Download Our App

Follow us

Home » ಅಪರಾಧ » ರಾಮೇಶ್ವರಂ ಸ್ಫೋಟ ಪ್ರಕರಣ : ಬಾಂಬರ್ಸ್​ಗಳನ್ನು ಬೆಂಗಳೂರಿಗೆ ಕರೆತಂದು ಕೋರ್ಟ್​ ಮುಂದೆ ಹಾಜರು ಪಡಿಸಲು NIA ತಯಾರಿ..!

ರಾಮೇಶ್ವರಂ ಸ್ಫೋಟ ಪ್ರಕರಣ : ಬಾಂಬರ್ಸ್​ಗಳನ್ನು ಬೆಂಗಳೂರಿಗೆ ಕರೆತಂದು ಕೋರ್ಟ್​ ಮುಂದೆ ಹಾಜರು ಪಡಿಸಲು NIA ತಯಾರಿ..!

ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧಿಸಿ ಪ್ರಮುಖ ಇಬ್ಬರು ಆರೋಪಿಗಳನ್ನು ಕಡೆಗೂ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಾಂಬ್ ಇಟ್ಟು ಪರಾರಿಯಾಗಿದ್ದ ಮುಸಾವಿರ್​​ ಹುಸೇನ್ ಮತ್ತು ಕೃತ್ಯಕ್ಕೆ ಸಂಚು ಹೂಡಿದ್ದ ಅಬ್ದುಲ್​ ಮತೀನ್​ ತಾಹಮನನ್ನು ಎನ್ಐಎ ಮಿಡ್ನಾಪುರದ ಲಾಡ್ಜ್​​ನಲ್ಲಿ ಬಂಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕಳೆದ ರಾತ್ರಿಯಿಂದಲೇ ಎನ್​ಐಎ ಟೀಂ ವಿಚಾರಣೆ ನಡೆಸುತ್ತಿದೆ. ಇನ್ನು ಪಶ್ಚಿಮ ಬಂಗಾಳದಿಂದ ಟ್ರಾನ್ಸಿಟ್ ವಾರೆಂಟ್​ ಮೇಲೆ ಆರೊಪಿಗಳನ್ನು  ಮಿಡ್​ನೈಟ್​ನಲ್ಲೇ ಕೋಲ್ಕತ್ತಾದಿಂದ ಬೆಂಗಳೂರಿಗೆ ಕರೆತಂದ NIA ಮಡಿವಾಳದ ವಿಚಾರಣೆ ಸೆಲ್​​ನಲ್ಲಿ ಶಂಕಿತರ ಉಗ್ರರ ವಿಚಾರಣೆ ನಡೆಸಲಿದೆ.

ಇಂದು ಬೆಳಗ್ಗೆ ಕೋರಮಂಗಲದ ಜಡ್ಜ್​​​ ನಿವಾಸದಲ್ಲಿ ಆರೋಪಿಗಳನ್ನು ಹಾಜರು ಪಡಿಸಲು ತಯಾರಿ ನಡೆಸಲಾಗಿದೆ.  ಆರೋಪಿಗಳನ್ನು ಕೋರ್ಟ್​ ಮುಂದೆ ಹಾಜರು ಪಡಿಸಿ NIA ವಶಕ್ಕೆ ನೀಡುವಂತೆ ಹೇಳಲಿದ್ದು, ಬಳಿಕ NIA  ಹೆಚ್ಚಿನ ವಿಚಾರಣೆ, ಸ್ಥಳ ಮಹಜರು ಮಾಡಲಿದೆ.

ಬಾಂಬರ್ಸ್​ಗಳು  ಕೋಲ್ಕತ್ತಾದಲ್ಲಿ ನಕಲಿ ದಾಖಲೆ ನೀಡಿ ಹೆಸರು ಬದಲಾಯಿಸಿ ಕೊಂಡು ವಾಸ್ತವ್ಯ ಹೂಡಿದ್ದರು. ಆರೋಪಿಗಳು ಮಾರ್ಚ್​ 13ರಂದು ಶಹನವಾಜ್​​​ ಮತ್ತು ಅನ್ಮೂಲ್​​​ ಹೆಸರಿನಲ್ಲಿ ರೂಂ ಬುಕ್​ ಮಾಡಿ ಬಳ್ಳಾರಿಯಿಂದ ಕರ್ನಾಟಕ ಗಡಿ ದಾಟಿ ತೆಲಂಗಾಣ, ಕೇರಳ, ಅಸ್ಸಾಂಗೆ ಸುತ್ತಾಡಿದ್ದರು.

ಆನಂತರ ಪಶ್ಚಿಮ ಬಂಗಾಳದ ಮಿಡ್ನಾಪುರದ ಲಾಡ್ಜ್​​ಗೆ ಹೋಗಿ ಉಳಿದುಕೊಂಡಿದ್ದರು. ಆದರೆ ಬಾಂಬರ್ ಶಿವಮೊಗ್ಗ ಮೂಲದ ಮುಸಾವಿರ್, ​​​ಹೂಡಿ ಸರ್ಕಲ್​​ನಲ್ಲಿ ಕ್ಯಾಪ್​ ಬಿಟ್ಟು ಹೋಗಿದ್ದ. ಕ್ಯಾಪ್​​ನಲ್ಲಿದ್ದ ಸೀರಿಯಲ್​​ ನಂಬರ್​ ಬೆನ್ನತ್ತಿದ್ದ CCB ಅಧಿಕಾರಿಗಳು ಚೆನ್ನೈನ ಮಾಲ್​​ಗೆ ತೆರಳಿ 2 ತಿಂಗಳ CCTV ದೃಶ್ಯ ಪರಿಶೀಲಿಸಿದ್ದರು . ಆಗಲೇ ಗೊತ್ತಾಗಿದ್ದು ಬಾಂಬರ್​​​ ಒಬ್ಬನಲ್ಲ ಇಬ್ಬರು ಅನ್ನೋ ಮಾಹಿತಿ. ಇನ್ನು ಮುಸಾವಿರ್​​ ಕೊಟ್ಟ ಸುಳಿವಿನ ಮೇಲೆ ಬಂಗಾಳಕ್ಕೆ ಹೋಗಿದ್ದ NIA ಟೀಂ CCB ಅಧಿಕಾರದ ಸಹಕಾರದೊಂದಿಗೆ ನಿನ್ನೆ ಬೆಳಗ್ಗೆ ಆರೋಪಿಗಳನ್ನು ಬಂಧಿಸಿದೆ.

ಇದನ್ನೂ ಓದಿ : ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅಬ್ಬರದ ಎದುರು ಮಂಕಾದ ಬಿಜೆಪಿ – ಚೌಟ ಪ್ರಚಾರ ವೈಖರಿಗೆ ಸ್ಥಳೀಯ ಬಿಜೆಪಿಗರೇ ಬೇಸರ..!

 

 

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here