Download Our App

Follow us

Home » ಅಪರಾಧ » ವಿಚಾರಣಾಧೀನ ಕೈದಿ ನಂಬರ್ 4567 – ಪರಪ್ಪನ ಅಗ್ರಹಾರ ಜೈಲಲ್ಲಿ ರೇವಣ್ಣರ ಫಸ್ಟ್ ಡೇ ಹೇಗಿತ್ತು?

ವಿಚಾರಣಾಧೀನ ಕೈದಿ ನಂಬರ್ 4567 – ಪರಪ್ಪನ ಅಗ್ರಹಾರ ಜೈಲಲ್ಲಿ ರೇವಣ್ಣರ ಫಸ್ಟ್ ಡೇ ಹೇಗಿತ್ತು?

ಬೆಂಗಳೂರು : ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣಗೆ 17ನೇ ಎಸಿಎಂಎಂ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದರಿಂದ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಜೈಲು ಅಧಿಕಾರಿಗಳು ರೇವಣ್ಣಗೆ ವಿಚಾರಣಾಧೀನ ಕೈದಿ ನಂಬರ್ ನೀಡಿದ್ದಾರೆ. ಜೈಲಿಗೆ ಬರುವ ಎಲ್ಲಾ ಆರೋಪಿಗಳಿಗೆ ಎಂಟ್ರಿ ನಂಬರ್ ನೀಡಲಾಗುತ್ತದೆ. ಅದರಂತೆ ರೇವಣ್ಣಗೆ ವಿಚಾರಣಾಧೀನ ಕೈದಿ‌ ನಂಬರ್ 4567 ನೀಡಲಾಗಿದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಎನ್ನಲಾಗಿರುವ ಸಂಸತ್ರಸ್ತೆಯನ್ನು ಅಪಹರಣ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ಹೆಚ್​ಡಿ ರೇವಣ್ಣ ಅವರಿಗೆ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದೆ. ಎಸ್​ಐಟಿ ಕಸ್ಟಡಿ ಅವಧಿ ಮೇ 08ರಂದು ಮುಕ್ತಾಯವಾಗಿದ್ದರಿಂದ ರೇವಣ್ಣ ಅವರನ್ನು ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೋರ್ಟ್ ರೇವಣ್ಣಗೆ​ ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.

ಪರಪ್ಪನ ಅಗ್ರಹಾರ ಜೈಲಲ್ಲಿ ನಿನ್ನೆ ರಾತ್ರಿ ರೇವಣ್ಣರ ದಿನಚರಿ ಹೇಗಿತ್ತು? ಕಿಡ್ನಾಪ್​​ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರ್ತಿದ್ದಂತೆ ರೇವಣ್ಣ ಫುಲ್​​ ಟೆನ್ಷನ್​​ನಲ್ಲಿದ್ದರು. ಇಡೀ ರಾತ್ರಿ ರೇವಣ್ಣ ನಿದ್ದೆ ಮಾಡಿಲ್ಲ, ಕುಂತಲ್ಲಿ ಕುಂತಿಲ್ಲ, ಅತ್ತಿಂದಿತ್ತ ಓಡಾಡುತ್ತಲೇ ಇದ್ದರು. ಊಟ ತಂದು ಕೊಟ್ರೂ ಹೆಚ್​.ಡಿ.ರೇವಣ್ಣ ಬೇಡ ಎಂದಿದ್ದಾರೆ ಎಂಬ ಮಾಹಿತಿಯಿದೆ. ಇಡೀ ರಾತ್ರಿ ರೇವಣ್ಣ ಚಿಂತೆಗೆ ಜಾರಿದ್ದರು ಎನ್ನಲಾಗಿದೆ. ಕೈದಿಗಳಿಗೆ ನೀಡುವ ಊಟವನ್ನೇ ನೀಡಿದ್ದಕ್ಕೆ ಬೇಸರಗೊಂಡಿದ್ರು ಅಂತ ತಿಳಿದುಬಂದಿದೆ.

ಜೈಲಾಧಿಕಾರಿಗಳು ರೇವಣ್ಣಗೆ ಯುಟಿಪಿ ನಂಬರ್ 4567 ನೀಡಿ ಬ್ಯಾರಕ್​​ಗೆ ಹಾಕಿದ್ದು, ರೇವಣ್ಣ ರಾತ್ರಿಯಿಡೀ ಜೈಲಿನಲ್ಲಿ ಸೊಳ್ಳೆಗಳಿಂದ ಕಡಿಸಿಕೊಂಡು, ಭಾರೀ ಮಳೆಯಿಂದಾಗಿ ಚಳಿಗೆ ನಡುಗಿದ್ದಾರೆ  ಎಂದು ತಿಳಿದುಬಂದಿದೆ. ಇನ್ನು, ರೇವಣ್ಣ ಬೆಳಗ್ಗೆ ಎದ್ದು ಪೇಪರ್​ಗಳ ಮೇಲೆ ಕಣ್ಣಾಡಿಸಿದ್ದಾರೆ. ಕಾಫಿ, ಟೀ ಕುಡೀರಿ ಅಂದ್ರೂ ರಿಯಾಕ್ಟ್ ಮಾಡಿಲ್ಲ. ಜೈಲು ಅಧಿಕಾರಿಗಳು ರೇವಣ್ಣಗೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ : ಇಂದು SSLC ಫಲಿತಾಂಶ ಪ್ರಕಟ – ಎಷ್ಟು ಗಂಟೆಗೆ? ರಿಸಲ್ಟ್ ನೋಡುವುದು ಹೇಗೆ? ಇಲ್ಲಿದೆ ಮಾಹಿತಿ..!

 

 

 

 

 

Leave a Comment

RELATED LATEST NEWS

Top Headlines

ಪಠಾಣ್​ ಸಿನಿಮಾಗೆ ಸೆಡ್ಡು ಹೊಡೆದ ಕೆಡಿ : ದುಬಾರಿ ಮೊತ್ತಕ್ಕೆ ಚಿತ್ರದ ಆಡಿಯೋ ರೈಟ್ಸ್ ಸೇಲ್..!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ರಿಲೀಸ್ ಡೇಟ್​​ನ್ನು ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಅದರ ಬೆನ್ನಲೇ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಬಿಡುಗಡೆ ಬಗ್ಗೆ

Live Cricket

Add Your Heading Text Here