟಿಂಗ್​ ನಡೆಯಲಿದೆ ಎಂದು ಹೇಳಲಾಗಿದೆ. ಚಾಮರಾಜನಗರ, ಕೋಲಾರ ಸೇರಿ 4 ಕ್ಷೇತ್ರಗಳ ಬಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಿ, ಸೋಮವಾರದ ಒಳಗೆ ಮೂರನೇ ಪಟ್ಟಿಯನ್ನು ಕಾಂಗ್ರೆಸ್​ ಫೈನಲ್​ ಮಾಡುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಯಾವಾಗ ಚುನಾವಣೆ..?
ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆದ್ರೆ, ಮೇ 7 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ :  ಮೆಟ್ರೋದಲ್ಲಿ ಮತ್ತೊಂದು ದುರಂತ : ಟ್ರ್ಯಾಕ್​ ಮೇಲೆ ಜಿಗಿದು ವಿದ್ಯಾರ್ಥಿ ಆತ್ಮಹ*ತ್ಯೆ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!

ಉಡುಪಿ : 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ಹಾಗಾಗಿ ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಪಿ.ಯಶೋಧಾ ನಾರಾಯಣ ಉಪಾಧ್ಯ

Live Cricket

Add Your Heading Text Here