Download Our App

Follow us

Home » ಸಿನಿಮಾ » ಸಲ್ಮಾನ್ ಖಾನ್ ನಟನೆಯ ‘ಸಿಖಂದರ್‌’ಗೆ ನಾಯಕಿಯಾದ ಕಿರಿಕ್ ಬೆಡಗಿ ರಶ್ಮಿಕಾ..!

ಸಲ್ಮಾನ್ ಖಾನ್ ನಟನೆಯ ‘ಸಿಖಂದರ್‌’ಗೆ ನಾಯಕಿಯಾದ ಕಿರಿಕ್ ಬೆಡಗಿ ರಶ್ಮಿಕಾ..!

ಕನ್ನಡದ ಕಿರಿಕ್​ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನ ಬಹುಬೇಡಿಕೆಯ ನಟಿ. ಸೂಪರ್ ಸ್ಟಾರ್‌ಗಳ ಜೊತೆ ಸೂಪರ್ ಹಿಟ್‌ ಆಗುವಂತ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್‌ನಲ್ಲಿ ಬಂಪರ್‌ ಅವಕಾಶವೊಂದನ್ನು ಬಾಚಿಕೊಂಡಿದ್ದಾರೆ.

ಹೌದು, ರಣ್‌ಬೀರ್ ಕಪೂರ್ ಜೊತೆ ರಶ್ಮಿಕಾ ರೊಮ್ಯಾನ್ಸ್ ಮಾಡಿದ್ದಾಯ್ತು. ಈಗ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಡ್ಯುಯೇಟ್‌ ಹಾಡಲು ರೆಡಿಯಾಗಿದ್ದಾರೆ. ಪುಷ್ಪ, ಅನಿಮಲ್ ಸಿನಿಮಾದ ಬಳಿಕ ರಶ್ಮಿಕಾ ಮಂದಣ್ಣ ಹವಾ ಚಿತ್ರರಂಗದಲ್ಲಿ ತುಂಬಾನೇ ಜಾಸ್ತಿಯಾಗಿದೆ. ಸ್ಟಾರ್ ನಟರ ಚಿತ್ರಕ್ಕೆ ರಶ್ಮಿಕಾನೇ ಬೇಕು ಎಂಬಷ್ಟರ ಮಟ್ಟಿಗೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಸಲ್ಮಾನ್‌ ಖಾನ್ ನಟನೆಯ ‘ಸಿಖಂದರ್’ ಸಿನಿಮಾಗೆ ರಶ್ಮಿಕಾ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಸದಾ ಸೂಪರ್​ ಹಿಟ್​ ಕಥೆಗಳನ್ನ ಚ್ಯೂಸ್​ ಮಾಡ್ತಾರೆ. ಇದ್ರಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸುವ ಆಫರ್​ ಬಂದಾಗ ರಶ್ಮಿಕಾ ಕಥೆಯನ್ನು ಲೆಕ್ಕಿಸದೇ, ಸಲ್ಲು ಹೆಸರು ಕೇಳ್ತಿದಂತೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.

ಸಲ್ಮಾನ್ ಖಾನ್ ‘ಸಿಖಂದರ್’ ಅನ್ನೋ ಸಿನಿಮಾದಲ್ಲಿ ಡಿಫರೆಂಟ್​ ಲುಕ್​ನಲ್ಲಿ ಅಬ್ಬರಿಸಲಿದ್ದು, ಇದೊಂದು ಆಕ್ಷನ್ ಥ್ರಿಲ್ಲರ್ ಸ್ಟೋರಿಯಾಗಿದೆ ಎಂದು ಹೇಳಲಾಗಿದೆ. ಈ ಸಿನಿಮಾವನ್ನು ಸಲ್ಮಾನ್ ಖಾನ್​ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಕ್ಕೆ ತಮಿಳಿನ ಸೂಪರ್ ಹಿಟ್ ನಿರ್ದೇಶಕ ಮುರುಗದಾಸ್ ನಿರ್ದೇಶನ ಮಾಡಲಿದ್ದಾರೆ.

ಭಾರಿ ಬಜೆಟ್​ನ ಸಿನಿಮಾ ಇದಾಗಿದ್ದು, ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುರುಗದಾಸ್ ಅನುಭವಿ ಹಾಗೂ ಪ್ರತಿಭಾವಂತ ನಿರ್ದೇಶಕ ಆಗಿದ್ದು, ಸೋಲಿನ ಸುಳಿಯಲ್ಲಿರುವ ಸಲ್ಮಾನ್ ಖಾನ್​ಗೆ ಹಿಟ್ ಸಿನಿಮಾ ನೀಡುವ ಪಣ ತೊಟ್ಟಿದ್ದು, ಮುಂದಿನ ವರ್ಷ ಅಂದ್ರೆ 2025ರ ಈದ್​ ಹಬ್ಬಕ್ಕೆ ಸಿನಿಮಾ ಅದ್ಧೂರಿಯಾಗಿ ರಿಲೀಸ್​ ಆಗಲಿದೆ.

ಸಲ್ಮಾನ್​ ಖಾನ್ ಯಾವ್ ಸಿನಿಮಾ ಮಾಡಿದ್ರು ಅದು ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ಹಣವನ್ನ ದೋಚಿಬಿಡುತ್ತೆ. ಈ ಭಜರಂಗಿ ಬಾಯ್​ಜಾನ್​ ಆ್ಯಕ್ಟ್​ ಮಾಡಿರೋ ಸಿನಿಮಾಗಳೆಲ್ಲಾ ಬ್ಯಾಕ್​ ಟು ಬ್ಯಾಕ್​ ಹಿಟ್ ಆಗ್ತಿರೋದ್ರಿಂದ, ವರ್ಷದಿಂದ ವರ್ಷಕ್ಕೆ ಸಲ್ಲು ಫ್ಯಾನ್ಸ್​ ಕೂಡ ಹೆಚ್ಚಾಗ್ತಿದ್ದಾರೆ. ಇನ್ನು ಸಲ್ಲು ಜೊತೆ ಸಿನಿಮಾ ಮಾಡಲು ಸ್ಟಾರ್ ನಟಿಯರೇ ಸಾಲುಗಟ್ಟಿ ನಿಂತಿದ್ದಾರೆ. ಇಂತಹದ್ರಲ್ಲಿ ಸಲ್ಲುಗೆ ಜೋಡಿಯಾಗೋದು ನಿಜಕ್ಕೂ ರಶ್ಮಿಕಾಗೆ ಅದೃಷ್ಟ ಖುಲಾಯಿಸಿದಂತಾಗಿದೆ.

ಇದನ್ನೂ ಓದಿ : ವಿಚಾರಣಾದೀನ ಕೈದಿ ನಂಬರ್ 4567 – ಪರಪ್ಪನ ಅಗ್ರಹಾರ ಜೈಲಲ್ಲಿ ರೇವಣ್ಣರ ಫಸ್ಟ್ ಡೇ ಹೇಗಿತ್ತು?

 

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here