Download Our App

Follow us

Home » ಜಿಲ್ಲೆ » ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅಬ್ಬರದ ಎದುರು ಮಂಕಾದ ಬಿಜೆಪಿ – ಚೌಟ ಪ್ರಚಾರ ವೈಖರಿಗೆ ಸ್ಥಳೀಯ ಬಿಜೆಪಿಗರೇ ಬೇಸರ..!

ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅಬ್ಬರದ ಎದುರು ಮಂಕಾದ ಬಿಜೆಪಿ – ಚೌಟ ಪ್ರಚಾರ ವೈಖರಿಗೆ ಸ್ಥಳೀಯ ಬಿಜೆಪಿಗರೇ ಬೇಸರ..!

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಬ್ರಿಜೇಶ್ ಚೌಟ ಅವರು ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಮುಂದೆ ಠುಸ್ ಆಗಿದ್ದಾರೆ.

ಪದ್ಮರಾಜ್ ಪೂಜಾರಿ
ಪದ್ಮರಾಜ್ ಪೂಜಾರಿ

ಹೌದು, ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಪದ್ಮರಾಜ್ ಪೂಜಾರಿ ಅಬ್ಬರದ ಎದುರು ಮಂಕಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಮಂಗಳೂರು ಬಿಜೆಪಿ ಚುನಾವಣಾ ಪ್ರಚಾರ ಅಖಾಡಕ್ಕೆ ಪ್ರಧಾನಿ ಮೋದಿಯನ್ನು ಕರೆ ತರಲು ಕಮಲ ಪಾಳಯ ಮುಂದಾಗಿಯೇ ಎಂಬ ಪ್ರಶ್ನೆ ಮಂಗಳೂರು ವಲಯದಲ್ಲಿ ಹುಟ್ಟಿಕೊಂಡಿದೆ.

ಮಂಗಳೂರಿನಲ್ಲಿ ಪದ್ಮರಾಜ್ V/S ಬ್ರಿಜೇಶ್ ಬದಲು ಪದ್ಮರಾಜ್ ಪೂಜಾರಿ V/S ನರೇಂದ್ರ ಮೋದಿ ಅನ್ನೋ ವಾತಾವರಣ ಸೃಷ್ಟಿಯಾಗಿದ್ದು, ಮೋದಿ ಮಂಗಳೂರಿಗೆ ಬಂದ ಮೇಲೆಯೇ ಬಿಜೆಪಿ ಅಭ್ಯರ್ಥಿಯ ಭವಿಷ್ಯ ಬದಲಾಗಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದೆ.

ಕರಾವಳಿ ಕೇಸರಿ ಅಖಾಡದಲ್ಲಿ ಬ್ರಿಜೇಶ್ ಚೌಟ ಪ್ರಚಾರ ಶೈಲಿಯೇ ಬಿಜೆಪಿಗರಿಗೆ ತಲೆನೋವಾಗಿದ್ದು, ಜಿಲ್ಲೆಯಾದ್ಯಂತ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್​ರದ್ದೇ ಸದ್ದು ಕೇಳಿಬರುತ್ತಿದೆ. ಹೋದಲ್ಲಿ ಬಂದಲ್ಲಿ ಪದ್ಮರಾಜ್ ಹವಾ ಜೋರಾಗಿದ್ದು, ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಎಲ್ಲಿದ್ದಾರೆ?ಎಂದು ದಕ್ಷಿಣ ಕನ್ನಡದ ಜನ ಕೇಳುತ್ತಿದ್ದಾರೆ.

ಅಬ್ಬರದ ಪ್ರಚಾರವಿಲ್ಲ, ಬಿರುಸಿನ ಮತ ಬೇಟೆಯಿಲ್ಲ. ಚುನಾವಣೆ ಹೊತ್ತಲ್ಲೇ ಚೌಟ ಮಂಕಾಗಿದ್ಯಾಕೆ? ಇದೆ ಪರಿಸ್ಥಿತಿ ಮುಂದುವರೆದರೆ ಚೌಟ ಗೆಲುವಿನ ಗತಿಯೇನು? ಬಿಜೆಪಿ ಅಭ್ಯರ್ಥಿಯ ಈ ಪ್ರಚಾರದ ಶೈಲಿಯಿಂದ ಕಾರ್ಯಕರ್ತರಿಗೂ ನಿರುತ್ಸಾಹ ಬಂದಿದೆ. ಕೇವಲ ಮೋದಿ ಹಾಗೂ ಕೇಂದ್ರದ ನಾಯಕತ್ವವನ್ನೇ ಕ್ಯಾಪ್ಟನ್ ಚೌಟ ಅವಲಂಬಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ಯಾಪ್ಟನ್ ಉತ್ಸಾಹದಿಂದ ಮತಬೇಟೆ ನಡೆಸದೆ ಹೋದರೆ ಗೆಲುವು ಕಷ್ಟ ಸಾಧ್ಯ ಅನ್ನುತ್ತಿದ್ದಾರೆ ರಾಜಕೀಯ ಪಂಡಿತರು.

ಇದನ್ನೂ  ಓದಿ : ರಾಮೇಶ್ವರಂ ಕೆಫೆ ಬಾಂಬರ್​ಗಳ ಮೊದಲ ದೃಶ್ಯ : NIAಗೆ ಲಾಕ್ ಆಗಿದ್ದೇಗೆ ಶಂಕಿತ ಉಗ್ರರು..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here