Download Our App

Follow us

Home » ಅಪರಾಧ » ಮದುವೆಯಾಗೋದಾಗಿ ನಂಬಿಸಿ ಸ್ಟಾರ್ ಆಟಗಾರ್ತಿ ಮೇಲೆ ಅತ್ಯಾಚಾರ ಆರೋಪ : ಇಂಡಿಯನ್ ಹಾಕಿ ಟೀಂ ಪ್ಲೇಯರ್ ವಿರುದ್ಧ FIR..!

ಮದುವೆಯಾಗೋದಾಗಿ ನಂಬಿಸಿ ಸ್ಟಾರ್ ಆಟಗಾರ್ತಿ ಮೇಲೆ ಅತ್ಯಾಚಾರ ಆರೋಪ : ಇಂಡಿಯನ್ ಹಾಕಿ ಟೀಂ ಪ್ಲೇಯರ್ ವಿರುದ್ಧ FIR..!

ಬೆಂಗಳೂರು : ಮದುವೆಯಾಗೋದಾಗಿ ನಂಬಿಸಿ ಸ್ಟಾರ್ ಆಟಗಾರ್ತಿಗೆ ಬಲತ್ಕಾರ ಮಾಡಿರುವ ಇಂಡಿಯನ್ ಹಾಕಿ ಟೀಂ ಪ್ಲೇಯರ್ ಮೇಲೆ ಬೆಂಗಳೂರಲ್ಲಿ FIR ದಾಖಲಾಗಿದೆ. ಪ್ರತಿಷ್ಠಿತ ಕ್ರೀಡೆಯಲ್ಲಿ ಭಾರತ ತಂಡವನ್ನ ಪ್ರತಿನಿಧಿಸಿದ್ದ ಯುವತಿಯ ಮೇಲೆ ಅತ್ಯಾಚಾರವಾಗಿರುವ ಆರೋಪ ಕೇಳಿಬಂದಿದೆ.

ಭಾರತೀಯ ಹಾಕಿ ತಂಡದ ಡಿಫೆಂಡರ್ ವರುಣ್ ಕುಮಾರ್ ಮೇಲೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ವರುಣ್ ಕುಮಾರ್ ಇನ್ಸ್ಟಾ ಗ್ರಾಂ ಮೂಲಕ ಯುವತಿಯ ಪರಿಚಯ ಮಾಡಿಕೊಂಡಿದ್ದು, ಯುವತಿ 17 ವರ್ಷದವಳಾಗಿದ್ದಾಗಲೇ ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದ ಆರೋಪ ವ್ಯಕ್ತವಾಗಿದೆ.

ಒತ್ತಾಯಪೂರ್ವಕವಾಗಿ ವರುಣ್ ಕುಮಾರ್ ಯುವತಿಯ ಜೊತೆ ಸ್ನೇಹ ಬೆಳೆಸಿದ್ದ. ಈ ವೇಳೆ ಮದುವೆಯಾಗೋದಾಗಿ ನಂಬಿಸಿ ಅಪ್ರಾಪ್ತ ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ವರುಣ್ ಕುಮಾರ್ 2019 ರಿಂದ ಯುವತಿ ಜೊತೆಗೆ ಸಂಪರ್ಕದಲ್ಲಿದ್ದ. ಐದು ವರ್ಷಗಳಿಂದ ವರುಣ್ ಕುಮಾರ್ ಹಲವಾರು ಬಾರಿ ಅತ್ಯಾಚಾರ ಮಾಡಿರುವ ಆರೋಪ ವ್ಯಕ್ತವಾಗಿದೆ. ಈಗ ಮದುವೆಯಾಗದೆ ವಂಚಿಸಿದ ಹಿನ್ನಲೆಯಿಂದಾಗಿ ಎಫ್ಐಆರ್ ದಾಖಲಾಗಿದೆ.

ವರುಣ್ ಕುಮಾರ್ ಮೂಲತಃ ಹಿಮಾಚಲ ಪ್ರದೇಶದವನಾಗಿದ್ದು, ಹಾಕಿಗಾಗಿಯೇ ಪಂಜಾಬ್ ಗೆ ಶಿಫ್ಟ್ ಆಗಿದ್ದ. 2017ರಲ್ಲಿ‌ ಭಾರತ ತಂಡದ ಪರ ಪಾದಾರ್ಪಣೆ ಮಾಡಿದ್ದ ವರುಣ್, 2022ರ ಬರ್ಮಿಂಗ್ ಹ್ಯಾಂ – ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದ. 2022 ರ ಏಷ್ಯನ್ ಗೇಮ್ಸ್‌ ನಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದ. ಅಷ್ಟೇ ಅಲ್ಲದೆ 2020 ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯನಾಗಿದ್ದ.

ಕಂಚಿನ ಸಾಧನೆ ಬಳಿಕ ವರುಣ್ ಕುಮಾರ್​​ಗೆ 1 ಕೋಟಿ ಬಹುಮಾನ ಕೂಡ ಸಿಕ್ಕಿತ್ತು. ಹಿಮಾಚಲ ಪ್ರದೇಶ ಸರ್ಕಾರ 1 ಕೋಟಿ ಬಹುಮಾನ ಸಹ ಘೋಷಿಸಿತ್ತು. 2021 ನೇ ಸಾಲಿನ ಅರ್ಜುನ ಪ್ರಶಸ್ತಿಗೂ ವರುಣ್ ಕುಮಾರ್ ಭಾಜನನಾಗಿದ್ದ. ಇದೀಗ ಪ್ರೀತಿ ಪ್ರೇಮದ ಹೆಸರಲ್ಲಿ ನಂಬಿಸಿ ಅತ್ಯಾಚಾರ ಆರೋಪ ಕೇಳಿಬಂದಿದೆ.

ವರುಣ್ ಕುಮಾರ್ ವಿರುದ್ಧ ಪೋಕ್ಸೊ, ಅತ್ಯಾಚಾರ ಹಾಗೂ ವಂಚನೆ ಕೇಸ್​​ನಡಿ ಎಫ್ ಐ ಆರ್ ದಾಖಲಾಗಿದ್ದು, ಜಲಂಧರ್​ನಲ್ಲಿರೊ ವರುಣ್​​ಗಾಗಿ ಜ್ಞಾನಭಾರತಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಸ್ಟಾಕ್​ ಮಾರ್ಕೆಟ್ ಹೂಡಿಕೆ : ವಾಟ್ಸ್​ಆ್ಯಪ್, ಟೆಲಿಗ್ರಾಂ ಗ್ರೂಪ್​​ಗಳ ಮೂಲಕ ಭಾರೀ ವಂಚನೆ..!

Leave a Comment

DG Ad

RELATED LATEST NEWS

Top Headlines

ಮೋಕ್ಷಿತಾಗೆ ಹತ್ತಿರವಾಗೋಕೆ ಹೊರಟ್ರಾ ಗೌತಮಿ – ವರ್ಕೌಟ್ ಆಗುತ್ತಾ ಆಟದ ಲೆಕ್ಕ?

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗ ಗೌತಮಿ, ಉಗ್ರಂ ಮಂಜು ಮತ್ತು ಮೋಕ್ಷಿತಾ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ನಂತರ ಟಾಸ್ಕ್​ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ

Live Cricket

Add Your Heading Text Here