ಬೆಂಗಳೂರು : ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ವಿದೇಶಿ ನಗರಗಳಿಗೆ ಹೋಲಿಸಿದ್ರೆ ಬೆಂಗಳೂರಲ್ಲೇ ಕಡಿಮೆ ಟ್ರಾಫಿಕ್ ಎಂದು ಗ್ಲೋಬಲ್ ಇಂಡೆಕ್ಸ್ನಲ್ಲಿ ಬೆಂಗಳೂರು ಟ್ರಾಫಿಕ್ ಸುಧಾರಣೆ ಬಗ್ಗೆ ರಿಪೋರ್ಟ್ ಬಂದಿದೆ.
ವಿಶ್ವದ ಹೆಚ್ಚು ಸಂಚಾರ ದಟ್ಟಣೆ ನಗರಗಳಲ್ಲಿ ಬೆಂಗಳೂರು 6ನೇ ಸ್ಥಾನದಲ್ಲಿದೆ. 2023ರ ಸಂಚಾರ ದಟ್ಟಣೆ ಬಗ್ಗೆ ಗ್ಲೋಬಲ್ ಇಂಡೆಕ್ಸ್ ವರದಿಯಲ್ಲಿ ಬಹಿರಂಗವಾಗಿದ್ದು, ನಗರದಲ್ಲಿ 10 ಕಿ.ಮೀ ತಲುಪಲು 28 ನಿಮಿಷ 10 ಸೆಕೆಂಡ್ ಬೇಕು. ಲಂಡನ್ನಲ್ಲಿ 10 ಕಿ.ಮೀ ತಲುಪಲು 37 ನಿಮಿಷ, 20 ಸೆಕೆಂಡ್ ಬೇಕು, 2022ರಲ್ಲಿ ನಗರದಲ್ಲಿ ವಾಹನದ ವೇಗ ಸರಾಸರಿ 14 ಕಿ.ಮೀ ಇತ್ತು.
2023ರ ವರದಿ ಪ್ರಕಾರ ಸರಾಸರಿ ವೇಗ 18 ಕಿ.ಮೀಗೆ ಹೆಚ್ಚಳವಾಗಿದೆ. ಟ್ರಾಫಿಕ್ ಕಡಿಮೆ ಮಾಡಲು ಟ್ರಾಫಿಕ್ ಪೊಲೀಸರು ಹೊಸ ಹೊಸ ಪ್ರಯೋಗಗಳನ್ನು ಆರಂಭಿಸಿದ್ದಾರೆ. ಟ್ರಾಫಿಕ್ ಪೊಲೀಸರ ನಿರಂತರ ಪ್ರಯತ್ನದಿಂದ ಗ್ಲೋಬಲ್ ಇಂಡೆಕ್ಸ್ ನಲ್ಲಿ ಬೆಂಗಳೂರು ಟ್ರಾಫಿಕ್ ಸುಧಾರಣೆಯಾಗಿದೆ.
ಇದನ್ನೂ ಓದಿ : ಬೆಂಗಳೂರು : ನಾಯಿ ವಿಚಾರಕ್ಕೆ ಬಾಡಿಗೆದಾರರು ಹಾಗೂ ಮಾಲೀಕರ ನಡುವೆ ಫೈಟ್..!