ಬೆಂಗಳೂರು : ರೇಣುಕಾಸ್ವಾಮಿ ಮರ್ಡರ್ ಕೇಸ್ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇದು ಸಡನ್ ಮರ್ಡರ್ ಅಲ್ಲವೇ ಅಲ್ಲ, ಪ್ರೀ ಪ್ಲಾನ್ ಮರ್ಡರ್ ಎಂದು ಹೇಳಲಾಗುತ್ತಿದ್ದು, ದರ್ಶನ್ ಶಿಷ್ಯರು ಹಾಕಿದ ಸ್ಕೆಚ್ಗೆ ರೇಣುಕಾಸ್ವಾಮಿ ಬಲಿಯಾದ್ರ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ನಾಲ್ಕೈದು ದಿನದ ಹಿಂದೆ ರಾಘವೇಂದ್ರ ಗ್ಯಾಂಗ್ ಯುವತಿಯಿಂದ ಫೋನ್ ಮಾಡಿಸಿ ರೇಣುಕಾಸ್ವಾಮಿಯನ್ನು ಟ್ರ್ಯಾಪ್ ಮಾಡಿಸಿದ್ದರು. ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘು ಪ್ಲಾನ್ ಮೇರೆಗೆ ರೇಣುಕಾ ಎಂಬುವವರನ್ನು ಚಳ್ಳಕೆರೆ ಸರ್ಕಲ್ ಬಾರ್ ಬಳಿಗೆ ರೇಣುಕಾ ಕರೆಸಿದ್ದರು.
ಆನಂತರ ರೇಣುಕಾ ಅವರನ್ನು ಬೆದರಿಸಿ ಕಾರ್ನಲ್ಲಿ ಕೂರಿಸಿಕೊಂಡು ಆರ್.ಆರ್.ನಗರದ ವಿನಯ್ ಶೆಡ್ನಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ದರು. ನಂತರ ರಾಘವೇಂದ್ರ ಗ್ಯಾಂಗ್ ಸಂಜೆವರೆಗೂ ವಿನಯ್ಗೆ ಸೇರಿದ್ದ ಪಬ್ನಲ್ಲಿ ಎಣ್ಣೆ ಹೊಡೆದು, ರಾತ್ರಿ 7 ಗಂಟೆ ಸುಮಾರಿಗೆ ಬಂದು ಮತ್ತೆ ಹಲ್ಲೆ ಮಾಡಿದ್ದರು.
ರಾತ್ರಿ 10 ಗಂಟೆ ಸುಮಾರಿಗೆ ಎಂಟ್ರಿ ಕೊಟ್ಟ ದರ್ಶನ್ ಬಂದು-ಬಂದವರೇ ರೇಣುಕಾಸ್ವಾಮಿಗೆ ಒದ್ದಿದ್ದಾರೆ. ಇನ್ನು ಮಾರಣಾಂತಿಕ ಹಲ್ಲೆಯಿಂದ ರೇಣುಕಾಸ್ವಾಮಿ ಜೀವ ಬಿಟ್ಟಿದ್ದು, ಅಣ್ಣಾ ಜೀವ ಬಿಟ್ಟವನೆ ಎಂದು ಹುಡುಗರು ದರ್ಶನ್ ಬಳಿ ಹೇಳಿದಾಗ ಎಲ್ಲಾದ್ರೂ ಎಸೆದುಬಿಡ್ರೋ ಎಂದು ತಿಳಿಸಿದ್ದಾರೆ.
ಅಲ್ಲಿಂದ ರೇಣುಕಾಸ್ವಾಮಿ ಶವವನ್ನು ಸುಮನಹಳ್ಳಿಗೆ ತಂದು ರಾಜಕಾಲುವೆಗೆ ಎಸೆದಿದ್ದ ಗ್ಯಾಂಗ್ ಶವ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತೆ ಎಂದು ಭಾವಿಸಿದ್ದರು. ಆದ್ರೆ ಜೋರು ಮಳೆ ಬರದೇ ಶವ ರಾಜಕಾಲುವೆಯಲ್ಲೇ ಬಿದ್ದಿತ್ತು ಎಂದು ಸಮೀಪದ ಅಪಾರ್ಟ್ಮೆಂಟ್ ಸೆಕ್ಯೂರಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದ.
ಇದನ್ನೂ ಓದಿ : ಒಂದು ವರ್ಷದ ಹಿಂದೆ ಮದುವೆ.. ಹ*ತ್ಯೆಯಾದ ರೇಣುಕಾಸ್ವಾಮಿ ಪತ್ನಿ ತುಂಬು ಗರ್ಭಿಣಿ..!