Download Our App

Follow us

Home » ಅಪರಾಧ » ಗದಗ : ಪಿಎಸ್​ಐ, ಕಾನ್ಸ್​ಟೇಬಲ್ ಮೇಲೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪ..!

ಗದಗ : ಪಿಎಸ್​ಐ, ಕಾನ್ಸ್​ಟೇಬಲ್ ಮೇಲೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪ..!

ಗದಗ : ಗದಗದಲ್ಲಿ ಪೊಲೀಸ್ ಕಾಟಕ್ಕೆ ಯುವತಿ ಬೆಚ್ಚಿಬಿದ್ದಿದ್ದಾಳೆ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪೊಲೀಸ್​ ಠಾಣೆಯ ಪಿಎಸ್ಐ ನಿಖಿಲ್ ಕಾಂಬ್ಳೆ, ಕಾನ್ಸ್​ಟೇಬಲ್​ ಶಂಕರ್ ನಾಲಕರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ರಕ್ಷಕರೇ ಕಾಲೇಜು ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಪಿಎಸ್ಐ ನಿಖಿಲ್ ಕಾಂಬ್ಳೆ, ಕಾನ್ಸ್​ಟೇಬಲ್​ ಶಂಕರ್ ನಾಲಕರ್ ಅವರು ಕಾಲೇಜು ವಿದ್ಯಾರ್ಥಿನಿಯ ನಂಬರ್ ಪಡೆದು ಅಶ್ಲೀಲವಾಗಿ ಮೆಸೇಜ್ ಮಾಡುತ್ತ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆದರೆ PSI ನಿಖಿಲ್ ಕಾಂಬ್ಳೆ ಅವರು ಪೇದೆ ಶಂಕರ್ ನಾಲಕರ್ ವಿರುದ್ಧ ಆರೋಪ ವ್ಯಕ್ತಪಡಿಸಿದ್ದಾರೆ. PSI ಹಾಗೂ ಕಾನ್ಸ್​ಟೇಬಲ್​ ಮೇಲೆ ವಿದ್ಯಾರ್ಥಿನಿಗೆ ಚುಡಾಯಿಸಿರೋ ಆರೋಪ ವ್ಯಕ್ತವಾಗಿದ್ದು, ಕಾನ್ಸ್​ಟೇಬಲ್ ಯುವತಿಗೆ I LOVE YOU ಅಂತ ಮೆಸೇಜ್​ ಮಾಡಿದ್ದಾರೆ. 

ಮೆಸೇಜ್ ಮಾಡಿ ಹಣ ಕೊಡ್ತೇನೆ ಬಾ ಅಂತಾ ಎಂದು ಪೇದೆ ಶಂಕರ್ ನಾಲಕರ್ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾರೆ. ರಾತ್ರಿ ಹಗಲು ಎನ್ನದೇ ವಿದ್ಯಾರ್ಥಿನಿ ಕಿರುಕುಳ ನೀಡಿದ್ದಾರೆ. ಇದೀಗ PSI, ಪೇದೆಯಿಂದ ರಕ್ಷಣೆ ಮಾಡುವಂತೆ ವಿದ್ಯಾರ್ಥಿನಿ ಗೋಳಾಡಿದ್ದಾಳೆ.

ಇದನ್ನೂ ಓದಿ : ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಗುಡ್ ನ್ಯೂಸ್ : ವಿದೇಶಿ ನಗರಗಳಿಗೆ ಹೋಲಿಸಿದ್ರೆ ಬೆಂಗಳೂರಲ್ಲೇ ಕಡಿಮೆ ಟ್ರಾಫಿಕ್..!

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here