ದಾವಣಗೆರೆ : ಚನ್ನಗಿರಿ ಪೊಲೀಸ್ ಠಾಣೆ ಧ್ವಂಸ ಪ್ರಕರಣ ಸಂಬಂಧ ಠಾಣೆ ಮುಂದೆ ಗಲಾಟೆ ಆರಂಭಕ್ಕೂ ಮುನ್ನ ಪೊಲೀಸ್ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. DYSP ಪ್ರಶಾಂತ್ ಮುನ್ನಾಳಿ, ಸಿಪಿಐ ನಿರಂಜನ್ ಅವರು ಗಲಾಟೆ ತಡೆಯೋಕೆ ಉದ್ರಿಕ್ತರ ಮುಂದೆ ಕೈಮುಗಿದು ಗೋಗರೆದಿದ್ದಾರೆ.
ಆದಿಲ್ ಮೃತಪಟ್ಟಿರೋದನ್ನು ತನಿಖೆ ನಡೆಸಿ ಸಾವಿಗೆ ನ್ಯಾಯ ಕೊಡಿಸಲಾಗುತ್ತೆ, ನೀವು ಕಂಪ್ಲೆಟ್ ಕೊಡಿ ನಾವು ತನಿಖೆ ಮಾಡಿಸುತ್ತೇವೆ. ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಇದೆ, ಆದಿಲ್ ಮರಣೋತ್ತರ ಪರೀಕ್ಷೆಯಲ್ಲಿ ಯಾರು ಹಲ್ಲೆ ಮಾಡಿದ್ರೂ ಕೂಡ ಗೊತ್ತಾಗುತ್ತೆ. ಯಾರೂ ಕೂಡ ಗಲಾಟೆ ಮಾಡೋಕೆ ಹೋಗಬೇಡಿ ಶಾಂತವಾಗಿ ಇರಿ ಎಂದು DYSP ಪ್ರಶಾಂತ್ ಮುನ್ನಾಳಿ, ಸಿಪಿಐ ನಿರಂಜನ್ ಅವರು ಕೈ ಮುಗಿದು ಬೇಡಿಕೊಂಡಿದ್ದರು.
ಆದರೂ ಉದ್ರಿಕ್ತರು ಪೊಲೀಸ್ ಠಾಣೆಯ ವಾಹನದ ಮೇಲೆ ಕಲ್ಲು ತೂರಿದ್ದರು. ಪೊಲೀಸ್ ಠಾಣೆ ಧ್ವಂಸ ಮಾಡಿ 11 ಪೊಲೀಸರಿಗೆ ಗಾಯ ಮಾಡಿದ್ರೂ ಉದ್ರಿಕ್ತರ ಮೇಲೆ ಕ್ರಮ ಕೈಗೊಂಡಿಲ್ಲ, ಘಟನೆ ತಡೆಯಲು ಉದ್ರಿಕ್ತರ ಮುಂದೆ ಕೈ ಮುಗಿದು ಬೇಡಿದ DYSP ಪ್ರಶಾಂತ್ ಮುನ್ನಾಳಿ, ಸಿಪಿಐ ನಿರಂಜನ್ ಅವರನ್ನು ಸರ್ಕಾರ ಸಸ್ಪೆಂಡ್ ಮಾಡಿದೆ. ಹಾಗಾಗಿ ಸರ್ಕಾರದ ನಡೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ : GPS ಮೂಲಕ ಸಿಲಿಕಾನ್ ಸಿಟಿಯಲ್ಲಿ ಪತ್ತೆಯಾಯ್ತು ಫಾರಿನ್ ಮಗು : ಇದು ಪ್ಯಾರಿಸ್ TO ಬೆಂಗಳೂರು ರೋಚಕ ಸ್ಟೋರಿ..!