Download Our App

Follow us

Home » ರಾಷ್ಟ್ರೀಯ » ನಮ್ಮೆಲ್ಲರ ರಾಮ ಬಂದಿದ್ದಾನೆ.. ಇಂದಿನಿಂದ ಹೊಸ ಯುಗ ಆರಂಭವಾಗಿದೆ – ನರೇಂದ್ರ ಮೋದಿ..!

ನಮ್ಮೆಲ್ಲರ ರಾಮ ಬಂದಿದ್ದಾನೆ.. ಇಂದಿನಿಂದ ಹೊಸ ಯುಗ ಆರಂಭವಾಗಿದೆ – ನರೇಂದ್ರ ಮೋದಿ..!

ಶ್ರೀ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿರುವ ಪ್ರಧಾನಿ ಮೋದಿ ಅವರು ಕೋಟ್ಯಾನುಕೋಟಿ ಭಕ್ತರ ಆಸೆಯನ್ನು ಈಡೇರಿಸಿದ್ದಾರೆ.

ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ವೈಭವದಿಂದ ಜರುಗಿದ್ದು, ಇಂದು ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯದ ಗರ್ಭಗುಡಿಯಲ್ಲಿ ಹಲವಾರು ಸಂತರ ಉಪಸ್ಥಿತಿಯಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಪ್ರಭು ಶ್ರೀ ರಾಮನ ಪ್ರಾಣ ಪ್ರತಿಷ್ಠೆಯನ್ನು ನೆರವೇರಿಸಿದ್ದಾರೆ.

ಭವ್ಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ಬಳಿಕ ಪ್ರಧಾನಿ ಮೋದಿಯವರು ಸಮಾರಂಭನ್ನು ಉದ್ದೇಶಿ ಮಾತನಾಡಿ, ನಮ್ಮ ರಾಮಲಲ್ಲಾ ಈಗ ದಿವ್ಯ ಮಂದಿರದಲ್ಲಿದ್ದಾರೆ. ಈ ಕ್ಷಣ ಅಲೌಕಿಕ, ಇದು ಪವಿತ್ರ ಫಲವಾಗಿದೆ. ಈ ಕ್ಷಣ ಪ್ರಭು ಶ್ರೀರಾಮನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿದೆ. ಇಂದಿನ ಸೂರ್ಯನ ಕಿರಣ ಅದ್ಭುತವಾಗಿವೆ ಎಂದು ಹೇಳಿದ್ದಾರೆ.

ಇವತ್ತು ಹೊಸ ಕಾಲಚಕ್ರದ ಉದ್ಭವವಾಗಿದೆ. ರಾಮಮಂದಿರ ಭೂಮಿ ಪೂಜೆಯ ಬಳಿಕ ದೇಶಾದ್ಯಂತ ಉತ್ಸಾಹ ಹೆಚ್ಚಾಗಿತ್ತು. ನಿರ್ಮಾಣ ಕಾರ್ಯ ನೋಡಿದಂತೆ ದೇಶದಲ್ಲಿ ಪ್ರತಿ ದಿನ ಹೊಸ ಉತ್ಸಾಹ ಮೂಡಿತ್ತು. ನಮಗೆ ಇಂದು ಶ್ರೀರಾಮನ ಮಂದಿರ ಸಿಕ್ಕಿದೆ. ಅಯೋಧ್ಯೆಗೆ ಶ್ರೀರಾಮ ಆಗಮಿಸಿದ್ದು ಇಂದು ನಮ್ಮೆಲ್ಲರ ರಾಮ ಬಂದಿದ್ದಾರೆ ಎಂದು ಪ್ರಧಾನಿ ಮೋದಿಯವರು ಶ್ರೀರಾಮನ ಕುರಿತು ಗುಣಗಾನ ಮಾಡಿದ್ದಾರೆ.

ರಾಮ ಬೆಂಕಿಯಲ್ಲ, ಶಕ್ತಿ. ರಾಮ ವಿವಾದವಲ್ಲ, ರಾಮ ಸಮಾಧಾನ. ರಾಮ ನಮಗೆ ಮಾತ್ರ ಇಲ್ಲ, ರಾಮ ಎಲ್ಲರಿಗೂ ಇದ್ದಾನೆ. ರಾಮ ಅನಂತ ಕಾಲಕ್ಕೆ ಸೇರಿದವರು ಎಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ಹೇಳಿದ್ದಾರೆ.

ಸರ್ವೋಚ್ಛ ಆದರ್ಶದ ಪ್ರಾಣ ಪ್ರತಿಷ್ಠೆಯಾಗಿದೆ. ಆ ಆದರ್ಶ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ. ಇದು ದೇವ ಮಂದಿರ ಮಾತ್ರವಲ್ಲ, ಭಾರತದ ದೃಷ್ಟಿ, ದರ್ಶನದ ಮಂದಿರವಾಗಿದೆ. ಈ ರಾಮನ ರೂಪದ ರಾಷ್ಟ್ರ ಚೇತನದ ಮಂದಿರವಾಗಿದೆ. ರಾಮ ಭಾರತದ ವಿಧಾನ, ರಾಮ ಭಾರತದ ಚೇತನ, ಚಿಂತನೆ ಆಗಿದ್ದಾರೆ. ರಾಮ ನೀತಿ, ನಿತ್ಯ, ರಾಮ ನಿರಂತರ. ರಾಮ ವ್ಯಾಪಕ, ವಿಶ್ವ, ಆತ್ಮ. ರಾಮ ಪ್ರತಿಷ್ಠೆಯಾದಾಗ, ಅದರ ಪ್ರಭಾವ ಸಾವಿರಾರು ವರ್ಷಗಳವರೆಗೂ ಇರುತ್ತದೆ. 2024ರ ಜನವರಿ 22 ರಿಂದ ಹೊಸ ಯುಗ ಆರಂಭವಾಗಿದೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ : ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಪೂರ್ಣ.. ಅಯೋಧ್ಯಾ ನಗರಿಯಲ್ಲಿ ವಿರಾಜಮಾನನಾದ ಮರ್ಯಾದಾ ಪುರುಷೋತ್ತಮ ಶ್ರೀ ರಾಮ..!

 

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಬೈಕ್ ಸವಾರನ ಶವವನ್ನು 18 ಕಿ.ಮೀ​ ಎಳೆದೊಯ್ದು ಪರಾರಿಯಾದ ಕಾರು ಚಾಲಕ..!

ಕಾರು ಚಾಲಕನೊಬ್ಬ ಬೈಕ್​ಗೆ ಡಿಕ್ಕಿ ಹೊಡೆದು ಸವಾರನನ್ನು ಬರೋಬ್ಬರಿ 18 ಕಿಲೋ. ಮೀಟರ್​ ದೂರಕ್ಕೆ ಎಳೆದೊಯ್ದು ಪರಾರಿಯಾಗಿರುವ ಘಟನೆ ಅನಂತಪುರದಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ

Live Cricket

Add Your Heading Text Here