Download Our App

Follow us

Home » ಸಿನಿಮಾ » ರಾಖಿ ಸಾವಂತ್​ಗೆ ಕ್ಯಾನ್ಸರ್ ? ಮಾಜಿ ಪತಿ ಬಾಯ್ಬಿಟ್ರು ಅಸಲಿ ಸತ್ಯ..!

ರಾಖಿ ಸಾವಂತ್​ಗೆ ಕ್ಯಾನ್ಸರ್ ? ಮಾಜಿ ಪತಿ ಬಾಯ್ಬಿಟ್ರು ಅಸಲಿ ಸತ್ಯ..!

ಬಿ-ಟೌನ್​ನ ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ತನ್ನ ಸ್ಟೈಲ್ ಮತ್ತು ವಿವಾದಗಳಿಂದ ಆಗಾಗ ಸುದ್ದಿಯಲ್ಲಿರುವ ರಾಖಿ ಸಾವಂತ್ ಕೆಲದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ರಾಖಿ ಸಾವಂತ್ ಹೃದಯ ಸಂಬಂಧಿ ಸಮಸ್ಯೆಯಿಂದ ಟ್ರೀಟ್​ಮೆಂಟ್ ಪಡೆಯುತ್ತಿದ್ದು, ರಾಖಿ ಸಾವಂತ್​ಗೆ ಆಂಜಿಯೋಗ್ರಫಿ ಮಾಡಲಾಗಿದೆ.

ಈ ಮಧ್ಯೆ ರಾಖಿ ಅವರ ಮಾಜಿ ಪತಿ ಆದಿಲ್ ಖಾನ್ ದುರಾನಿ ಅವರು ಇದೊಂದು ನಾಟಕ, ಜೈಲಿನಿಂದ ತಪ್ಪಿಸಿಕೊಳ್ಳಲು ರಾಖಿ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಮತ್ತೋರ್ವ ಮಾಜಿ ಪತಿ ರಾಖಿಗೆ ಕ್ಯಾನ್ಸರ್ ಇದೆ ಎಂದಿದ್ದಾರೆ.

ರಾಖಿಯ ಇನ್ನೋರ್ವ ಮಾಜಿ ಪತಿ ರಿತೇಶ್ ರಾಜ್ ಸಿಂಗ್ ಅವರು ದೊಡ್ಡ ಹೇಳಿಕೆ ನೀಡಿದ್ದರು. ಆಕೆಯ ಎದೆ ಮತ್ತು ಹೊಟ್ಟೆಯಲ್ಲಿ ನೋವು ಕಾಣಿಸಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಯಿತು ಎಂದಿದ್ದರು. ಒಂದೆರಡು ಪರೀಕ್ಷೆಗಳನ್ನು ನಡೆಸಿದ ನಂತರ ವೈದ್ಯರು ಆಕೆಯ ಗರ್ಭಾಶಯದಲ್ಲಿ ಗೆಡ್ಡೆಯನ್ನು ಕಂಡುಹಿಡಿದರು ಎಂದು ಅವರು ಹೇಳಿದ್ದಾರೆ. ರಾಖಿಗೆ ಕ್ಯಾನ್ಸರ್ ಇದೆ ಎಂದು ರಿತೇಶ್ ಅವರು ಶಂಕಿಸಿದ್ದಾರೆ. ಹೆಚ್ಚಿನ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ ಎನ್ನಲಾಗಿದೆ.

ವಿಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿ ರಾಖಿ ಸಾವಂತ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 500, 504 ಹಾಗೂ 34 ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದಿಲ್​ ಖಾನ್​ಗೆ ಸಂಬಂಧಿಸಿದ ವಿಡಿಯೋ ಇದಾಗಿದ್ದು, ಅವುಗಳನ್ನು ತಿರುಚಿ ಲೀಕ್ ಮಾಡಿದ್ದಾರೆ ಎನ್ನುವ ಆರೋಪ ಇದೆ. ರಾಖಿ ಸಾವಂತ್​ಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಇನ್ನು ನಾಲ್ಕು ವಾರಗಳ ಒಳಗಾಗಿ ರಾಖಿ ಸಾವಂತ್ ಮುಂಬೈ ಪೊಲೀಸರಿಗೆ ಶರಣಾಗಬೇಕು ಎಂದು ಸೂಚಿಸಿದೆ ಎನ್ನಲಾಗಿದೆ. ಸುಪ್ರೀಂಕೋರ್ಟ್​ನ ಆದೇಶ ಬಂದಿದ್ದಕ್ಕೆಂದೇ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಅನುಮಾನವೂ ಮೂಡಿದೆ.

ಇದನ್ನೂ ಓದಿ : ಬೇಲ್​​ ಮೇಲಿರೋ ರೇವಣ್ಣಗೆ ಶಾಕ್​​​ : ಕಿಡ್ನಾಪ್​​ ಕೇಸ್​ನಲ್ಲಿ ಮೇಲ್ಮನವಿಗೆ SIT ತಯಾರಿ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿಗೆ ನಾಯಿ ಮಾಂಸ ರವಾನೆ ಆರೋಪ : ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ – ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿ ಅರೆಸ್ಟ್..!

ಬೆಂಗಳೂರು : ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಿನ್ನೆ (ಜುಲೈ 26) ರಾಜಸ್ಥಾನದಿಂದ ಬಂದ

Live Cricket

Add Your Heading Text Here