Download Our App

Follow us

Home » ಅಪರಾಧ » ಸ್ಟಾಕ್​ ಮಾರ್ಕೆಟ್ ಹೂಡಿಕೆ : ವಾಟ್ಸ್​ಆ್ಯಪ್, ಟೆಲಿಗ್ರಾಂ ಗ್ರೂಪ್​​ಗಳ ಮೂಲಕ ಭಾರೀ ವಂಚನೆ..!

ಸ್ಟಾಕ್​ ಮಾರ್ಕೆಟ್ ಹೂಡಿಕೆ : ವಾಟ್ಸ್​ಆ್ಯಪ್, ಟೆಲಿಗ್ರಾಂ ಗ್ರೂಪ್​​ಗಳ ಮೂಲಕ ಭಾರೀ ವಂಚನೆ..!

ಬೆಂಗಳೂರು : ಸ್ಟಾಕ್​ ಮಾರ್ಕೆಟ್​ನಲ್ಲಿ ಹಣ ಹೂಡಿಕೆ ಮಾಡಿ ಮೂವರು 1.50 ಕೋಟಿ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈಶಾನ್ಯ ಸೈಬರ್ ಪೊಲೀಸ್ ಠಾಣೆಯಲ್ಲಿ ಷೇರು ಮಾರುಕಟ್ಟೆಯಿಂದ ಮೋಸ ಹೋಗಿರುವ ಮೂರು ದೂರು ದಾಖಲಾಗಿದೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ ನೀಡುವ ಭರವಸೆಯೊಂದಿಗೆ ವಾಟ್ಸ್​​ಆ್ಯಪ್, ಟೆಲಿಗ್ರಾಂ ಗ್ರೂಪ್​ಗಳ ಮೂಲಕ ಸೈಬರ್ ವಂಚಕರು ಈಗಾಗಲೇ ಹಲವಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಪೊಲೀಸರು ವಂಚಕರು ಮಾಡಿರೋ ಚಾಟಿಂಗ್ ಮೆಸೇಜ್​​​​ ಆಧರಿಸಿ ತನಿಖೆ ನಡೆಸಿದ್ದಾರೆ.

ವಂಚಕರು ವಾಟ್ಸ್​​ಆ್ಯಪ್, ಟೆಲಿಗ್ರಾಂ ಗ್ರೂಪಲ್ಲಿ ಟ್ರ್ಯಾಪ್ ಮಾಡಿ ವಂಚನೆ ಮಾಡುವ ವಿಧಾನವೇ ರೋಚಕವಾಗಿದೆ. ಮೊದಲು ವಾಟ್ಸ್​​ಆ್ಯಪ್, ಟೆಲಿಗ್ರಾಂ ಗ್ರೂಪ್​ಗಳನ್ನ ಕ್ರಿಯೇಟ್ ಮಾಡುವ ಖದೀಮರು, ಷೇರುಮಾರುಕಟ್ಟೆಯಲ್ಲಿ ಕೋಟಿಗಟ್ಟಲೆ ಸಂಪಾದನೆ ಮಾಡಿರುವ ಬಗ್ಗೆ ಸುಳ್ಳು ಸಂದೇಶಗಳನ್ನು ಕಳುಹಿಸುತ್ತಾರೆ. ಆ ಟ್ರೇಡಿಂಗ್ ಸಲಹಾ ಗ್ರೂಪ್​ಗಳಲ್ಲಿರುವ ಬಹುತೇಕರು ವಂಚಕರೇ ಆಗಿರುತ್ತಾರೆ. ಕೋಟಿಗಟ್ಟಲೇ ಹಣ ಗಳಿಸಿದ ಮಸೇಜ್​​ಗಳಿಗೆ ಅಮಾಯಕರು ಮಾರುಹೋಗುತ್ತಾರೆ.

ಇಂತಹ ಗ್ರೂಪೊಂದರಲ್ಲಿ ಬಂದ ಸಲಹೆ ಕೇಳಿ ಹಣ ಕಳುಹಿಸಿದ ಖಾಸಗಿ ಕಂಪನಿ ಉದ್ಯೋಗಿ ಅಯ್ಯಪ್ಪ ಎಂಬವರು 90 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಟ್ರೇಡಿಂಗ್ ಸ್ಟಾಕ್ ಮಾರ್ಕೆಟ್ ಹೆಸರಿನಲ್ಲಿ ಅಯ್ಯಪ್ಪ ಅವರನ್ನು ವಂಚಿಸಲಾಗಿದೆ. ಡಿ ಮ್ಯಾಟ್ ಅಕೌಂಟ್ ಇಲ್ಲದೇ ಷೇರು ಮಾರುಕಟ್ಟೆಯಲ್ಲಿ ಷೇರು ಹೋಲ್ಡರ್ ಆಗಲು ಸಾಧ್ಯವಿಲ್ಲ ಎಂಬುದು ಅಯ್ಯಪ್ಪ ಅವರಿಗೆ ಮೋಸಹೋದ ನಂತರ ಅರಿವಾಗಿದೆ. ಬಳಿಕ ಅವರು, ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಈಶಾನ್ಯ ಸೈಬರ್ ಪೊಲೀಸ್ ಠಾಣೆಯಲ್ಲಿ ಈವರೆಗೆ ಮೂರು ದೂರುಗಳು ದಾಖಲಾಗಿವೆ. ವಿದ್ಯಾವಂತರೇ ಹೆಚ್ಚಾಗಿ ಇಂಥ ಪ್ರಕರಣಗಳಲ್ಲಿ ವಂಚನೆಗೀಡಾಗುತ್ತಿದ್ದಾರೆ. ಸದ್ಯ ದೂರು ದಾಖಲಾಗುತ್ತಿದ್ದಂತೆಯೇ ಟ್ರೇಡಿಂಗ್ ಸ್ಟಾಕ್ ಮಾರ್ಕೆಟ್ ವೆಬ್​​​​ಸೈಟ್ ಅನ್ನು ಈಶಾನ್ಯ ವಿಭಾಗದ ಸೈಬರ್ ಪೊಲೀಸರು ಬ್ಲಾಕ್ ಮಾಡಿದ್ದಾರೆ.

ಇದನ್ನೂ ಓದಿ : ವಿಜಯಪುರದಲ್ಲಿ ಯುವಕನ ಮೇಲೆ ತಲ್ವಾರ್​​ನಿಂದ ಮಾರಣಾಂತಿಕ ಹಲ್ಲೆ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಸುರಪುರ ಕಾಂಗ್ರೆಸ್ MLA ರಾಜಾ ವೆಂಕಟಪ್ಪ ನಾಯಕ್ ವಿಧಿವಶ..!

ಯಾದಗಿರಿ : ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 67 ವರ್ಷದ ಶಾಸಕ ರಾಜಾ ವೆಂಕಟಪ್ಪ

Live Cricket

Add Your Heading Text Here