ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆ ಚುರುಕಾಗಿದೆ. ನಟ ದರ್ಶನ್ ಅವರನ್ನು ಬಂಧಿಸಿದ ಬಳಿಕ ಮತ್ತಷ್ಟು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿರುವ ಪೊಲೀಸರು ಮತ್ತಷ್ಟು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದೀಗ ಪ್ರಕರಣದ ಉನ್ನತ ತನಿಖೆಗೆ ಜಂಗಮ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ. ಉನ್ನತ ತನಿಖೆಗೆ ಒತ್ತಡ ಹೇರಿರುವ ಜಂಗಮ ಸಮುದಾಯದ ಮುಖಂಡರು ರೇಣುಕಾಸ್ವಾಮಿ ಹತ್ಯೆ ಪ್ರಕರಣ ನಿಸ್ಪಕ್ಷಪಾತವಾಗಿ ತನಿಖೆಯಾಗಲಿ ಹಾಗೂ ಈ ಪ್ರಕರಣವನ್ನು CBIಗೆ ವಹಿಸಲಿ ಎಂದು ಆಗ್ರಹಿಸಿದ್ದಾರೆ.
ಇನ್ನು ರೇಣುಕಾಸ್ವಾಮಿ ಮೃತದೇಹ ಸಂಜೆ 7 ಗಂಟೆ ವೇಳೆಗೆ ಚಿತ್ರದುರ್ಗಕ್ಕೆ ಬರುವ ಸಾಧ್ಯತೆಯಿದೆ. ಮೃತದೇಹ ಚಿತ್ರದುರ್ಗಕ್ಕೆ ಬಂದ ಬಳಿಕ ಇಂದೇ ವೀರಶೈವ ಸಮುದಾಯದ ವಿಧಿವಿಧಾನದ ಪ್ರಕಾರ ಜೋಗಿಮಟ್ಟಿ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ರೇಣುಕಾಸ್ವಾಮಿ ಮರ್ಡರ್ ಕೇಸ್ಗೆ ಮತ್ತೊಂದು ಟ್ವಿಸ್ಟ್ - ಇದು ಸಡನ್ ಮರ್ಡರ್ ಅಲ್ಲವೇ ಅಲ್ಲ, ಪ್ರೀ ಪ್ಲಾನ್ ಮರ್ಡರ್..!