Download Our App

Follow us

Home » ರಾಷ್ಟ್ರೀಯ » ಭಾರತದ ಸಾಲದಲ್ಲಿ ದಾಖಲೆಯ 211% ಏರಿಕೆ..!

ಭಾರತದ ಸಾಲದಲ್ಲಿ ದಾಖಲೆಯ 211% ಏರಿಕೆ..!

ಬೆಂಗಳೂರು : ಭಾರತದ ಸಾಲ 211% ಏರಿಕೆಯಾಗಿದೆ. 1947ರಿಂದ 2014ರ ತನಕ 68 ವರ್ಷಗಳ ಅವಧಿಯಲ್ಲಿದ್ದ ದೇಶದ ಆಂತರಿಕ, ಬಾಹ್ಯ ಸಾಲದ ಪ್ರಮಾಣ 58 ಲಕ್ಷ ಕೋಟಿ ರೂ ಆಗಿದೆ. ಪ್ರಧಾನಿ ಮೋದಿ ಆಡಳಿತದ 10 ವರ್ಷಗಳಲ್ಲಿನ ಸಾಲ ಮೇ ತಿಂಗಳಾಂತ್ಯಕ್ಕೆ ಬರೋಬ್ಬರಿ 171 ಲಕ್ಷ ಕೋಟಿ ರೂ ಗಳ ಗಡಿ ದಾಟಲಿದೆ.

2022 – 23ನೇ ವಿತ್ತ ವರ್ಷಾಂತ್ಯಕ್ಕಿಂತ ಒಟ್ಟಾರೆ 152.61 ಲಕ್ಷ ಕೋಟಿ ರೂ ಸಾಲದ ಪ್ರಮಾಣ, ಕೇಂದ್ರ ನಿತ್ಯ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ ಬಜೆಟ್ ನಿರೀಕ್ಷೆಗಳ ಪ್ರಕಾರ 2023- 24ನೇ ವಿತ್ತ ವರ್ಷಾಂತ್ಯಕ್ಕೆ 168.72 ಲಕ್ಷ ಕೋಟಿ ರೂಗೆ ತಲುಪಲಿದೆ.

ಆಂತರಿಕ ಸಾಲ 142.77 ಲಕ್ಷ ಕೋಟಿ ರೂಗಳಿಂದ 2024ರ ಮಾರ್ಚ್ 30ಕ್ಕೆ 163.35 ಲಕ್ಷ ಕೋಟಿ ರೂ. ಗಳಿಗೇರಿದರೆ, ವಿದೇಶಿ ಸಾಲ 4.83 ಲಕ್ಷ ಕೋಟಿ ರೂಗಳಿಂದ 5.37 ಲಕ್ಷ ಕೋಟಿ ರೂಪಾಯಿಗಳಿಗೇರಲಿದೆ. ಒಟ್ಟಾರೆ 168. 72 ಲಕ್ಷ ಕೋಟಿ ರೂ. ಗೆ ಮುಟ್ಟಲಿದೆ. 2014-15ರಲ್ಲಿ ಭಾರತದ ವಿದೇಶ ಸಾಲ 4.61 ಲಕ್ಷ ಕೋಟಿ ರೂ, ಆಂತರಿಕ ಸಾಲ 49.6 ಲಕ್ಷ ಕೋಟಿ ರೂ, ಸಹಿತ ಒಟ್ಟಾರೆ 54.21 ಲಕ್ಷ ಕೋಟಿ ರೂ ಗಳಾಗಿತ್ತು. ಇದೀಗ ಭಾರತದ ಸಾಲ 211% ಏರಿಕೆಯಾಗಿದೆ.

ಇದನ್ನೂ ಓದಿ : ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಗುಡ್ ನ್ಯೂಸ್ : ವಿದೇಶಿ ನಗರಗಳಿಗೆ ಹೋಲಿಸಿದ್ರೆ ಬೆಂಗಳೂರಲ್ಲೇ ಕಡಿಮೆ ಟ್ರಾಫಿಕ್..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿಗೆ ನಾಯಿ ಮಾಂಸ ರವಾನೆ ಆರೋಪ : ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ – ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿ ಅರೆಸ್ಟ್..!

ಬೆಂಗಳೂರು : ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಿನ್ನೆ (ಜುಲೈ 26) ರಾಜಸ್ಥಾನದಿಂದ ಬಂದ

Live Cricket

Add Your Heading Text Here